ತಿರುವನಂತಪುರ: ರಾಜ್ಯಪಾಲರ ಕಚೇರಿ ಮತ್ತು ರಾಜ್ಯಪಾಲರ ಘನತೆಯನ್ನು ಕುಂದಿಸುವಂತಹ ಕೀಳು ಮಟ್ಟದ ಹೇಳಿಕೆ ನೀಡಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕೇರಳ ಗವರ್ನರ್ ಅರಿಫ್ ಮೊಹಮ್ಮದ್ ಖಾನ್ ಕೇರಳದ ಎಲ್ ಡಿಎಫ್ ನೇತೃತ್ವದ ಸರ್ಕಾರದ ಸಚಿವರಿಗೆ ಖಡಕ್ ಸಂದೇಶ ರವಾನಿಸಿರುವುದಾಗಿ ವರದಿ ತಿಳಿಸಿದೆ.
ಒಂದು ವೇಳೆ ರಾಜ್ಯಪಾಲರ ಕಚೇರಿ, ರಾಜ್ಯಪಾಲರ ಕುರಿತು ಅವಹೇಳನಕಾರಿ ಹೇಳಿಕೆ ನೀಡುವುದನ್ನು ಮುಂದುವರಿಸಿದರೆ ಅವರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಗವರ್ನರ್ ಖಾನ್ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
ಮುಖ್ಯಮಂತ್ರಿ ಹಾಗೂ ಸಂಪುಟದ ಸಚಿವರು ರಾಜ್ಯಪಾಲರಿಗೆ ಸಲಹೆ ನೀಡಲು ಎಲ್ಲಾ ರೀತಿಯ ಅಧಿಕಾರವಿದೆ. ಆದರೆ ರಾಜ್ಯಪಾಲರ ಕಚೇರಿಯ ಘನತೆ, ಗೌರವ ಕುಂದಿಸುವ ಸಚಿವರ ವೈಯಕ್ತಿಕ ಹೇಳಿಕೆ ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ರಾಜ್ಯಪಾಲರ ಕಚೇರಿಯ ಟ್ವೀಟ್ ನಲ್ಲಿ ತಿಳಿಸಿದೆ. ಕೇರಳ ಯೂನಿರ್ವಸಿಟಿಯಲ್ಲಿ ಉಪ ಕುಲಪತಿ ನೇಮಕಕ್ಕೆ ಸಂಬಂಧಿಸಿಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿಎಫ್ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಹೊಸ ಜಟಾಪಟಿ ಮುಂದುವರಿದಿದೆ.