ಡಾಲಿ ಧನಂಜಯ್ ಅವರ ಹೆಡ್ ಬುಷ್ ಸಿನಿಮಾದ ಪ್ರಿ-ರಿಲೀಸ್ ಇವೆಂಟ್ನಲ್ಲಿ ಮೋಹಕ ತಾರೆ ರಮ್ಯಾ, ಕಾಂತಾರ ಚೆಲುವೆ ಸಪ್ತಮಿ ಗೌಡ ಸೇರಿದಂತೆ ಸ್ಟಾರ್ ನಟ, ನಟಿಯರು ಭಾಗವಹಿಸಿದ್ದಾರೆ. ನಟಿ ರಮ್ಯಾ ಅವರು ಮೆರೂನ್ ಕಲರ್ ಸೀರೆಯಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡರು. ಸಿಂಪಲ್ & ಕ್ಯೂಟ್ ಆಗಿ ಕಂಡು ಬಂದಿದ್ದಾರೆ ನಟಿ ಡಾಲಿ ಅವರ ರೂಮರ್ಡ್ ಗರ್ಲ್ಫ್ರೆಂಡ್ ಅಮೃತಾ ಐಯ್ಯಂಗಾರ್ ಅವರು ಕೂಡಾ ಕಾರ್ಯಕ್ರನಮದಲ್ಲಿ ಕಾಣಿಸಿಕೊಂಡರು.
ಡಾಲಿ ಅವರು ಬ್ಲೂ ಬ್ಲೇಝರ್ ಧರಿಸಿ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದರು. ಸಿನಿಮಾ ಬ್ಯಾಗ್ರೌಂಡ್ನಲ್ಲಿ ರೆಡ್ ಪೋಸ್ಟರ್ ಪ್ರದರ್ಶಿಸಲಾಗಿತ್ತು. ಕನ್ನಡದ ಹೆಡ್ ಬುಷ್ ಸಿನಿಮಾ ನಿರೀಕ್ಷೆ ಹೆಚ್ಚಿದೆ. ಡಾನ್ ಜಯರಾಜ್ ರಿಯಲ್ ಕಥೆ ಇದಾಗಿದೆ. ಅಗ್ನಿಶ್ರೀಧರ್ ಬಯೋಗ್ರಾಫಿಯಿಂದಲೇ ಭಾಗವೇ ಇದಾಗಿದೆ. ಬೆಂಗಳೂರು ಭೂಗತ ಜಗತ್ತಿನ ಡಾನ್ ಜಯಾರ್ನನ್ನ ಹತ್ತಿರದಿಂದ ನೋಡಿದ ಅಗ್ನಿಶ್ರೀಧರ್ ಅಸಲಿ ಕಥೆಯನ್ನೇ ಇಲ್ಲಿ ಹೇಳಿದ್ದಾರೆ.
ಹೆಡ್ ಬುಷ್ ಸಿನಿಮಾದಲ್ಲಿ ಇನ್ನು ಹಲವು ಪಾತ್ರಗಳಿವೆ. ಶೃತಿ ಹರಿಹರನ್, ರಘು ಮುಖರ್ಜಿ, ದೇವರಾಜ್ ರೋಲ್ ಇಲ್ಲಿ ಪ್ರಮುಖವಾಗಿಯೇ ಇವೆ. ಜಯರಾಜ್ ರಿಯಲ್ ಕಥೆ ಇಲ್ಲಿ ಸಿನಿಮಾ ರೂಪ ಪಡೆದಿದೆ. ಡೈರೆಕ್ಟರ್ ಶೂನ್ಯ ಅದನ್ನ ತೆರೆ ಮೇಲೆ ತಂದಿದ್ದಾರೆ. ಡಾನ್ ಜಯರಾಜ್ ಮ್ಯಾನರಿಸಂ ಅನ್ನ ಧನಂಜಯ್ ಪಕ್ಕಾ ಅಳವಡಿಸಿಕೊಂಡಿದ್ದಾರೆ. ಕಾಂತಾರ ನಟಿ ಸಪ್ತಮಿ ಗೌಡ ಅವರು ಸುಂದರವಾದ ಸಿಲ್ಕ್ ಸೀರೆಯಲ್ಲಿ ಮಿಂಚಿದ್ದಾರೆ. ಮೂಗುತಿ ಸುಂದರಿಯಾಗಿಯೇ ಕಾರ್ಯಕ್ರಮಕ್ಕೆ ಆಗಮಿಸಿದ್ದರು.