ಕೂಗು ನಿಮ್ಮದು ಧ್ವನಿ ನಮ್ಮದು

ಇವತ್ತು ಕೂಡಾ ಬಂಗಾರದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ಮಾತ್ರ ದುಬಾರಿ

ಬೆಂಗಳೂರು : ೩ ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ನಿನ್ನೆ ಕೂಡಾ 360 ರೂಪಾಯಿಗಳಷ್ಟು ಇಳಿಕೆ ಕಂಡು ಬಂದಿತ್ತು. ಇಂದು ಮತ್ತೆ ಹಳದಿ ಲೋಹದ ಬೆಲೆಯಲ್ಲಿ 220 ರೂಪಾಯಿಗಳಷ್ಟು ಇಳಿಕೆ ದಾಖಲಾಗಿದೆ. ಈ ಇಳಿಕೆಯೊಂದಿಗೆ 24 ಕ್ಯಾರೆಟ್ ಚಿನ್ನದ ಬೆಲೆ 50,400 ರೂ. ಆಗಿದ್ದರೆ, 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 46,200 ರೂಪಾಯಿ ಆಗಿದೆ. ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ 22 ಕ್ಯಾರೆಟ್ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನದ ಬೆಲೆ
ಚೆನ್ನೈ 46,800 51,050
ಮುಂಬಯಿ 46,200 50,400
ದೆಹಲಿ 46,350 50,560
ಕೋಲ್ಕತ್ತಾ 46,200 50,400
ಬೆಂಗಳೂರು 46,250 50,450
ಹೈದರಾಬಾದ್ 46,200 50,400
ಕೇರಳ 46,200 50,400

ನಿನ್ನೆ ಇಳಿಕೆ ಕಂಡಿದ್ದ ಬೆಳ್ಳಿ ಬೆಲೆಯಲ್ಲಿ ಇಂದು ಏರಿಕೆ ಕಂಡು ಬಂದಿದೆ. ನಿನ್ನೆ ಬೆಳ್ಳಿ ದರದಲ್ಲಿ 600 ರೂಪಾಯಿ ಇಳಿಕೆಯಾಗಿತ್ತು. ಇಂದು ಮತ್ತೆ 600 ರೂಪಾಯಿ ಏರಿಕೆಯಾಗಿದೆ. ಈ ಲೇಖನ ಬರೆಯುವ ಹೊತ್ತಿಗೆ ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ.

ನಗರ ಇಂದಿನ ಬೆಳ್ಳಿ ಬೆಲೆ
ಚೆನ್ನೈ 61,100
ಮುಂಬಯಿ 57,000
ದೆಹಲಿ 57,000
ಕೋಲ್ಕತ್ತಾ 57,000
ಬೆಂಗಳೂರು 61,100
ಹೈದರಾಬಾದ್ 61,100
ಕೇರಳ 61,100

error: Content is protected !!