ಕೂಗು ನಿಮ್ಮದು ಧ್ವನಿ ನಮ್ಮದು

ಗರ್ಭಾವಸ್ಥೆಯಲ್ಲಿ ಕಾಡುವ ಎದೆಯುರಿಗೆ ಇಲ್ಲಿದೆ ಮನೆ ಮದ್ದು

ಗರ್ಭಿಣಿ ದೇಹದಲ್ಲಿ ಪ್ರತಿ ದಿನ ಸಾಕಷ್ಟು ಬದಲಾವಣೆಯಾಗ್ತಿರುತ್ತದೆ. ಹಾರ್ಮೋನುಗಳ ಬದಲಾವಣೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಗರ್ಭಿಣಿಯರಿಗೆ ಎದೆಯುರಿ, ಗ್ಯಾಸ್ ಸಮಸ್ಯೆ ಕೂಡ ಕಾಡುತ್ತದೆ. ಗರ್ಭ ಧರಿಸಿದ ಆರಂಭದ ಮೂರು ತಿಂಗಳು ಸವಾಲಿನ ದಿನಗಳು ಎಂದ್ರೆ ತಪ್ಪಾಗಲಾರದು. ಆರಂಭದ ಮೂರು ತಿಂಗಳು ಪ್ರತಿಯೊಬ್ಬ ಮಹಿಳೆಯೂ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ದೇಹದಲ್ಲಿ ಹಾರ್ಮೋನ್ ಬದಲಾವಣೆ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಇದರಿಂದಾಗಿ ಗರ್ಭಿಣಿಗೆ ವಾಂತಿ, ವಾಕರಿಕೆ ಮತ್ತು ಎದೆಯುರಿ ಸಮಸ್ಯೆ ಪ್ರಾರಂಭವಾಗುತ್ತವೆ.

ಮೂರನೇ ತಿಂಗಳಿನಲ್ಲಿ ಕೆಲ ಮಹಿಳೆಯರು ಸ್ವಲ್ಪ ಚೇತರಿಸಿಕೊಳ್ಳುತ್ತಾರಾದ್ರೂ ಎದೆಯುರಿ ಸಮಸ್ಯೆ ವೇಗವಾಗಿ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಎದೆಯುರಿ ಆಹಾರ ಸೇವನೆ ಮತ್ತು ಪ್ರೊಜೆಸ್ಟರಾನ್ ಹಾರ್ಮೋನ್‌ಗಳಿಂದ ಉಂಟಾಗುತ್ತದೆ. ನಿಮಗೂ ಮೂರು ತಿಂಗಳಾಗ್ತಿದ್ದು, ಎದೆ ಉರಿ, ಗ್ಯಾಸ್ ಸಮಸ್ಯೆ ವಿಪರೀತವಾಗಿದೆ ಎಂದಾದ್ರೆ ಚಿಂತಿಸುವ ಅಗತ್ಯವಿಲ್ಲ. ಕೆಲ ಸುಲಭ ವಿಧಾನಗಳ ಮೂಲಕ ನೀವು ಎದೆ ಉರಿಯಿಂದ ಮುಕ್ತಿ ಪಡೆಯಬಹುದು.

ಮೊದಲನೇಯದಾಗಿ ಈ ಎದೆಯುರಿಗೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ. ಮೊದಲೇ ಹೇಳಿದಂತೆ ಪ್ರೊಜೆಸ್ಟರಾನ್ ಹಾರ್ಮೋನಿನಿಂದ ಹೊಟ್ಟೆ ಉರಿ ಸಮಸ್ಯೆ ಕಾಡುತ್ತದೆ. ಪ್ರೊಜೆಸ್ಟರಾನ್ ಮಗುವಿನ ಬೆಳವಣಿಗೆಗೆ ಜಾಗವನ್ನು ಮಾಡಿಕೊಡಲು ಗರ್ಭಾಶಯದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಆದರೆ ಇದು ಹೊಟ್ಟೆ ಮತ್ತು ಅನ್ನನಾಳವನ್ನು ಬೇರ್ಪಡಿಸುವ ಕವಾಟದ ಮೇಲೆ ಪರಿಣಾಮ ಬೀರುತ್ತದೆ. ಈ ಆಮ್ಲ ಅನ್ನನಾಳವನ್ನು ತಲುಪುತ್ತದೆ. ಇದ್ರಿಂದ ಎದೆಯುರಿ ಉಂಟಾಗುತ್ತದೆ. ಪ್ರೊಜೆಸ್ಟರಾನ್ ಹಾರ್ಮೋನ್‌ಗಳ ಹೆಚ್ಚಳದಿಂದಾಗಿ ಜೀರ್ಣಕ್ರಿಯೆ ದುರ್ಬಲಗೊಳ್ಳುತ್ತದೆ. ಆಹಾರ ಬೇಗ ಜೀರ್ಣವಾಗುವುದಿಲ್ಲ. ಆಹಾರ ಬೇಗ ಜೀರ್ಣವಾಗಿಲ್ಲವೆಂದ್ರೆ ಗ್ಯಾಸ್ ಸಮಸ್ಯೆ ಕಾಡುವುದು ಸಾಮಾನ್ಯ. ಆಮ್ಲೀಯತೆ ಎದೆಯುರಿ ಮತ್ತು ವಾಂತಿಗೆ ದಾರಿಮಾಡಿಕೊಡುತ್ತದೆ.

ಗರ್ಭಿಣಿಯರಿಗೆ ಕಾಡುವ ಎದೆ ಉರಿಗೆ ಪರಿಹಾರ :

  1. ಎದೆ ಉರಿಕಾಡ್ತಿದೆ ಎಂದಾದರೆ ಆಹಾರ ಸೇವಿಸಿದ ತಕ್ಷಣ ನೀರು ಕುಡಿಯುವುದನ್ನು ತಪ್ಪಿಸಿ. ಆಹಾರ ಸೇವನೆ ಮಾಡಿದ ತಕ್ಷಣ ನೀರು ಕುಡಿದ್ರೆ ಅದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದ್ರಿಂದ ಆಮ್ಲ ಹೆಚ್ಚಾಗುತ್ತದೆ.
  2. ಗರ್ಭಿಣಿಯರು ಆಹಾರದಲ್ಲಿ ನಿಯಂತ್ರಣ ಕಾಯ್ದಕೊಳ್ಳಬೇಕು. ಹುಳಿ ಪದಾರ್ಥ ಸೇವನೆಗೆ ಮನಸ್ಸಾದ್ರೂ ಅಸಿಡಿಟಿ ಸಮಸ್ಯೆ ಇರುವವರು ನಿಂಬೆ ಹಣ್ಣು, ಕಿತ್ತಳೆ ಹಣ್ಣು ಅಥವಾ ದ್ರಾಕ್ಷಿಯಂತಹ ಸಿಟ್ರಸ್ ಹಣ್ಣುಗಳನ್ನು ಹೆಚ್ಚು ಸೇವಿಸಬಾರದು. ಖಾಲಿ ಹೊಟ್ಟೆಯಲ್ಲಿ ಎಂದೂ ಆಹಾರ ಸೇವನೆ ಮಾಡಬಾರದು.
  3. ಎದೆಯುರಿ ಕಾಡ್ತಿದೆ ಎಂದಾದ್ರೆ ನೀವು ಒಂದೇ ಬಾರಿ ಹೆಚ್ಚು ಆಹಾರ ತಿನ್ನಬಾರದು. ಆಗಾಗ ಸ್ವಲ್ಪ ಸ್ವಲ್ಪ ಆಹಾರವನ್ನು ತಿನ್ನಲು ಅಭ್ಯಾಸ ಮಾಡಿಕೊಳ್ಳಿ.
  4. ರಾತ್ರಿ ಸಾಧ್ಯವಾದಷ್ಟು ಬೇಗ ಊಟ ಮಾಡುವುದು ಒಳ್ಳೆಯದು. ಊಟ ಮಾಡಿದ ತಕ್ಷಣ ಮಲಗಲು ಹೋಗ್ಬೇಡಿ. ಊಟ ಮಾಡಿದ ಎರಡು ಗಂಟೆ ನಂತ್ರ ಮಲಗಬೇಕು. ಇದ್ರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಇದ್ರಿಂದ ಗ್ಯಾಸ್ ಸಮಸ್ಯೆ ಕಡಿಮೆಯಾಗುತ್ತದೆ.
  5. ಗರ್ಭಿಣಿಯರು ಎಣ್ಣೆಯುಕ್ತ ಆಹಾರ ಸೇವನೆ ಮಾಡಬಾರದು. ಮಸಾಲೆಭರಿತ ಆಹಾರವನ್ನು ಕೂಡ ತಿನ್ನಬಾರದು. ಇದ್ರಿಂದ ಗ್ಯಾಸ್, ಎದೆ ಉರಿ ಸಮಸ್ಯೆ ಹೆಚ್ಚಾಗುತ್ತದೆ.
  6. ಗರ್ಭಿಣಿಯರು ಟೀ ಮತ್ತು ಕಾಫಿ ಕುಡಿಯದಿರುವುದು ಒಳ್ಳೆಯದು. ಹೆಚ್ಚೆಚ್ಚು ಟೀ ಅಥವಾ ಕಾಫಿ ಸೇವನೆ ಮಾಡುವುದ್ರಿಂದ ಆಮ್ಲದ ಪ್ರಮಾಣ ಹೆಚ್ಚಾಗುತ್ತದೆ. ಇದ್ರಿಂದ ಎದೆಯುರಿ ಸಮಸ್ಯೆ ನಿಮ್ಮನ್ನು ಕಾಡುತ್ತದೆ.
  7. ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಸೇವನೆ ಕಡಿಮೆ ಮಾಡಿದ್ರೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ಇದು ಕೂಡ ನಿಮ್ಮ ಆರೋಗ್ಯದಲ್ಲಿ ಏರುಪೇರುಂಟು ಮಾಡುತ್ತದೆ.
  8. ಗರ್ಭಿಣಿಯರು ಸಡಿಲವಾದ ಬಟ್ಟೆಯನ್ನು ಧರಿಸಬೇಕಾಗುತ್ತದೆ. ಬಿಗಿಯಾದ ಬಟ್ಟೆ ಧರಿಸಿ ಮಲಗಿದ್ರೆ ಆಮ್ಲದ ಸಮಸ್ಯೆ ಕಾಡುತ್ತದೆ. ಹಾಗೆಯೇ ತಲೆ, ಹೊಟ್ಟೆಗಿಂತ ಮೇಲಿರುವಂತೆ ನೋಡಿಕೊಳ್ಳಬೇಕು.
    [22/10, 8:19 am] Om Sai Ram🙏: 9.ಯಾವುದೇ ಆಹಾರ ಸೇವನೆ ಮಾಡಿದ ತಕ್ಷಣ ನಿದ್ರೆ ಮಾಡಲು ಹೋಗಬೇಡಿ. ಹಾಗೆಯೇ ಕುಳಿತು ಕೆಲಸ ಮಾಡಬೇಡಿ. ಆಹಾರ ಸೇವನೆ ಮಾಡಿದ ನಂತ್ರ 15 ನಿಮಿಷಗಳ ಕಾಲ ವಾಕ್ ಮಾಡುವುದು ಒಳ್ಳೆಯದು.

10.ನೀರು ಕೂಡ ಆಮ್ಲದ ಸಮಸ್ಯೆ ಕಡಿಮೆ ಮಾಡಲು ನೆರವಾಗುತ್ತದೆ. ಹಾಗಾಗಿ ನೀವು ಪ್ರತಿ ದಿನ ಹೆಚ್ಚೆಚ್ಚು ನೀರು ಸೇವನೆ ಮಾಡಬೇಕು.

11.ಹೊಟ್ಟೆಯಲ್ಲಿ ಹೆಚ್ಚು ಉರಿ ಕಾಣಿಸಿಕೊಳ್ತಿದ್ದರೆ ನೀವು ತಣ್ಣನೆಯ ಹಾಲನ್ನು ನೀವು ಕುಡಿಯಬಹುದು

error: Content is protected !!