ಪಡಿತರ ಚೀಟಿದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ನೀವು ಸಹ ಪಡಿತರ ಚೀಟಿ ಹೊಂದಿದ್ದರೆ, ನಿಮ್ಮ ದೀಪಾವಳಿ ಈ ಬಾರಿ ಬಂಬಾಟಾಗಿರಲಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಉಚಿತ ಪಡಿತರ ಯೋಜನೆಯನ್ನು ಡಿಸೆಂಬರ್ ವರೆಗೆ ವಿಸ್ತರಿಸಿದೆ. ಇದಾದ ಬಳಿಕ ರಾಜ್ಯ ಸರ್ಕಾರಗಳು ಕೂಡ ಕಾರ್ಡ್ದಾರರಿಗೆ ಘೋಷಣೆಗಳನ್ನು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಕ್ಕರೆ ಬೆಲೆ ಇಳಿಕೆಯ ಮಹತ್ವದ ನಿರ್ಧಾರ ಕೈಗೊಂಡಿದೆ. ಅಷ್ಟೇ ಅಲ್ಲ 100 ರೂಪಾಯಿಗೆ ದಿನಸಿ ಸಾಮಾನುಗಳು ಕೂಡ ಸಿಗಲಿವೆ. ಈ ಕುರಿತಾದ ಇತ್ತೀಚಿನ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ
ಈಗ ನೀವು ಸಕ್ಕರೆಗಾಗಿ ಎಷ್ಟು ಹಣ ಪಾವತಿಸಬೇಕು ತಿಳಿಯೋಣ. ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಸಕ್ಕರೆ ಬೆಲೆಯನ್ನು ಕಡಿಮೆ ಮಾಡುವುದಾಗಿ ಘೋಷಿಸಿದೆ. ಈ ಘೋಷಣೆಯ ಬಳಿಕ ಪ್ರತಿ ಕೆ.ಜಿ ನೀವು ಕೇವಲ ಕೇವಲ 20 ರೂ ಪಾವತಿಸಬೇಕಾಗಲಿದೆ. ಸರ್ಕಾರದ ಈ ಘೋಷಣೆಯ ಲಾಭ ಅಂತ್ಯೋದಯ ಕಾರ್ಡ್ ಧಾರಕರಿಗೆ ಸಿಗಲಿದೆ. ಸರ್ಕಾರದ ಈ ಘೋಷಣೆಯಿಂದ ಕಾರ್ಡ್ ಧಾರಕರಲ್ಲಿ ಹೆಚ್ಚುತ್ತಿರುವ ಹಣದುಬ್ಬರದಿಂದ ಮುಕ್ತಿ ಸಿಗಲಿದೆ. ಹಬ್ಬ ಹರಿದಿನಗಳಲ್ಲಿ ಸರ್ಕಾರ ನೀಡುತ್ತಿರುವ ಉಚಿತ ಪಡಿತರ ಸೌಲಭ್ಯದಿಂದ ಜನರು ಸಂತಸಗೊಂಡಿದ್ದು, ಈ ಘೋಷಣೆಯಿಂದ ಸರ್ಕಾರ ಮತ್ತೊಮ್ಮೆ ಜನರ ಮನ ಗೆದ್ದಿದೆ ಎನ್ನಲಾಗುತ್ತಿದೆ.
ಮಹಾರಾಷ್ಟ್ರ ಸರ್ಕಾರ ಘೋಶಿಸಿದ್ದೇನು?
ಕೇಂದ್ರ ಸರ್ಕಾರದ ಘೋಷಣೆಗಳ ಜತೆಗೆ ಇದೀಗ ರಾಜ್ಯ ಸರ್ಕಾರಗಳೂ ಕೂಡ ನಾಗರಿಕರಿಗೆ ಇದೀಗ ದೀಪಾವಳಿ ಉಡುಗೊರೆ ನೀಡುತ್ತಿವೆ. ಹಬ್ಬದ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರವು ಪಡಿತರ ಚೀಟಿದಾರರಿಗೆ ವಿಶೇಷ ಘೋಷಣೆ ಮಾಡಿದೆ. ಇದರ ಅಡಿಯಲ್ಲಿ ಸರಕಾರ ನಾಗರಿಕರಿಗೆ ಕೇವಲ 100 ರೂ.ಗೆ ದಿನಸಿ ನೀಡುತ್ತಿದೆ. ಇದರಲ್ಲಿ ಒಂದು ಕೆ.ಜಿ ರವೆ (ರವೆ), ಖಾದ್ಯ ಎಣ್ಣೆ, ಹಳದಿ ಉದ್ದಿನಬೇಳೆ ಮತ್ತು ಶೇಂಗಾ ಇರಲಿದೆ. ಅದೂ ಕೇವಲ ರೂ.100 ರೂ.ಗೆ ಮಾತ್ರ ಸಿಗಲಿದೆ. ಕೇಂದ್ರ ಸರ್ಕಾರದ ಉಚಿತ ಪಡಿತರ ಯೋಜನೆಯನ್ನು ಡಿಸೆಂಬರ್ ವರೆಗೆ ವಿಸ್ತರಿಸಿರುವುದರಿಂದ ದೇಶಾದ್ಯಂತ ಪಡಿತರ ಚೀಟಿಧಾರಕರಲ್ಲಿ ಭಾರಿ ಸಂತಸದ ಅಲೆ ಇದೆ. ಮಹಾರಾಷ್ಟ್ರ ಸರ್ಕಾರದ ಈ ಘೋಷಣೆ ರಾಜ್ಯದ ಪಡಿತರ ಚೀಟಿದಾರರ ದೀಪಾವಳಿಯ ಉತ್ಸಾಹವನ್ನು ಇನ್ನಷ್ಟು ಬೆಳಗಿಸಿದೆ.