ಕೂಗು ನಿಮ್ಮದು ಧ್ವನಿ ನಮ್ಮದು

ಕಳಸಾರೋಹಣ ಕಾರ್ಯಕ್ರಮಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾವಿನಕಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ವಿಠ್ಠಲ ರುಕ್ಮೀಣಿ ಮಂದಿರದ ಕಳಸಾರೋಹಣದ ಕಾರ್ಯಕ್ರಮವನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಉದ್ಘಾಟಿಸಿ ಚಾಲನೆಯನ್ನು ನೀಡಿದರು.

ಈ ಸಮಯದಲ್ಲಿ ವಿವಿಧ ಮಠಾಧೀಶರು, ಗ್ರಾಮದ ಹಿರಿಯರು, ಉಳವಪ್ಪ ಮಲ್ಲಣ್ಣವರ, ಶಂಕರಗೌಡ ಪಾಟೀಲ, ಶ್ರೀಕಾಂತ, ರಾಮನಗೌಡ ಪಾಟೀಲ, ಚನ್ನಪ್ಪ ಹಿರೇಹೊಳಿ, ದೇವಸ್ಥಾನದ ಟ್ರಸ್ಟ್ ಕಮೀಟಿಯವರು, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

error: Content is protected !!