ಕೂಗು ನಿಮ್ಮದು ಧ್ವನಿ ನಮ್ಮದು

ಇನ್ಮುಂದೆ ಹೊಸ ರೀತಿಯಲ್ಲಿ ಟೋಲ್ ಸಂಗ್ರಹಣೆಗೆ ಪ್ಲ್ಯಾನ್; ಹೇಗಿರಲಿದೆ ಟೋಲ್‌ ಪ್ಲೇಟ್‌?

ರಸ್ತೆ, ಸಾರಿಗೆ ಹಾಗೂ ಹೆದ್ದಾರಿಗಳ ನಿಯಮಗಳಲ್ಲಿ ಹೊಸ ಮಾರ್ಪಾಡುಗಳನ್ನು ತರುತ್ತಿರುವ ಕೇಂದ್ರ ಸರ್ಕಾರ ಈಗ ಮತ್ತೊಂದು ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶೀಘ್ರದಲ್ಲೇ ಹೆದ್ದಾರಿಗಳ ಟೋಲ್ ಪ್ಲಾಜಾಗಳ ಕಾರ್ಯಾಚರಣೆಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹಾಗೆಯೇ ಕಾಲಕಾಲಕ್ಕೆ ಸೂಕ್ತವಾದ ಮಾರ್ಪಾಡುಗಳನ್ನು ಮಾಡುವ ಮೂಲಕ ಉತ್ತಮ ಪ್ರಜೆಗಳಿಗೆ ಉತ್ತಮ ಸಾರಿಗೆ ಸೌಲಭ್ಯಗಳನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಅನೇಕ ಪ್ರಯೋಗಗಳು ಆಗಾಗ ಹೊರಬರುತ್ತಲೆ ಇರುತ್ತವೆ. ಅಂತಹದೇ ಹೊಸ ಪ್ರಯೋಗವನ್ನು ಮಾಡಲು ಕೇಂದ್ರ ಸಾರಿಗೆ ಸಚಿವಾಲಯ ಮುಂದಾಗಿದೆ. ಅದರ ಬಗ್ಗೆ ಸಂಪೂರ್ಣ ಚಿತ್ರಣದ ಇಲ್ಲಿದೆ.

ಭಾರತದಲ್ಲಿ ಹೊಸ ರೀತಿಯಲ್ಲಿ ಟೋಲ್ ಸಂಗ್ರಹಣೆ:
ಈಗ ಭಾರತದ ರಸ್ತೆ ಸಾರಿಗೆ ಸಚಿವರು ಭಾರತದ ಟೋಲ್ ವ್ಯವಸ್ಥೆಯನ್ನು ಬದಲಾಯಿಸಲು ಹಲವಾರು ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈಗ ಇರುವ ವ್ಯವಸ್ಥೆಗಳಲ್ಲಿ ಜಿಪಿಎಸ್ ಟೋಲ್ ವ್ಯವಸ್ಥೆ ಮತ್ತು ಹೊಸ ನಂಬರ್ ಪ್ಲೇಟ್ ವ್ಯವಸ್ಥೆಯನ್ನು ಅಳವಡಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅದನ್ನೆ ಟೋಲ್‌ ಪ್ಲೇಟ್‌ ಎಂದು ಕರೆಯಲಾಗುತ್ತಿದೆ.
ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳಾದ್ಯಂತ ಇರುವ ಟೋಲ್ ಪ್ಲಾಜಾಗಳನ್ನು ತೆಗೆದುಹಾಕಲು ಸರ್ಕಾರ ಕೆಲಸ ಮಾಡುತ್ತಿದೆ. ಟೋಲ್ ತೆರಿಗೆ ಸಂಗ್ರಹಕ್ಕಾಗಿ ಸಚಿವಾಲಯವು ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾಗಳನ್ನು ಅವಲಂಬಿಸುವ ಯೋಜನೆ ರೂಪಿಸುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ. ಟೋಲ್‌ ಪ್ಲೇಟ್‌ ಅಳವಡಿಕೆಯು ವಾಹನ ಚಾಲಕರಿಂದ ಟೋಲ್ ತೆರಿಗೆ ಸಂಗ್ರಹಣೆ ಪ್ರಕ್ರಿಯೆಯಲ್ಲಿ ಹೊಸ ವಿಧಾನವಾಗಿ ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಗಡ್ಕರಿ ಖಚಿತಪಡಿಸಿದ್ದಾರೆ. ಇದು ಪ್ರಸ್ತುತ ಚಾಲ್ತಿಯಲ್ಲಿರುವ ಫಾಸ್ಟ್ಯಾಗ್ ವಿಧಾನಕ್ಕಿಂತ ವಿಭಿನ್ನವಾಗಿರಲಿದೆ.

ಟೋಲ್‌ ಪ್ಲೇಟ್‌ನಲ್ಲಿ ಜಿಪಿಎಸ್‌ ವ್ಯವಸ್ಥೆ ಅಳವಡಿಕೆ ಮತ್ತು ಟೋಲ್‌ ಪ್ಲಾಜಾಗಳನ್ನು ತೆಗೆದು ಹಾಕುವುದು:
ಪ್ರಸ್ತುತ ನಮ್ಮಲ್ಲಿ ಟೋಲ್ ಸಂಗ್ರಹಿಸುವ ವ್ಯವಸ್ಥೆ ಇದೆ. ಆದರೆ ನಾವು ಎರಡು ಮಾರ್ಗಗಳಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ನಿತಿನ್ ಗಡ್ಕರಿ ಹೇಳಿದರು. ಇದರಲ್ಲಿ ಮೊದಲನೆ ಮಾರ್ಗವು ವಾಹನಗಳಲ್ಲಿ ಜಿಪಿಎಸ್‌ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಈ ವ್ಯವಸ್ಥೆಯಿಂದ ವಾಹನ ಚಾಲಕನ ಅಧಿಕೃತ ಮತ್ತು ಲಿಂಕ್ ಮಾಡಿದ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಟೋಲ್ ಮೊತ್ತವನ್ನು ಕಡಿತಗೊಳಿಸುತ್ತದೆ.

ಹೊಸ ನಂಬರ್ ಪ್ಲೇಟ್‌ಗಳಿಗೂ ಇದು ಅನ್ವಯ:
ಇದೀಗ ಹೊಸ ಮಾದರಿಯ ನಂಬರ್ ಪ್ಲೇಟ್ ತಯಾರಿಸುವ ತಂತ್ರಜ್ಞಾನದ ಕೆಲಸ ಭರದಿಂದ ನಡೆದಿದೆ. ಈ ಹೊಸ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳುವುದು ಕಡ್ಡಾಯ. ಎಲ್ಲಾ ವಾಹನಗಳ ಹಳೆಯ ನಂಬರ್ ಪ್ಲೇಟ್‌ಗಳನ್ನು ಹೊಸ ನಂಬರ್ ಪ್ಲೇಟ್‌ಗಳೊಂದಿಗೆ ಬದಲಾಯಿಸಲಾಗುವುದು ಮತ್ತು ನಂಬರ್ ಪ್ಲೇಟ್‌ನಲ್ಲಿ ಸ್ವಯಂಚಾಲಿತ ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಆ ಹೊಸ ನಂಬರ್ ಪ್ಲೇಟ್‌ಗೆ ಒಂದು ವಿಶೇಷ ಸಾಫ್ಟ್‌ವೇರ್ ಅನ್ನು ಅಳವಡಿಸುವುದರಿಂದ, ಇದರಿಂದ ಸ್ವಯಂಚಾಲಿತವಾಗಿ ಟೋಲ್ ಅನ್ನು ಕಡಿತಗೊಳಿಸಲಾಗುವುದು.

ತಮ್ಮ ಇತ್ತೀಚಿನ ಮಾಧ್ಯಮ ಸಂದರ್ಶನವೊಂದರಲ್ಲಿ ಗಡ್ಕರಿ ಅವರು, 2019 ರಿಂದ ಮಾರಾಟವಾಗುವ ಕಾರುಗಳು, ಕಂಪನಿಯು ಅಳವಡಿಸಿದ ನಂಬರ್ ಪ್ಲೇಟ್‌ಗಳೊಂದಿಗೆ ಬರುತ್ತಿವೆ. ಈ ನಂಬರ್ ಪ್ಲೇಟ್ ರೀಡರ್ ಕ್ಯಾಮೆರಾಗಳ ಮೂಲಕ ಟೋಲ್ ಮೊತ್ತವನ್ನು ಕಡಿತಗೊಳಿಸುವ ಪ್ರಾಯೋಗಿಕ ಯೋಜನೆಯಲ್ಲಿ ಸರ್ಕಾರ ಈಗಾಗಲೇ ಕೆಲಸ ಮಾಡಲು ಪ್ರಾರಂಭಿಸಿದೆ. ಟೋಲ್ ಸ್ಥಳದಲ್ಲಿ ಜನರು ಕಾಯುವುದನ್ನು ತಪ್ಪಿಸಲು ಮತ್ತು ಟೋಲ್ ಮೊತ್ತವನ್ನು ಪಾವತಿಸುವುದನ್ನು ತಡೆಯುವ ಚಾಲಕರಿಗೆ ದಂಡ ವಿಧಿಸಲು ಸರ್ಕಾರ ಹೊಸ ಕಾನೂನನ್ನು ಪರಿಚಯಿಸಲಿದೆ ಎಂದು ಹೇಳಿದ್ದರು. ಈ ಹೊಸ ಟೋಲ್ ತೆರಿಗೆ ಕಡಿತ ಪ್ರಕ್ರಿಯೆಯನ್ನು ಸುಲಭಗೊಳಿಸಲು 2019 ರ ಮೊದಲು ಮಾರಾಟವಾದ ಕಾರುಗಳಿಗೆ ಈ ಹೊಸ-ಪೀಳಿಗೆಯ ನಂಬರ್ ಪ್ಲೇಟ್‌ಗಳನ್ನು ಸರ್ಕಾರವು ಕಡ್ಡಾಯಗೊಳಿಸುತ್ತದೆ.

error: Content is protected !!