ಕೂಗು ನಿಮ್ಮದು ಧ್ವನಿ ನಮ್ಮದು

ಕಾಂತಾರ ಸಿನಿಮಾದ ನಾಯಕಿ ಸಪ್ತಮಿ ಗೌಡ ಲುಕ್ ಟೆಸ್ಟ್ ಪೋಟೋ ವೈರಲ್

ಕನ್ನಡದ ಕಾಂತಾರ ಸಿನಿಮಾ ಹಿಟ್ ಆಗಿದೆ. ಸೂಪರ್ ಹಿಟ್ ಆಗಿ ಡಿವೈನ್ ಕೂಡ ಆಗಿದೆ. ದಾಖಲೆ ಮೇಲೆ ದಾಖಲೆ ಮಾಡಿ ಇತಿಹಾಸ ಸೃಷ್ಟಿ ಮಾಡಿ ಬಿಟ್ಟಿದೆ. ಇಂತಹ ಈ ಚಿತ್ರದ ಎಲ್ಲ ವಿಷಯಗಳು ಈಗ ಅಷ್ಟೆ ಕುತೂಹಲ ಕೆರಳಿಸುತ್ತವೆ. ಸೂಪರ್ ಹಿಟ್ ಆದ ಸಿನಿಮಾದ ಮುಂಚೆ ಸಿನಿಮಾ ತಂಡ ಒಂದು ಕೆಲಸ ಮಾಡಿದೆ. ಸಾಮಾನ್ಯವಾಗಿ ಎಲ್ಲ ಸಿನಿಮಾಗಳ ಆರಂಭದಲ್ಲೂ ಇಂತಹ ಒಂದು ಟೆಸ್ಟ್ ನಡೆಯುತ್ತದೆ. ಅದನ್ನ ಲುಕ್ ಟೆಸ್ಟ್ ಅಂತಲೇ ಕರೆಯೋದು. ನಿರ್ದೇಶಕರು ಬರೆದಿರೋ ಪಾತ್ರಕ್ಕೂ ಆಯ್ಕೆ ಆದ ನಟಿಗೂ ಸರಿ ಹೋಗುತ್ತದೆಯೇ ಅನ್ನೋದೆ ಆ ಟೆಸ್ಟ್ ಆಗಿದೆ. ಕಾಂತಾರ ಚಿತ್ರದ ಶಿವನ ಪಾತ್ರ ಮತ್ತು ಲೀಲಾ ಪಾತ್ರದ ಲುಕ್ ಟೆಸ್ಟ್ ಆಗಿದೆ. ಆ ಲುಕ್ ಟೆಸ್ಟ್ನ ಫೋಟೋ ಕೂಡ ಈಗ ವೈರಲ್ ಆಗುತ್ತಿವೆ.

ಮುಗಿಯದ ಕಾಂತಾರ ಚಿತ್ರದ ಪಾತ್ರಗಳ ಬಗೆಗಿನ ಕುತೂಹಲ
ಕಾಂತಾರ ಸಿನಿಮಾ ಕನ್ನಡದ ವಿಶೇಷ ಸಿನಿಮಾ. ಈ ಚಿತ್ರದ ಪ್ರತಿ ಪಾತ್ರಗಳು ಜನರ ಮನಸ್ಸಿನಲ್ಲಿವೆ. ಡಬಲ್, ಟ್ರಿಪಲ್ ಅನ್ನೋ ಹಾಗೆ ಜನ ಮೂರು, ನಾಲ್ಕು ಬಾರಿ ಈ ಸಿನಿಮಾ ನೋಡಿದ್ದಾರೆ. ಇಂತಹ ಈ ಚಿತ್ರದ ಪ್ರತಿ ಪಾತ್ರವೂ ಜನರಲ್ಲಿ ಇನ್ನು ಕುತೂಹಲ ಉಳಿಸಿ ಬಿಟ್ಟಿವೆ. ಕಾಂತಾರ ಸಿನಿಮಾದಲ್ಲಿ ಹತ್ತು ಹಲವು ಪಾತ್ರಗಳಿವೆ. ಎಲ್ಲ ಪಾತ್ರಗಳೂ ತಮ್ಮದೇ ರೀತಿಯಲ್ಲಿಯೇ ಜನರನ್ನ ಸೆಳೆದಿವೆ. ಚಿತ್ರದ ಖಳನಾಯಕ ನಟ ಅಚ್ಯುತ್ ಕುಮಾರ್ ಕೂಡ ಅಷ್ಟೆ. ಜನರನ್ನ ತಮ್ಮತ್ತ ಸೆಳೆದು ಬಿಟ್ಟಿದ್ದಾರೆ.
ಸಿಂಗಾರ ಸಿರಿಯೇ ಹಾಡಿನಲ್ಲಿ ಸಪ್ತಮಿ ಗೌಡರ ಲುಕ್ ಟೆಸ್ಟ್ ರೂಪ

ಜನಮನ ಗೆದ್ದ ಲೀಲಾ-ಶಿವನ ಪಾತ್ರ ಲುಕ್ ಟೆಸ್ಟ್ ಹೇಗಿತ್ತು?
ಕಾಂತಾರ ಸಿನಿಮಾದ ಲೀಲಾ ಮತ್ತು ಶಿವನ ಪಾತ್ರ ವಿಶೇಷವಾಗಿಯೇ ಇವೆ. ಸಿನಿಮಾ ನೋಡಿದ ಮಂದಿ ಈ ಎರಡೂ ಪಾತ್ರವನ್ನ ಮೆಚ್ಚಿಕೊಂಡಾಡಿದರು. ಇವರ ಪಾತ್ರದ ವಿಶೇಷ ಲವ್ ಸ್ಟೋರಿಯಿಂದಲೂ ಅನೇಕರಿಗೆ ಕಾಂತಾರ ಸಿನಿಮಾ ಇಷ್ಟ ಆಗಿದೆ.

ಕಾಂತಾರ ಸಿನಿಮಾದಲ್ಲಿ ನಾವು-ನೀವು ನೋಡಿದ ಶಿವ ಮತ್ತು ಲೀಲಾ ಪಾತ್ರ ಆರಂಭದಲ್ಲಿ ಹೀಗಿರಲೇ ಇಲ್ಲ. ಅದರ ರೂಪ ಬೇರನೆ ಇತ್ತು. ಲೀಲಾ ಪಾತ್ರದ ರೂಪವೂ ಆ ದಿನಗಳನ್ನ ನೆನಪಿಸುತ್ತಿತ್ತು. ತುಳುನಾಡಿನ ಹಳ್ಳಿಗಾಡಿನ ಹೆಣ್ಣುಮಕ್ಕಳ ಚಿತ್ರಣವನ್ನೆ ಇದು ಕಟ್ಟಿಕೊಡುತ್ತದೆ. ಕಾಂತಾರ ಲುಕ್ ಟೆಸ್ಟ್ ಫೋಟೋ ಈಗ ಫುಲ್ ವೈರಲ್ ಕಾಂತಾರ ಸಿನಿಮಾದ ಲುಕ್ ಟೆಸ್ಟ್ ಫೋಟೋ ಈಗ ವೈರಲ್ ಆಗುತ್ತಿವೆ. ಚಿತ್ರದ ಕ್ಯಾಮೆರಾಮನ್ ಅರವಿಂದ್ ಎಸ್. ಕಶ್ಯಪ್ ಲುಕ್ ಟೆಸ್ಟ್ನ ಫೋಟೋಗಳನ್ನ ಈಗ ಶೇರ್ ಮಾಡಿದ್ದಾರೆ. ಆ ಫೋಟೋಗಳಲ್ಲಿ ಶಿವ ಮತ್ತು ಲೀಲಾ ಪಾತ್ರದ ಲಕ್ ವೇರಿ ವೇರಿ ಡಿಫರಂಟ್ ಆಗಿದೆ.

ಕಾಂತಾರ ಲುಕ್ ಟೆಸ್ಟ್ ಫೋಟೋ ಈಗ ಫುಲ್ ವೈರಲ್

ಶಿವ ಮತ್ತು ಲೀಲಾ ಪಾತ್ರದ ಲುಕ್ ಟೆಸ್ಟ್ ಪೋಟೋಗಳು ವಿಶೇಷವಾಗಿಯೆ ಇವೆ. ಸಿನಿಮಾದಲ್ಲಿ ನೋಡಿರೋ ಶಿವನ ಪಾತ್ರದಲ್ಲಿ ಯಾವುದೆ ವ್ಯತ್ಯಾಸ ಇಲ್ಲ ಅನಿಸುತ್ತದೆ. ಇನ್ನು ನಾಯಕಿ ಸಪ್ತಮಿ ಗೌಡ ರೋಲ್​​ ನಲ್ಲೂ ಲುಕ್​ ಟೆಸ್ಟ್ ನಲ್ಲಿ ಕೊಂಚ ವ್ಯತ್ಯಾಸ ಇದೆ ಅನಿಸುತ್ತದೆ.

ಸಪ್ತಮಿ ಗೌಡ ತುಳುನಾಡ ಹೆಣ್ಣುಮಗಳ ರೂಪ
ಸಪ್ತಮಿ ಗೌಡ ಪಕ್ಕಾ ತುಳುನಾಡಿನ ಹಳೆ ಕಾಲದ ಹೆಣ್ಣುಮಕ್ಕಳ ರೀತಿನೇ ಕಾಣಿಸುತ್ತಾರೆ. ಆದರೆ ಇಡೀ ಸಿನಿಮಾದಲ್ಲಿ ಈ ರೂಪ ನಿಜಕ್ಕೂ ಎಲ್ಲೂ ಕಾಣಿಸಿಕೊಂಡಿಲ್ಲ. ಸಪ್ತಮಿಯ ಇದೇ ರೂಪಕ್ಕೆ ಒಂದಷ್ಟು ಚೇಂಜಸ್ಗಳೊಂದಿಗೆ ಸಿನಿಮಾದಲ್ಲಿ ತೆಗೆಯಲಾಗಿದೆ
ಸಿಂಗಾರ ಸಿರಿಯೇ ಹಾಡಿನಲ್ಲಿ ಸಪ್ತಮಿ ಗೌಡರ ಲುಕ್ ಟೆಸ್ಟ್ ರೂಪ ಕಾಣಿಸುತ್ತದೆ. ಆದರೆ ಅದರಲ್ಲೂ ಒಂದಷ್ಟು ಬದಲಾವಣೆ ಕಾಣಿಸುತ್ತದೆ. ಅದು ಬಿಟ್ಟರೆ, ಲುಕ್ ಟೆಸ್ಟ್ ನಲ್ಲಿ ಸಪ್ತಮಿ ಗೌಡ ರೂಪ ಇನ್ನೂ ವಿಭಿನ್ನ ಅನಿಸುತ್ತದೆ.ಈ ಮೂಲಕ ಸಪ್ತಮಿ ಮತ್ತು ರಿಷಬ್ ಶೆಟ್ಟಿ ಪಾತ್ರದ ಲುಕ್ ಟೆಸ್ಟ್ ಫೋಟೋಸ್ ಈಗ ವೈರಲ್ ಆಗುತ್ತಿವೆ.

error: Content is protected !!