ಕೂಗು ನಿಮ್ಮದು ಧ್ವನಿ ನಮ್ಮದು

ಫುಡ್‌ ಡೆಲಿವರಿ ಸೋಗಿನಲ್ಲಿ ಡ್ರಗ್ಸ್ ಪೂರೈಕೆ; ಮಿಜೋರಾಂ ಮೂಲದ ವ್ಯಕ್ತಿ ಬಂಧನ

ಬೆಂಗಳೂರು: ಫುಡ್‌ ಡೆಲಿವರಿ ಹುಡುಗರ ಸೋಗಿನಲ್ಲಿ ಗ್ರಾಹಕರಿಗೆ ಗಾಂಜಾ ಪೂರೈಸುತ್ತಿದ್ದ ಚಾಲಾಕಿ ಪೆಡ್ಲರ್‌ವೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಎಚ್‌ಎಎಲ್‌ ನಿವಾಸಿ ಡೇವಿಡ್‌ ಬಂಧಿತನಾಗಿದ್ದು, ಆರೋಪಿಯಿಂದ .3 ಲಕ್ಷ ಮೌಲ್ಯದ 4 ಕೇಜಿ ಗಾಂಜಾ, ಮೊಬೈಲ್‌ ಹಾಗೂ ಬೈಕ್‌ ಜಪ್ತಿ ಮಾಡಲಾಗಿದೆ. ಬೆಳ್ಳಂದೂರು ಸಮೀಪ ಗಾಂಜಾ ಮಾರಾಟಕ್ಕೆ ವ್ಯಕ್ತಿಯೊಬ್ಬ ಯತ್ನಿಸಿರುವ ಬಗ್ಗೆ ಲಭ್ಯವಾದ ಮಾಹಿತಿ ಮೇರೆಗೆ ಸಿಸಿಬಿ ಕಾರ್ಯಾಚರಣೆ ನಡೆಸಿದೆ.

ಮಿಜಾರಂ ಮೂಲದ ಡೇವಿಡ್‌, ಐದು ವರ್ಷಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ಆರಂಭದಲ್ಲಿ ರಸ್ತೆ ಬದಿ ಹೋಟೆಲ್‌ ಆರಂಭಿಸಿದ್ದ. ನಂತರ ಸುಲಭವಾಗಿ ಹಣ ಸಂಪಾದನೆಗೆ ಗಾಂಜಾ ದಂಧೆಗಳಿದ ಆತ, ಈಶಾನ್ಯ ರಾಜ್ಯದ ಪೆಡ್ಲರ್‌ ಮೂಲಕ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ತಂದು ನಗರದಲ್ಲಿ ಮಾರಾಟ ಮಾಡಿದ್ದ. ಆಗ ಆತನನ್ನು ಹೆಣ್ಣೂರು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾಗ ಡೇವಿಡ್‌ಗೆ ಕೇರಳ ಮೂಲದ ಪೆಡ್ಲರ್‌ ಪರಿಚಯವಾಗಿದೆ. ಕೊನೆಗೆ ಡೇವಿಡ್‌ಗೆ ಜಾಮೀನು ಕೊಡಿಸಲು ನೆರವಾದ ಆ ಪೆಡ್ಲರ್‌, ನಂತರ ಡೇವಿಡ್‌ ಮೂಲಕ ನಗರದಲ್ಲಿ ಗಾಂಜಾ ದಂಧೆ ಶುರು ಮಾಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಲಾಗಿದೆ. ಗಾಂಜಾ ಪೂರೈಸಲು ಟೀ ಶರ್ಟ್ ಗುರುತು

ವಾಟ್ಸ್‌ ಆಪ್‌ ಮೂಲಕವೇ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಗಾಂಜಾ ದಂಧೆಕೋರ, ಗಾಂಜಾ ಬುಕ್‌ ಮಾಡಿದ ಗ್ರಾಹಕರನಿಗೆ ಪೂರೈಸಲು ಟೀ ಶರ್ಟನ್ನು ಗುರುತಾಗಿ ಬಳಸಿಕೊಳ್ಳುತ್ತಿದ್ದ. ಅಲ್ಲದೆ ಗಾಂಜಾ ಪೂರೈಸಲು ತೆರಳುವ ತಮ್ಮ ತಂಡದ ಪೆಡ್ಲರ್‌ನನ್ನು ಜಿಪಿಎಸ್‌ ಮೂಲಕ ದಂಧೆಕೋರರು ಟ್ರ್ಯಾಕ್‌ ಮಾಡುತ್ತಿದ್ದರು. ಬೆಳ್ಳಂದೂರು ಸಮೀಪ ಸಾಫ್‌್ಟವೇರ್‌ ಕಂಪನಿಯ ಉದ್ಯೋಗಿಗೆ ಡೇವಿಡ್‌ಗೆ ಗಾಂಜಾ ಪೂರೈಸಲು ಸೂಚಿಸಲಾಗಿತ್ತು. ಆಗ ಮುಖ್ಯ ಪೆಡ್ಲರ್‌ಗೆ ಆ ಗ್ರಾಹಕ ತಾನು ಧರಿಸಿದ್ದ ಟೀ ಶರ್ಚ್‌ನ ಭಾವಚಿತ್ರವನ್ನು ವಾಟ್ಸ್‌ ಮೂಲಕ ಕಳುಹಿಸಿದ್ದ. ಈ ಫೋಟೋವನ್ನು ಡೇವಿಡ್‌ಗೆ ಕಳುಹಿಸಿ ಆ ಟೀ ಶರ್ಟ್ ಧರಿಸಿದ್ದ ಗ್ರಾಹಕನಿಗೆ ಗಾಂಜಾ ನೀಡುವಂತೆ ಹೇಳಲಾಗಿತ್ತು. ಹೀಗಾಗಿ ಗ್ರಾಹಕ ಮತ್ತು ಡೇವಿಡ್‌ ನಡುವೆ ಯಾವುದೇ ಸಂಪರ್ಕವಿರಲಿಲ್ಲ. ಇನ್ನು ತಮ್ಮ ತಂಡದ ಸದಸ್ಯ ಏನಾದರೂ 5 ನಿಮಿಷ ಸಂಪರ್ಕ ಕಡಿತಗೊಂಡರೆ ಆತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಭಾವಿಸಿ ದಂಧೆಕೋರರು ಪರಾರಿಯಾಗುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ

error: Content is protected !!