ಕೂಗು ನಿಮ್ಮದು ಧ್ವನಿ ನಮ್ಮದು

ಜಗಳ ಬಿಡಿಸಲು ಹೋದವನಿಗೆ ಚಾಕು ಇರಿತ: ಆತನ ವಿರುದ್ಧವೇ ದಾಖಲಾಯ್ತು FIR!!

ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಮಾಳೂರಿನ ಮಸೀದಿಯಲ್ಲಿ ದಾಯಾದಿಗಳಿಬ್ಬರ ನಡುವೆ ನಡೆದ ಗಲಾಟೆಯಲ್ಲಿ ಜಗಳ ಬಿಡಿಸಲು ಹೋದವನ ಎದೆಗೆ ಚಾಕು ಇರಿಯಲಾಗಿತ್ತು. ಚಾಕುವನ್ನು ಎದೆಗೊತ್ತಿಕೊಂಡೇ ಮಾಳೂರು ಠಾಣೆಯ ಎದುರಿಗೆ ಚೂರಿ ಇರಿತಕ್ಕೆ ಒಳದಾದ ವ್ಯಕ್ತಿ ಶಮಿಯುಲ್ಲ ಎಂಬಾತ ಬಂದಿದ್ದ.

ಈ ದೃಶ್ಯ ಮಾಳೂರು ಠಾಣೆಯ ಸಿಸಿ ಕ್ಯಾಮರದಲ್ಲಿ ದಾಖಲಾಗಿದೆ ಎಂದು ಖುದ್ದು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಮಿಯುಲ್ಲ ತಿಳಿಸಿದ್ದಾರೆ. ಆದರೆ ಚಾಕು ಇರಿತಕ್ಕೆ ಒಳಗಾಗಿ ನೋವಿನಿಂದ ಕಾಲಕಳೆಯುತ್ತಿರುವ ಶಮಿಯುಲ್ಲ ವಿರುದ್ಧವೇ ಮಾಳೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರ ಈ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

error: Content is protected !!