ಬೆಂಗಳೂರು: ಒಂದೂವರೆ ಪಟ್ಟು ಹೆಚ್ಚಿನ ಸಾಮರ್ಥ್ಯ ಮತ್ತು ಹಚ್ಚಹಸಿರಿನ ವಾತಾವರಣ ಕಲ್ಪನೆಯೊಂದಿಗೆ ನಿರ್ಮಿಸಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ನ ಮೊದಲ ಹಂತವು ಉದ್ಘಾಟನೆಗೆ ಸಜ್ಜಾಗಿದೆ. ಪ್ರಯಾಣಿಕರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ನಿರ್ಮಿಸಿರುವ 2 ಟರ್ಮಿನಲ್ ಸದ್ಯ ಕಾರ್ಯಾಚರಣೆ ನಡೆಸುತ್ತಿರುವ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಲಿಸಿದರೆ ನೂತನ ಟರ್ಮಿನಲ್ ಹೆಚ್ಚಿನ ವಿಸ್ತೀರ್ಣ, ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಪ್ರಯಾಣಿಕ ಸ್ನೇಹಿ ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಒಳಾಂಗಣವು ಹಸಿರಿನಿಂದ ಕಂಗೊಳಿಸುತ್ತಿದೆ. ನವೆಂಬರ್ 11ರಂದು ಬೆಂಗಳೂರಿಗೆ ಆಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೂತನ ಟರ್ಮಿನಲ್ಗೆ ಚಾಲನೆ ನೀಡಲಿದ್ದಾರೆ.
ಸದ್ಯ ಇರುವ ವಿಮಾನ ನಿಲ್ದಾಣದ ಮೊದಲ ಟರ್ಮಿನಲ್ 2008ರಲ್ಲಿ ಲೋಕಾರ್ಪಣೆಗೊಡಿದ್ದು, 1.50 ಲಕ್ಷ ಚದರ ಮೀ.ಇದ್ದು ವಾರ್ಷಿಕ 2 ಕೋಟಿ ಪ್ರಯಾಣಿಕರ ಸಂಚಾರಕ್ಕೆ ವ್ಯವಸ್ಥೆ ಇತ್ತು. ಈಗಾಗಲೇ ಪ್ರಯಾಣಿಕರ ದಟ್ಟಣೆ 1.6 ಕೋಟಿಗೆ ತಲುಪಿದ್ದು, ಪ್ರಯಾಣಿಕರ ದಟ್ಟಣೆ ಮತ್ತಷ್ಟುಹೆಚ್ಚುವ ಸಾಧ್ಯತೆ ಇತ್ತು. ಪ್ರಯಾಣಿಕರ ಚೆಕ್ಇನ್, ಇಮಿಗ್ರೆಶನ್, ಭದ್ರತಾ ತಪಾಸಣೆ, ಬ್ಯಾಗೇಜ್ ಹೀಗೆ ನಾನಾ ಪ್ರಕ್ರಿಯೆಗಳು ಜನದಟ್ಟಣೆಯಿಂದಾಗಿ ವಿಳಂಬವಾಗುತ್ತಿದ್ದು, ಹೀಗಾಗಿ, ಹೊಸ ಟರ್ಮಿನಲ್ ನಿರ್ಮಾಣ ಕಾಮಗಾರಿಯನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ಕೈಗೊಳ್ಳಲಾಗಿತ್ತು. 13 ಸಾವಿರ ಕೋಟಿ ವೆಚ್ಚ
ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಎರಡು ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ. ಮೊದಲ ಹಂತವನ್ನು .13 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 2.55 ಲಕ್ಷ ಚದರ ಮೀಟರ್ ವಿಸ್ತೀರ್ಣವಿದೆ. ವಾರ್ಷಿಕ 2.5 ಕೋಟಿ ಪ್ರಯಾಣಿಕರನ್ನು ಸಂಚರಿಸಬಹುದಾದ ಸಾಮರ್ಥ್ಯ ಹೊಂದಿದೆ. ಸಿಎಟಿ 3ಬಿ ರನ್ ವೇ ನಿರ್ಮಿಸಲಾಗಿದ್ದು, ವ್ಯತಿರಿಕ್ತ ಹವಾಮಾನದಲ್ಲಿಯೂ ವಿಮಾನಗಳನ್ನು ಸರಾಗವಾಗಿ ಲ್ಯಾಂಡ್, ಟೇಕಾಫ್ ಮಾಡಬಹುದು. ಇನ್ನು 2ನೇ ಹಂತವು 4.41 ಲಕ್ಷ ಚದರ ಮೀಟರ್ನಲ್ಲಿ ನಿರ್ಮಿಸಲಾಗುತ್ತಿದ್ದು, ಕಾಮಗಾರಿಯೂ ಆರಂಭವಾಗಿದೆ.
ಪಾರ್ಕ್ ಅನುಭವ
ಟರ್ಮಿನಲ…-2 ಒಳಾಂಗಣಕ್ಕೆ ಹಚ್ಚ ಹಸಿರಿನ ಹೊದಿಕೆ ಇದೆ. ಗಿಡಗಳು, ಚಿಕ್ಕ ಕುಂಡದಲ್ಲಿ ಸ್ಥಳೀಯ ಸಸ್ಯ ಪ್ರಭೇದಗಳನ್ನು ಹಾಕಲಾಗಿದೆ. ಜತೆಗೆ ಕೃತಕ ಜಲಪಾತ ನಿರ್ಮಿಸಲಾಗಿದೆ. ಹೈಟೆಕ್ ಮತ್ತು ಪರಿಸರ ಮಾದರಿಯಲ್ಲಿದೆ. ಸೂರ್ಯನ ಬೆಳಕು ನೇರವಾಗಿ ಟರ್ಮಿನಲ್ ಒಳಗೆ ಬೀಳುವಂತೆ ವಿನ್ಯಾಸ ಮಾಡಲಾಗಿದೆ. ಪ್ರಯಾಣಿಕರು ಪ್ರವೇಶಿಸಿದರೆ ಉದ್ಯಾನಕ್ಕೆ ಬಂದ ಅನುಭವವಾಗುತ್ತದೆ. ಡಿಜಿಟಲ್ ಪ್ರಯಾಣಿಕ ಸ್ನೇಹಿ ಅಂಶಗಳು, ಮೊದಲ ಟರ್ಮಿನಲ್ ಸಂಪರ್ಕ, ಹೋಟೆಲ್, ಬಹು ಹಂತದ ಪಾರ್ಕಿಂಗ್ ಒಳಗೊಂಡಿದೆ. ಟರ್ಮಿನಲ್ನ ಅಂಕಿ-ಅಂಶ
ವೆಚ್ಚ: .13,000 ಕೋಟಿ
ವಿಸೀರ್ಣ: 2.55 ಲಕ್ಷ ಚದರ ಮೀ.
ಪ್ರಯಾಣಿಕ ಸಾಮರ್ಥ್ಯ: 2.5 ಕೋಟಿ (ವಾರ್ಷಿಕ)
ಚೆಕ್ ಇನ್ ಕೌಂಟರ್: 90
ಭದ್ರತಾ ಪರಿಶೀಲನೆ ಕೌಂಟರ್: 22
ಇಮಿಗ್ರೇಷನ್ ಕೌಂಟರ್: 36
ವಲಸೆ ಹೋಗುವವರು ದಾಖಲೆ ಪರಿಶೀಲನಾ ಕೌಂಟರ್: 36
ವಲಸೆ ಬರುವವರು ದಾಖಲೆ ಪರಿಶೀಲನಾ ಕೌಂಟರ್: 60
ಸುಂಕ ಮತ್ತು ಬ್ಯಾಗ್ ಪರಿಶೀಲನೆ ಕೌಂಟರ್: 19
ಬ್ಯಾಗ್ ಸಂಗ್ರಹ ಕೌಂಟರ್: 9