ಕೂಗು ನಿಮ್ಮದು ಧ್ವನಿ ನಮ್ಮದು

ಕೋವಿಡ್ ಸಂದರ್ಭದಲ್ಲಿ ಹಗರಣ ಆರೋಪ, ಸಾಬೀತಾದ್ರೆ ನನ್ನನ್ನು ಪಬ್ಲಿಕ್ನಲ್ಲಿ ನೇಣು ಹಾಕಿ- ಸಚಿವ ಸುಧಾಕರ್

ಕೋಲಾರ: ಕೋವಿಡ್ ಸಂದರ್ಭದಲ್ಲಿ ಏನಾದರೂ ಹಗರಣ ಮಾಡಿರುವುದು ಸಾಬೀತಾದರೆ ನನ್ನನ್ನು ಪಬ್ಲಿಕ್ನಲ್ಲಿ ನೇಣು ಹಾಕಿ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಖಡಕ್ ಆಗಿ ಹೇಳಿದರು. ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಸಿದ್ದರಾಮಯ್ಯ ಅವರಿಗೆ ನನ್ನ ಬಗ್ಗೆ ಗೊತ್ತಿದೆ, ಹಣಕ್ಕಾಗಿ ನಾವು ಬಿಜೆಪಿ ಹೋಗಿಲ್ಲ ಅನ್ನೋದು. ಜೆಡಿಎಸ್ ಜೊತೆಗಿನ ಅನೈತಿಕ ಸಂಬಂಧಕ್ಕೆ ಬೇಸತ್ತು ಬಿಜೆಪಿಗೆ ಹೋಗಿದ್ದು.

ಈಗ ರಾಜಕೀಯಕ್ಕಾಗಿ ಸಿದ್ದರಾಮಯ್ಯ ಆರೋಪ ಮಾಡ್ತಾರೆ. ಆರೋಗ್ಯ ಇಲಾಖೆಯ ಖರ್ಚು ವೆಚ್ಚದ ಬಗ್ಗೆ ಲೆಕ್ಕ ಕೊಡುತ್ತೇವೆ. ಸಿಎಜಿ ವರದಿ ಏನು ಉಲ್ಲೇಖ ಮಾಡಿದೆ ಅನ್ನೋದನ್ನು ನಾಳೆ ಹೇಳುತ್ತೇನೆ. 2013ರಿಂದ 2018ರವರೆಗೆ 35 ಸಾವಿರ ಕೋಟಿ ಹಣ ವ್ಯತ್ಯಾಸ ಆಗಿದೆ ಎಂದು ಮಾಹಿತಿ ನೀಡಿದರು.
ಕೋವಿಡ್ ವೇಳೆ 3 ಸಾವಿರ ಕೋಟಿ ಖರ್ಚು ಮಾಡಿಯೇ ಇಲ್ಲ.

ಈ ಬಗ್ಗೆ ನಾನು ಶ್ವೇತಪತ್ರದಲ್ಲಿ ಬರೆದುಕೊಡಲು ನಾನು ಸಿದ್ಧ. ಸದನದಲ್ಲಿ ಇದರ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡಲಾಯ್ತು. ಆದರೆ ಸಿದ್ದರಾಮಯ್ಯ ಪಲಾಯನ ಮಾಡಿದರು ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸಿದ್ದರಾಮಯ್ಯ ಅವರಿಗೆ ಕೋಲಾರ ಬಹಳ ಕಷ್ಟ
ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಸಿದ್ದು, ಕೋಲಾರ ಅವರಿಗೆ ಬಹಳ ಕಷ್ಟ, ಇಲ್ಲಿ ಕೆಲವು ನಾಯಕರುಗಳು ಸ್ಥಳೀಯವಾಗಿ ಸೋಲುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನ ಅಡ್ಡಿಟ್ಟುಕೊಂಡು ಗೆಲ್ಲಬೇಕೆಂದು ಇಲ್ಲಿ ಪ್ರಯತ್ನಿಸುತ್ತಿದ್ದಾರೆ.

ಹೀಗಾಗಿ ಅವರಿಗೆ ಖೆಡ್ಡಾ ತೋಡುತ್ತಿದ್ದಾರೆ. ಬಹುಶ ಅವರು ಕೊನೆಗೆ ಇಲ್ಲಿ ಸ್ಪರ್ಧೆ ಮಾಡುವುದಿಲ್ಲ‌. ಬೌಲಿಂಗ್ ಕೋಲಾರದ ಕಡೆ ಹಾಕಿ, ರನ್ ವರಣ ಕಡೆ ಓಡುತ್ತಾರೆ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯನವರಷ್ಟು ನಾವು ಬುದ್ಧಿವಂತರಲ್ಲ ಮಾಜಿ ಸಿಎಂ ಸಿದ್ದರಾಮಯ್ಯನವರಷ್ಟು ನಾವು ಬುದ್ಧಿವಂತರಲ್ಲ. ಆದರೆ ಅಷ್ಟೋ ಇಷ್ಟು ವಿದ್ಯಾವಂತರಾಗಿದ್ದೇವೆ. ಸಿಎಜಿ ವರದಿ ಓದಿಲ್ಲ ಎಂದಿದ್ದಕ್ಕೆ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು. ಹಾಗಾದ್ರೆ ರಾಹುಲ್‌ ಗಾಂಧಿ ಹೇಳಿದಂತೆ ಇವರು ಹೇಳ್ತಿದ್ದಾರಾ ಎಂದು ಪ್ರಶ್ನಿಸಿದರು. ಇಡೀ ಜೀವನ ಕಾಂಗ್ರೆಸ್‌ ಪಕ್ಷದವರಿಗೆ ಬೈದುಕೊಂಡು ಬಂದರು. ಈ ಹಿಂದೆ ಜೆಡಿಎಸ್ನಲ್ಲಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗಿದ್ರೆ ಯಾಕೆ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದರು ಎಂದು ವಾಗ್ದಾಳಿ ಮಾಡಿದರು.

error: Content is protected !!