ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಜೋರಾದ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ನಿರ್ದಿಷ್ಟವಾಗಿ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಮಧ್ಯಾಹ್ನ 2-04 ಗಂಟೆ ವೇಳೆಯಲ್ಲಿ, ಈ ಭಾರೀ ಶಬ್ದ ಕೇಳಿ ಬಂದಿದೆ. ಭೂ ಕಂಪನದ ಅನುಭವವಾಗುತ್ತಿದ್ದಂತೆ, ಜನ ಭಯಗೊಂಡಿದ್ದಾರೆ. ತಿಕೋಟಾ ತಾಲೂಕಿನ ಬಾಬಾನಗರ, ಬಿಜ್ಜರಗಿ, ಕಳ್ಳಕವಟಗಿ, ಘೋಣಸಗಿ ಸುತ್ತಮುತ್ತ ಈ ಭೂಕಂಪನದ ಅನುಭವವಾಗಿದೆ.
ತುಂತುರು ಮಳೆಯ ನಡುವೆಯೆ ಭೂಮಿಯಿಂದ ಜೋರಾದ ಶಬ್ದ ಕೇಳಿಬಂದಿದೆ. ಘಟನೆಯಿಂದಾಗಿ ಗಾಬರಿಗೊಂಡ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಈ ಮಧ್ಯೆ, ಭೂಕಂಪನ ಅಗಿಲ್ಲ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಬೆಂಗಳೂರಿನ ಆಧಿಕಾರಿಗಳೂ ಸಹ ಈ ಮಾಹಿತಿಹಯನ್ನು ದೃಢಪಡಿಸಿದ್ದಾರೆ.