ಸುಂದರವಾಗಿರಬೇಕು ಹಾಗೂ ಹೊಳೆಯುವ ತ್ವಚೆ ಪಡೆಯಬೇಕು ಎಂಬುದು ಪ್ರತಿ ಮಹಿಳೆಯ ಕನಸು. ಆದರೆ ವಯಸ್ಸಾದಂತೆ ತ್ವಚೆ ಮಂದವಾಗುತ್ತದೆ. ವಯಸ್ಸಾಗುವಿಕೆ ಚಿಹ್ನೆಗಳು ಗೋಚರಿಸುತ್ತವೆ. ಕೆಲವು ಮನೆಮದ್ದುಗಳನ್ನು ಬಳಸಿ ಮುಖದ ಅಂದ ಮತ್ತು ಹೊಳಪು ಕಾಪಾಡಿ.
ತುಂಬಾ ದುಡ್ಡು ಖರ್ಚು ಮಾಡದೇ, ಮನೆಯಲ್ಲೇ ಇರುವ ವಸ್ತುಗಳಿಂದ ತ್ವಚೆಯ ಆರೈಕೆ ಮಾಡುವುದು ಉತ್ತಮವಾಗಿದೆ. ಇದು ತ್ವಚೆಯನ್ನು ನೈಸರ್ಗಿಕವಾಗಿ ರಕ್ಷಣೆ ನೀಡುತ್ತದೆ. ತ್ವಚೆಯ ಕ್ಲೆನ್ಸಿಂಗ್ ಹಾಗೂ ಕಲೆಯನ್ನು ತೆಗೆದು ಹಾಕಿ ತ್ವಚೆಗೆ ಉತ್ತಮ ಹೊಳಪು ನೀಡುತ್ತದೆ. ನೀವೂ ಸಹ ಮನೆಯಲ್ಲಿ ಹೆಚ್ಚು ಖರ್ಚಿಲ್ಲದೇ ಮನೆಮದ್ದುಗಳ ಮೂಲಕ ತ್ವಚೆಯ ಮತ್ತು ಕೂದಲ ಆರೈಕೆ ಮಾಡಲು ಬಯಸಿದರೆ ಇಲ್ಲಿ ಕೆಲವು ಸಿಂಪಲ್ ಟಿಪ್ಸ್ ಹೇಳಲಾಗಿದೆ. ನೀವು ಅವುಗಳನ್ನು ಪ್ರಯತ್ನಿಸಬಹುದು. ಸುಂದರವಾಗಿರಬೇಕು ಹಾಗೂ ಹೊಳೆಯುವ ತ್ವಚೆ ಪಡೆಯಬೇಕು ಎಂಬುದು ಪ್ರತಿ ಮಹಿಳೆಯ ಕನಸು. ಆದರೆ ವಯಸ್ಸಾದಂತೆ ತ್ವಚೆ ಮಂದವಾಗುತ್ತದೆ. ವಯಸ್ಸಾಗುವಿಕೆ ಚಿಹ್ನೆಗಳು ಗೋಚರಿಸುತ್ತವೆ.
ಮುಖದ ಮೇಲಿನ ಕಲೆ, ಗುಳ್ಳೆ, ಕೂದಲು ಮತ್ತು ಮುಖದಲ್ಲಿ ಸುಕ್ಕು ಹಾಗೂ ನೆರಿಗೆ, ಒಣ ತ್ವಚೆ ಸಮಸ್ಯೆ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗುತ್ತದೆ. ಹೀಗಾಗಿ ಜನರು ಸಾಕಷ್ಟು ದುಡ್ಡು ಖರ್ಚು ಮಾಡಿ ತ್ವಚೆಯ ಅಂದ ಕಾಪಾಡಲು ಪ್ರಯತ್ನ ಮಾಡ್ತಾರೆ.
ನೈಸರ್ಗಿಕವಾಗಿ ತ್ವಚೆಯ ಅಂದ ಕಾಪಾಡಲು ಮನೆಮದ್ದುಗಳು
ಆದರೆ ಅದು ಫಲಿತಾಂಶ ನೀಡದೇ ಹೋದಾಗ ಶಪಿಸುತ್ತಾ ಇದ್ದು ಬಿಡ್ತಾರೆ. ಹಾಗೇ ಮಾಡುವ ಬದಲು ಕೆಲವು ಮನೆಮದ್ದುಗಳನ್ನು ಬಳಸಿ ಮುಖದ ಅಂದ ಮತ್ತು ಹೊಳಪು ಕಾಪಾಡಿ. ಇದಕ್ಕಾಗಿ ಸೌಂದರ್ಯ ತಜ್ಞೆ ಪಾಯಲ್ ಸಿನ್ಹಾ ಕೆಲವು ಸುಲಭ ಮತ್ತು ಪರಿಸರ ಸ್ನೇಹಿ ಸೌಂದರ್ಯ ಸಲಹೆಗಳ ಬಗ್ಗೆ ಹೇಳಿದ್ದಾರೆ
ಟ್ಯಾನಿಂಗ್ ಸಮಸ್ಯೆ ತೊಡೆದು ಹಾಕಲು ಟೊಮೆಟೊ ಬಳಸಿ
ಟೊಮೇಟೊ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಅನೇಕ ರೀತಿಯ ರೋಗಗಳಿಂದ ಇದು ದೇಹವನ್ನು ರಕ್ಷಿಸುತ್ತದೆ. ತ್ವಚೆ ಹೊಳೆಯುವಂತೆ ಮತ್ತು ಸುಂದರವಾಗಿಸಲು ಬಟ್ಟಲಿನಲ್ಲಿ ಮೊಸರು ಮತ್ತು ಅರ್ಧ ಟೊಮೆಟೊ ಮ್ಯಾಶ್ ಮಾಡಿ, ಮೊಣಕೈಗಳು ಮತ್ತು ಹಿಂಭಾಗದ ಕುತ್ತಿಗೆ ಸೇರಿದಂತೆ ಟ್ಯಾನಿಂಗ್ ಇರುವ ದೇಹದ ಭಾಗಗಳಿಗೆ ಅನ್ವಯಿಸಿ, ಸ್ವಲ್ಪ ಸಮಯದ ನಂತರ ತೊಳೆಯಿರಿ.
ಬಾಳೆಹಣ್ಣು ಫೇಸ್ ಮಾಸ್ಕ್
ಬಾಳೆಹಣ್ಣಿನ ಫೇಸ್ ಪ್ಯಾಕ್ ತ್ವಚೆಯ ಆರೈಕೆಗೆ ಸಹಕಾರಿ. ಬಾಳೆಹಣ್ಣನ ಸಿಪ್ಪೆ ತೆಗೆದು ಮ್ಯಾಶ್ ಮಾಡಿ, ಎರಡು ಚಮಚ ಜೇನುತುಪ್ಪ, ಒಂದು ಚಮಚ ಅಲೋವೆರಾ ಜೆಲ್, ಅರ್ಧ ಚಮಚ ಬಾದಾಮಿ ಎಣ್ಣೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಮುಖ ಮತ್ತು ಕುತ್ತಿಗೆಗೆ ಹಚ್ಚಿ.
ಮುಖದ ಜೊತೆಗೆ ಕುತ್ತಿಗೆಗೆ ಅನ್ವಯಿಸಿ. ರೋಸ್ ವಾಟರ್ ಸೇರಿಸಬಹುದು. ಈಗ ಲಘು ಕೈಗಳಿಂದ ಮುಖವನ್ನು ಕೆಲವು ಸೆಕೆಂಡುಗಳ ಕಾಲ ಸ್ಕ್ರಬ್ ಮಾಡಿ ಮತ್ತು 10 ನಿಮಿಷದ ನಂತರ ಸಾಮಾನ್ಯ ನೀರಿನಿಂದ ಮುಖವನ್ನು ತೊಳೆಯಿರಿ.
ಮೇಕಪ್ ಮತ್ತು ತಲೆ ಬಾಚಲು, ಪ್ಲಾಸ್ಟಿಕ್ ಬ್ರಷ್, ಬಾಚಣಿಗೆ ಬದಲು ಬಿದಿರು ಮತ್ತು ಮರದ ಬಾಚಣಿಗೆ ಬಳಸಿ. ಇದು ಕೂದಲ ಆರೋಗ್ಯಕ್ಕೆ ಉತ್ತಮ. ಕೂದಲು ತುಂಬಾ ಸುಂದರವಾಗಿ ಮತ್ತು ವಿಶಿಷ್ಟವಾಗಿ ಕಾಣುತ್ತದೆ. ಹೇರ್ ಸ್ಟೈಲಿಂಗ್ ಗೆ ಮರದ ಬಾಚಣಿಗೆ ಬಳಸಿದ್ರೆ ಕೂದಲು ಆರೋಗ್ಯ, ಮತ್ತು ತುದಿ ಸೀಳುವಿಕೆ ನಿವಾರಣೆಯಾಗುತ್ತದೆ.
ಮೇಕಪ್ ತೆಗೆಯಲು ತೆಂಗಿನ ಎಣ್ಣೆ ಬಳಸಿ
ಮೇಕಪ್ ತೆಗೆಯಲು ಕ್ಲೆನ್ಸಿಂಗ್ ಹಾಲು ಅಥವಾ ಹಲವು ಬಗೆಯ ಎಣ್ಣೆಗಳ ಬಳಕೆ ಮಾಡುವ ಬದಲು ತೆಂಗಿನೆಣ್ಣೆ ಬಳಸಿ. ತೆಂಗಿನ ಎಣ್ಣೆಯು ತ್ವಚೆಗೆ ಅತ್ಯುತ್ತಮ ಆಯ್ಕೆಯಾಗಿದೆ. ಎರಡೂ ಅಂಗೈಗಳಲ್ಲಿ ಎಣ್ಣೆ ತೆಗೆದುಕೊಳ್ಳಿ. ಮುಖದ ಮೇಲೆ ಎಣ್ಣೆ ಅನ್ವಯಿಸಿ. ಮೇಕಪ್ ನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತದೆ. ನಂತರ ಮುಖದ ಮೇಲೆ ಫೇಸ್ ವಾಶ್ ಅನ್ನು ಅನ್ವಯಿಸಿ ನೀರಿನಿಂದ ಮುಖ ತೊಳೆಯಿರಿ.