ಕೂಗು ನಿಮ್ಮದು ಧ್ವನಿ ನಮ್ಮದು

ಉತ್ತಮ ಜೀರ್ಣಕ್ರಿಯಗಾಗಿ ಮನೆಮದ್ದುಗಳು

ನಮ್ಮ ಹೊಟ್ಟೆಯು ಕೆಟ್ಟಾಗ ಹೇಗಿರುತ್ತದೆ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ. ಅಜೀರ್ಣವು ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ನಾವು ಏನನ್ನೂ ಸೇವಿಸದಿದ್ದರೂ ಸಹ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಅಜೀರ್ಣದ ಸಮಸ್ಯೆ ಕಾಣಿಸಿಕೊಂಡಾಗ ತಕ್ಷಣವೇ ಚಿಕಿತ್ಸೆಯನ್ನು ಪಡೆದುಕೊಳ್ಳದಿದ್ದರೆ ಅದು ವಿಪರೀತ ಅಸ್ವಸ್ಥತೆಯನ್ನು ಉಂಟುಮಾಡಬಹುದಾಗಿದೆ. ಆದ್ದರಿಂದ ನಾವು ಯಾವುದೇ ಅಡ್ಡಪರಿಣಾಮಗಳಿಲ್ಲದೇ ನಮ್ಮ ಹೊಟ್ಟೆಯನ್ನು ಶಾಂತಗೊಳಿಸಲು ಅಜೀರ್ಣದ ಸಮಸ್ಯೆಗೆ ನೈಸರ್ಗಿಕವಾಗಿ ಮನೆಯಲ್ಲಿಯೇ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದ್ದು ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ.

  1. ನೆಲ್ಲಿಕಾಯಿ – ಇದು ಹಲವಾರು ಗುಣಲಕ್ಷಣಗಳನ್ನು ಹೊಂದಿದ್ದು ಮೂತ್ರವರ್ಧಕ, ಬ್ಯಾಕ್ಟೀರಿಯ ವಿರೋಧಿ, ಉರಿಯೂತ ನಿರೋಧಕ, ಆಂಟಿವೈರಲ್ ಹಾಗೂ ಕಾಮೋತ್ತೇಜಕ ಪ್ರಮುಖವಾದುದಾಗಿದೆ. ಈ ಗುಣಲಕ್ಷಣಗಳು ನಿಮ್ಮ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಮನೆಯಲ್ಲಿ ನೈಸರ್ಗಿಕವಾಗಿ ಸಿಗುವ ಔಷಧವಾಗಿದ್ದು ಇದನ್ನು ಬಳಸುವ ಮೊದಲು ನಿಮಗೆ ಯಾವುದೇ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ.
  2. ಸೋಂಪು – ಇದು ಫೆನ್ಚೋನ್ ಮತ್ತು ಎಸ್ಟ್ರಾಗೋಲ್ ಸೇರಿದಂತೆ ಕೆಲವು ತೈಲ ಸಂಯುಕ್ತಗಳನ್ನು ಹೊಂದಿದ್ದು ಅದು ಕರುಳಿನಿಂದ ಗ್ಯಾಸ್ ಅನ್ನು ಹೊರಹಾಕಲು ಅಥವಾ ತಡೆಗಟ್ಟಲು ಸಹಾಯಕವಾಗಿದೆ. ನೀವು ಇದನ್ನು ಚಹಾದಲ್ಲಿ ಹಾಗೂ ನೀರಿನಲ್ಲಿ ಸೇರಿಸಿ ಸೇವಿಸಬಹುದಾಗಿದೆ.
  3. ದನಿಯಾ – ಕೊತ್ತಂಬರಿ ಅಥವಾ ದನಿಯಾ ಬೀಜಗಳು ತಮ್ಮ ಆಂಟಿಸ್ಪಾಸ್ಮೊಡಿಕ್ ಮತ್ತು ಉರಿಯೂತ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಅವುಗಳು ನಿಮ್ಮ ಹೊಟ್ಟೆ ಕೆಟ್ಟಿದ್ದರೆ ಮತ್ತು ಅಜೀರ್ಣದ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಯುರಾಂಡ್ರೋಲ್ ಎಂಬ ಸಾರಭೂತ ತೈಲವನ್ನು ಒಳಗೊಂಡಿದ್ದು ಅದು ಯಕೃತ್ತನ್ನು ಸುಸ್ಥಿತಿಯಲ್ಲಿರಿಸಿ ಹಸಿವನ್ನು ಹೆಚ್ಚಿಸುತ್ತದೆ ಮತ್ತು ಅಜೀರ್ಣವನ್ನು ನಿವಾರಿಸುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಒಂದು ವಾರ ದನಿಯಾ ಬೀಜಗಳನ್ನು ನೀರಿನಲ್ಲಿ ನೆನೆಸಿ ಕುಡಿಯಿರಿ.
  4. ಶುಂಠಿ – ಶುಂಠಿಯು ದೀರ್ಘಕಾಲದವರೆಗೆ ಅಜೀರ್ಣದ ಸಮಸ್ಯೆಯನ್ನು ಗುಣಪಡಿಸುತ್ತದೆ ಮತ್ತು ನಮ್ಮ ಭಾರತೀಯ ಕುಟುಂಬಗಳಲ್ಲಿ ಇದು ಅಜೀರ್ಣದ ಸಮಸ್ಯೆಗೆ ಬಹಳ ಜನಪ್ರಿಯವಾದ ಔಷಧವಾಗಿದೆ. ಸಾಮಾನ್ಯವಾಗಿ ದಿನನಿತ್ಯದ ಊಟದಲ್ಲಿ ಶುಂಠಿಯನ್ನು ಬಳಸುತ್ತಾರೆ. ಇದು ಅಜೀರ್ಣ ಮತ್ತು ವಾಕರಿಕೆಗಳ ನಿವಾರಣೆಗೆ ಹೆಸರುವಾಸಿಯಾಗಿರುವ ಜೀಂಜೊರಲ್‌ಗಳನ್ನು ಒಳಗೊಂಡಿದೆ. ಇದರ ಫಿನೋಲಿಕ್ ಸಂಯುಕ್ತಗಳು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಜಠರಗರುಳಿನ ಕಿರಿಕಿರಿಯನ್ನು ನಿವಾರಿಸುತ್ತದೆ ಹಾಗೂ ಉರಿಯೂತವನ್ನೂ ಸಹ ನಿವಾರಿಸುತ್ತದೆ.
  5. ಓಂಕಾಳು – ಓಂಕಾಳು ಅಥವಾ ಅಜ್ವಾನ್ ಅಜೀರ್ಣ, ಆಮ್ಲೀಯತೆ, ವಾಯು ಮತ್ತು ಇತರ ಸಮಸ್ಯೆಗಳು ಸೇರಿದಂತೆ ವಿವಿಧ ಜೀರ್ಣಾಂಗ ಅಸ್ವಸ್ಥತೆಗಳನ್ನು ಗುಣಪಡಿಸುತ್ತದೆ. ಗ್ಯಾಸ್ಟ್ರಿಕ್ ರಸವನ್ನು ಪೂರೈಸುವುದರ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುವಲ್ಲಿ ಓಂಕಾಳಿನ ಸಕ್ರಿಯ ಕಿಣ್ವಗಳು ಸಹಾಯ ಮಾಡುತ್ತವೆ. ಸುಮಾರು ಒಂದು ವಾರದವರೆಗೆ ನೀವು ಓಂಕಾಳನ್ನು ನೀರಿನಲ್ಲಿ ನೆನೆಸಿ ಕುಡಿದು ಪರಿಣಾಮವನ್ನು ನೋಡಬಹುದಾಗಿದೆ.
  6. ಅಡುಗೆ ಸೋಡಾ – ಹೆಚ್ಚುವರಿ ಆಮ್ಲ ಮಟ್ಟವು ಅಜೀರ್ಣ ಸಮಸ್ಯೆಗೆ ಕಾರಣವಾಗಿದೆ. ಬೀನ್ಸ್, ಎಲೆಕೋಸು, ಹಾಲಿನ ಉತ್ಪನ್ನಗಳು ಮತ್ತು ಈರುಳ್ಳಿಯಂತರ ಕೆಲವು ಆಹಾರಗಳು ಅಜೀರ್ಣಕ್ಕೆ ಕಾರಣವಾಗುತ್ತವೆ. ಬೇಕಿಂಗ್ ಸೋಡಾದಲ್ಲಿ ಸೋಡಿಯಂ ಬೈಕಾರ್ಬೋನೇಟ್ ಇದೆ, ಇದು ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಸೋಡಿಯಂ ಬೈಕಾರ್ಬೋನೇಟ್‌ಗಳು ಹೈಡ್ರೋಕ್ಲೋರಿಕ್ ಆಮ್ಲದ ಹೆಚ್ಚಿನ ರಚನೆಯೊಂದಿಗೆ ಪ್ರತಿಕ್ರಿಯಿಸುತ್ತವೆ. ಇದು ಎದೆಯುರಿ ಮತ್ತು ಅಜೀರ್ಣದ ಸಮಸ್ಯೆಯನ್ನು ನಿವಾರಿಸುತ್ತದೆ. ನೀವು ಬೇಕಿಂಗ್ ಸೋಡಾವನ್ನು ನೀರಿನೊಂದಿಗೆ ಅಥವಾ ಜೇನುತುಪ್ಪದೊಂದಿಗೆ ಮತ್ತು ನಿಂಬೆಹಣ್ಣಿನೊಂದಿಗೆ ಸೇವಿಸಬಹುದಾಗಿದೆ.
  7. ಆಪಲ್ ಸೈಡರ್ ವಿನೆಗರ್ – ಇದು ಅತ್ಯಂತ ಪರಿಣಾಮಕಾರಿ ಪರಿಹಾರವಾಗಿದೆ. ನೀವು ಜೀರ್ಣಕ್ರಿಯೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಇದು ನಿಮಗೆ ಉತ್ತಮ ಔಷಧವಾಗಿದೆ. ಇದು ಮೆಗ್ನೀಷಿಯಂ, ಫಾಸ್ಪರಸ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ಇತರ ಖನಿಜಗಳ ಅತ್ಯುತ್ತಮ ಮೂಲವಾಗಿದೆ. ವಿನೆಗರ್ ಆಮ್ಲೀಯವಾಗಿದ್ದು ಅದು ಕೊಬ್ಬುಗಳನ್ನು ಕರಗಿಸುತ್ತದೆ ಮತ್ತು ಆಮ್ಲದ ಹಿಮ್ಮುಖವನ್ನು ತಡೆಯುತ್ತದೆ. ನೀವು ನೀರು ಅಥವಾ ಜೇನುತುಪ್ಪದೊಂದಿಗೆ ಆಪಲ್ ಸೈಡರ್ ವಿನೆಗರ್ ಅನ್ನು ಸೇವಿಸಬಹುದು.
error: Content is protected !!