ಬೆಂಗಳೂರು: ನಗರದಲ್ಲಿ ಮುಂದುವರೆದ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ, ಇಂದು(ಜ.27) ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಐದು ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ. ಪರಿಶೀಲನೆ ವೇಳೆ ನಕಲಿ ಅಂಕಪಟ್ಟಿ ದಂಧೆ ಮಾಡುತ್ತಿರುವುದು ಪತ್ತೆಯಾಗಿದ್ದು, 15 ವಿವಿಗಳು ಹಾಗೂ ಬೋರ್ಡ್ಗಳ ನಕಲಿ ಅಂಕಪಟ್ಟಿಗಳ ಬರೋಬ್ಬರಿ 6,800 ನಕಲಿ ಮಾರ್ಕ್ಸ್ ಕಾರ್ಡ್ಗಳನ್ನ ಸೇರಿ ಕೃತ್ಯಕ್ಕೆ ಬಳಸಿದ್ದ ಟೆಕ್ನಿಕಲ್ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಆರೋಪಿ ವಿಕಾಸ್ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯ, ಕುವೆಂಪು ಯೂನಿವರ್ಸಿಟಿ, ಜೈನ್ ವಿಹಾರ್ ಯೂನಿವರ್ಸಿಟಿ ಸೇರಿದಂತೆ 15 ಕ್ಕೂ ಹೆಚ್ಚು ಯೂನಿವರ್ಸಿಟಿಗಳ ನಕಲಿ ಮಾರ್ಕ್ಸ್ ಕಾರ್ಡ್ ತಯಾರಿ ಮಾಡಿಕೊಡುತ್ತಿದ್ದ ವ್ಯಕ್ತಿಯನ್ನ ಇದೀಗ ಬಂಧಿಸಿದ್ದಾರೆ. ಈ ಹಿಂದೆ ಕೂಡ ಇಂತಹ ಅನೇಕ ನಕಲಿ ಮಾರ್ಕ್ಸ್ ಜಾಲವನ್ನ ಸಿಸಿಬಿ ಪೊಲೀಸರು ಭೇಧಿಸಿದ್ದರು. ಆದರೂ ಈವರೆಗೆ ಇಂತಹ ಕೃತ್ಯಗಳು ಹೊರಬರುತ್ತಲೇ ಇದೆ.
545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ; ಆರ್.ಡಿ.ಪಾಟೀಲ್ ಬೆಂಬಲಿಗರಿಂದ ಮತ್ತೊಂದು ಆಡಿಯೋ ರಿಲೀಸ್
ಕಲಬುರಗಿ: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧಿಸಿದಂತೆ ಅಕ್ರಮದ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಇಂದ ಮತ್ತೊಂದು ಆಡಿಯೋ ರಿಲೀಸ್ ಆಗಿದೆ. ಪಿಎಸ್ಐ ನೇಮಕಾತಿ ಅಕ್ರಮದ ತನಿಖೆ ನಡೆಸುತ್ತಿರುವ ಮೂರು ಜನ ಸಿಐಡಿ ಡಿ ವೈ ಎಸ್ ಪಿ ಗಳು ಪ್ರಕಾಶ್ ರಾಠೋಡ್ , ವಿರೇಂದ್ರ , ಶಂಕರಗೌಡ ಈ ಮೂರು ಜನ ಅಧಿಕಾರಿಗಳ ಹಣದ ಪಾಲಿನ ಬಗ್ಗೆ ಮಾತಾಡಿರುವ ಆಡಿಯೋ ಇದೀಗ ವೈರಲ್ ಆಗಿದೆ.
ಆಡಿಯೋದಲ್ಲಿ ಎನಿದೆ?
ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯಶಿಕ್ಷಕ ಕಾಶಿನಾಥ್ ಹಾಗೂ ಸಿಐಡಿ DySP ಶಂಕರಗೌಡ ಮಾತಾಡಿದ್ದಾರೆನ್ನುವ ಈ ಆಡಿಯೋದಲ್ಲಿ ಇಬ್ಬರ ಸಂಭಾಷಣೆಯ ವೇಳೆ ಮತ್ತಿಬ್ಬರು ತನಿಖಾಧಿಕಾರಿಗಳಾದ ಪ್ರಕಾಶ್ ರಾಠೋಡ್ ಮತ್ತು ವೀರೇಂದ್ರ ಹೆಸರು ಉಲ್ಲೇಖವಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಮೂವರು ಸಿಐಡಿ ಡಿವೈಎಸ್ಪಿಗಳು ಇವರಾಗಿದ್ದು ಹಣದ ಪಾಲಿನ ಬಗ್ಗೆ ಈ ಆಡಿಯೋದಲ್ಲಿ ಮಾತನಾಡಿದ್ದಾರೆ.