ಕೂಗು ನಿಮ್ಮದು ಧ್ವನಿ ನಮ್ಮದು

ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಆರ್ ಅಶೋಕ ವಿರುದ್ಧ ಬಿಜೆಪಿ ಕಾರ್ಯಕರ್ತರಲ್ಲಿ ಹೆಚ್ಚಿದ ಅಸಮಾಧಾನ, ಬದಲಾಯಿಸುವಂತೆ ಒತ್ತಡ

ಮಂಡ್ಯ: ರಾಜ್ಯ ಕಂದಾಯ ಮತ್ತು ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಆರ್ ಅಶೋಕ ಮತ್ತು ಪಕ್ಷದ ಜಿಲ್ಲಾ ಕಾರ್ಯಕರ್ತರ ನಡುವೆ ಅದ್ಯಾವ ಕಾರಣಕ್ಕೆ ಮುನಿಸು ಹುಟ್ಟಿದೆಯೋ ಗೊತ್ತಿಲ್ಲ ಮಾರಾಯ್ರೇ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಶೋಕ ವಿರುದ್ಧ ಕಾರ್ಯಕರ್ತರ ಅಸಮಾಧಾನ, ಸಿಡಿಮಿಡಿ ಹೆಚ್ಚಾಗಿ ಅವರನ್ನು ಬದಲಾಯಿಸುವಂತೆ ಒತ್ತಡ ಹೇರಲಾಗುತ್ತಿದೆ.

ಬೆಂಗಳೂರು-ಮೈಸೂರು ಹೆದ್ದಾರಿಯ ಫ್ಲೈಓವರ್ ಮತ್ತು ಬೇರೆ ಗೋಡೆಗಳ ಮೇಲೆ ಗೋ ಬ್ಯಾಕ್ ಅಶೋಕ ಅಂತ ಬರೆದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಹಾಗೆ ನೋಡಿದರೆ, ಅಶೋಕ ಯಾವತ್ತೂ ಮಂಡ್ಯ ಜಿಲ್ಲೆಗೆ ಕನೆಕ್ಟ್ ಆದವರಲ್ಲ. ಮಂಡ್ಯದಲ್ಲಿ ಅವರು ಖಂಡಿತ ಜನಪ್ರಿಯ ನಾಯಕರಲ್ಲ. ಹಳೇ ಮೈಸೂರು ಭಾಗದ ಪ್ರತಿನಿಧಿಯೊಬ್ಬರಿಗೆ ಮಂಡ್ಯ ಜಿಲ್ಲೆಯ ಉಸ್ತುವಾರಿ ನೀಡಿದ್ದರೆ ಚೆನ್ನಾಗಿರುತಿತ್ತೇನೋ?

error: Content is protected !!