ಆರೋಗ್ಯಕರ ಆಹಾರ ತಿನ್ನುವುದನ್ನು ಕಲಿಸಿ
ಆರೋಗ್ಯಕರ ಆಹಾರದ ಪ್ರಾಮುಖ್ಯತೆಯನ್ನು ಮಕ್ಕಳಿಸಿ ಕಲಿಸಿಕೊಡುವುದು ತುಂಬಾ ಮುಖ್ಯ. ಇಲ್ಲದಿದ್ದರೆ ಚಿಕ್ಕಂದಿನಲ್ಲೇ ಮಕ್ಕಳು ಜಂಕ್ಫುಡ್ಗೆ ಅಡಿಕ್ಟ್ ಆಗಿ ಬಿಡುತ್ತಾರೆ. ಹೀಗಾಗಬಾರದು ಅಂದ್ರೆ ಆರೋಗ್ಯಕರ ಆಹಾರ ಸೇವನೆಯ ಪ್ರಾಮುಖ್ಯತೆಯನ್ನು ಮಕ್ಕಳಿಗೆ ತಿಳಿಸಿಕೊಡಬೇಕು.
ದೈಹಿಕ ವ್ಯಾಯಾಮ ಅಭ್ಯಾಸ ಮಾಡಿಸಿ
ಚಿಕ್ಕ ವಯಸ್ಸಿನಿಂದಲೇ ಮಗುವಿನ ದೈಹಿಕ ವ್ಯಾಯಾಮವನ್ನು ಅಭ್ಯಾಸ ಮಾಡಿಸಿ. ಮಕ್ಕಳ ಆಟಗಳಲ್ಲಿ ಹೆಚ್ಚಿನವು ವಿಡಿಯೋ ಆಟಗಳಾಗಿವೆ. ಇದು ಮಗುವಿನ ಮಾನಸಿಕವಾಗಿ ಪರಿಣಾಮ ಬೀರುತ್ತದೆ. ಇದರ ಬದಲು ದೈಹಿಕ ಚಟುವಟಿಕೆಗಳಿರುವ ಆಟಗಳಲ್ಲಿ ತೊಡಗಿಸಿಕೊಳ್ಳಲು ಸೂಚಿಸಿ. ಇದರಲ್ಲಿ ಅವನು ಎಲ್ಲರೊಂದಿಗೆ ಸುಲಭವಾಗಿ ಸಂವಹನ ನಡೆಸಬಹುದು. ವ್ಯಾಯಾಮದ ಅಭ್ಯಾಸವು ಮಕ್ಕಳಿಗೆ ಆರೋಗ್ಯಕರ ಜೀವನವನ್ನು ನೀಡುತ್ತದೆ.
ಪರಿಸರ ಸಂರಕ್ಷಣೆಯನ್ನು ಕಲಿಸಿ
ಬಾಲ್ಯದಿಂದಲೇ ಪರಿಸರ ಸಂರಕ್ಷಣೆಯನ್ನು ಕಲಿಸಿ. ಪ್ರತಿಯೊಬ್ಬ ಮನುಷ್ಯನ ಆರೋಗ್ಯಕ್ಕೆ ಪರಿಸರ ಸಂರಕ್ಷಣೆ ಮೊದಲ ಆದ್ಯತೆಯಾಗಿದೆ. ಅದನ್ನು ಮಗುವಿಗೆ ಕಲಿಸಿ. ಇದು ಮಗುವಿನ ಯೋಚನೆಯ ಮಟ್ಟವಮ್ಮಿ ಸುಧಾರಿಸುತ್ತದೆ. ಮಗುವನ್ನು ಕರೆದುಕೊಂಡು ಹೋಗಿ ಸಸ್ಯಕ್ಕೆ ನೀರು ಹಾಕಿ. ಜೀವನಕ್ಕೆ ಗಿಡ, ಮರ, ಪ್ರಕೃತಿಯ ಪ್ರಾಮುಖ್ಯತೆಯೇನು ಎಂಬುದನ್ನು ತಿಳಿಸಿಕೊಡಿ.
ಹಣ ಉಳಿತಾಯದ ಬಗ್ಗೆ ತಿಳಿದಿರಲಿ
ಚಿಕ್ಕ ವಯಸ್ಸಿನಿಂದಲೇ ಹಣವನ್ನು ಉಳಿಸಲು ನಿಮ್ಮ ಮಗುವಿಗೆ ಕಲಿಸಿ. ಗಿಫ್ಟ್ ಮನಿ ಬ್ಯಾಂಕ್ ಅಲ್ಲಿ ಹಣವನ್ನು ಠೇವಣಿ ಮಾಡಲು ಕಲಿಯಿರಿ. ಇದರಿಂದ ಉಳಿತಾಯವೆಂಬುದು ಜೀವನದ್ಲಿ ಎಷ್ಟು ಮುಖ್ಯ ಎಂಬುದನ್ನು ಮಗು ಚಿಕ್ಕಂದಿನಿಂದಲೇ ಕಲಿಯುತ್ತದೆ.
ಸಮಯ ನಿರ್ವಹಣೆಯನ್ನು ಕಲಿಸಿ
ಚಿಕ್ಕ ವಯಸ್ಸಿನಿಂದಲೇ ನಿಮ್ಮ ಮಗುವಿಗೆ ಸಮಯ ನಿರ್ವಹಣೆಯನ್ನು ಕಲಿಸಿ. ಈ ಶಿಕ್ಷಣವನ್ನು ಚಿಕ್ಕ ವಯಸ್ಸಿನಿಂದಲೇ ಪಡೆಯುವುದು ಬಹಳ ಮುಖ್ಯ. ಅವನ ಅಧ್ಯಯನವನ್ನು ಸಮಯಕ್ಕೆ ಹೇಗೆ ಮುಗಿಸಬೇಕು, ಸಮಯಕ್ಕೆ ಹೇಗೆ ತಿನ್ನಬೇಕು ಮತ್ತು ಅವನು ದಿನವಿಡೀ ಎಷ್ಟು ಸಮಯವನ್ನು ಆಡಬೇಕು ಎಂಬುದನ್ನು ಅವನಿಗೆ ತಿಳಿಸಿಕೊಡಿ. ದಿನಚರಿಯನ್ನು ಅನುಸರಿಸಲು ಅವನಿಗೆ ಕಲಿಸಿ. ಇದು ಮಗುವಿನ ವ್ಯಕ್ತಿತ್ವವನ್ನು ಸುಧಾರಿಸುತ್ತದೆ.
ನಿದ್ದೆಯ ಮಹತ್ವ ಮನವರಿಕೆ ಮಾಡಿಕೊಡಿ
ಮಕ್ಕಳು ಚಿಕ್ಕಂದಿನಲ್ಲಿ ಆಟವಾಡುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಊಟ ನಿದ್ರೆಯ ಬಗ್ಗೆ ಗಮನ ಕೊಡುವುದೇ ಇಲ್ಲ. ಹೀಗಾಗಿ ಮಕ್ಕಳಿಗೆ ನಿದ್ದೆಯ ಮಹತ್ವವನ್ನು ತಿಳಿಸಿಕೊಡುವುದು ತುಂಬಾ ಮುಖ್ಯ. ನಿದ್ದೆ ಇಲ್ಲದಿದ್ದರೆ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂಬುದನ್ನು ಹೇಳಿ.