ಕೂಗು ನಿಮ್ಮದು ಧ್ವನಿ ನಮ್ಮದು

ಹುಡುಗಿಯ ಜೊತೆ ನಾಯಿ ಆಟವಾಡಿದ್ದಕ್ಕೆ ನಾಯಿ ಮರಿಯನ್ನೇ ಕೊಂದ ಪಾಪಿ ವಾರ್ಡನ್

ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಬಂಟಕಲ್ನಲ್ಲಿ ಪಾಪಿ ವಾರ್ಡನ್ ರಾಜೇಶ್ ಎಂಬುವವನು ಹುಡುಗಿಯ ಜೊತೆ ನಾಯಿ ಆಟವಾಡಿದ್ದಕ್ಕೆ ನಾಯಿ ಮರಿಯನ್ನೇ ಕೊಂದಿದ್ದಾನೆ. ಬಂಟಕಲ್ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಾರ್ಡನ್ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಕ್ರೋಶ ವ್ಯಕ್ತವಾಗಿದ್ದು, ಮಂಜುಳಾ ಕರ್ಕೇರ ಎಂಬುವವರಿಂದ ಶಿರ್ವ ಠಾಣೆಯಲ್ಲಿ ವಾರ್ಡನ್ ಮೇಲೆ ಪ್ರಕರಣ ದಾಖಲಾಗಿದೆ.

error: Content is protected !!