ಹುಡುಗೀರ ವಯಸ್ಸು ಕೇಳ್ಬಾರ್ದು, ಹುಡುಗರ ಸ್ಯಾಲರಿ ಕೇಳ್ಬಾರ್ದು ಅನ್ನೋ ಮಾತೇ ಇದೆ. ಯಾಕೆಂದರೆ ಅದೆರಡೂ ತುಂಬಾ ಗೌಪ್ಯವಾಗಿಡುವ ವಿಚಾರ ಅನ್ನೋದು ಸಾಮಾನ್ಯ ನಂಬಿಕೆ. ಆದ್ರೆ ಡೊಮಿನೋಸ್ ಮಾತ್ರ ಸಂದರ್ಶನದಲ್ಲಿ ಮಹಿಳೆಯ ವಯಸ್ಸು ಕೇಳಿ ಯಡವಟ್ಟು ಮಾಡ್ಕೊಂಡಿದೆ. ಆಮೇಲಾಗಿದ್ದೇನು? ಮಹಿಳೆಯರು ತಮ್ಮ ವಯಸ್ಸಿನ ಬಗ್ಗೆ ಅದೆಷ್ಟು ಗೌಪ್ಯತೆ ಕಾಪಾಡಿಕೊಳ್ತಾರೆ ಅನ್ನೋದು ಹಲವರಿಗೆ ತಿಳಿದಿರುವ ವಿಷಯ. ಸಾರ್ವಜನಿಕವಾಗಿ ತಮ್ಮ ವಯಸ್ಸನ್ನು ಹೇಳಲು ಹಿಂಜರಿಯುತ್ತಾರೆ. ಮಾತ್ರವಲ್ಲ ಚಿಕ್ಕವಯಸ್ಸಿನವರಂತೆ ಕಾಣಿಸಿಕೊಳ್ಳಲು ಹೆವಿ ಮೇಕಪ್ ಮಾಡಿಕೊಳ್ಳುತ್ತಾರೆ.
ಆಂಟಿ ಎಂದು ಕರೆದರೆ ಸಿಟ್ಟಿಗೇಳುವ ಮಹಿಳೆಯರೂ ಇದ್ದಾರೆ. ಆದ್ರೆ ಡೊಮಿನೋಸ್ ಮಾತ್ರ ಹುಡುಗಿಯರ ವಯಸ್ಸು ಕೇಳ್ಬಾರ್ದು ಅನ್ನೋ ಅನ್ ರಿಟರ್ನ್ ರೂಲ್ಸ್ ಬ್ರೇಕ್ ಮಾಡಿ ಮಹಿಳೆಗೆ ಮೂರು ಲಕ್ಷಕ್ಕೂ ಅಧಿಕ ಮೊತ್ತದ ಹಣ ಪಾವತಿಸುವಂತಾಗಿದೆ. ಒಬ್ಬ ಮಹಿಳೆ ತನ್ನ ವಯಸ್ಸು ಮತ್ತು ಲಿಂಗದ ಆಧಾರದ ಮೇಲೆ ಉದ್ಯೋಗ ಸಂದರ್ಶನದ ಸಮಯದಲ್ಲಿ ತಾರತಮ್ಯಕ್ಕೆ ಒಳಗಾಗಿದ್ದಳು. ಧೈರ್ಯಶಾಲಿ ಮಹಿಳೆ ಅದನ್ನು ಬಿಡಲಿಲ್ಲ, ಬದಲಿಗೆ ಕಂಪನಿಯ ವಿರುದ್ಧ ಹೋರಾಡಿ ಪ್ರಕರಣವನ್ನು ಗೆದ್ದಳು.
ಸಂದರ್ಶನದಲ್ಲಿ ಮಹಿಳೆಯ ವಯಸ್ಸು ಕೇಳಿದ ಡೊಮಿನೋಸ್ ಉತ್ತರ ಐರ್ಲೆಂಡ್‌ನ ಜಾನಿಸ್ ವಾಲ್ಷ್ ಅವರು ಉದ್ಯೋಗ ಸಂದರ್ಶನದ ಭಾಗವಾಗಿ ತಮ್ಮ ವಯಸ್ಸನ್ನು ಕೇಳಿದ್ದಕ್ಕಾಗಿ ಡೊಮಿನೋಸ್ ಔಟ್‌ಲೆಟ್‌ನಲ್ಲಿ ಮೊಕದ್ದಮೆ ಹೂಡಿದ ನಂತರ ರೂ 3,78,112 ಹಣವನ್ನು ಪಡೆದುಕೊಂಡರು. ಕೌಂಟಿ ಟೈರೋನ್‌ನ ಸ್ಟ್ರಾಬೇನ್‌ನಲ್ಲಿರುವ ಡೊಮಿನೋಸ್ ಔಟ್‌ಲೆಟ್‌ನಲ್ಲಿ ಡೆಲಿವರಿ ಡ್ರೈವರ್ ಹುದ್ದೆಗೆ ವಾಲ್ಷ್ ಅರ್ಜಿ ಸಲ್ಲಿಸಿದರು. ಸಂದರ್ಶನದ ಆರಂಭದಲ್ಲಿ, ಅವಳ ವಯಸ್ಸನ್ನು ಕೇಳಲಾಯಿತು. ಮಹಿಳೆ ತನ್ನ ವಯಸ್ಸನ್ನು ಹೇಳಿದ ಬಳಿಕವೂ ಸಂದರ್ಶಕರು ಅದೇ ವಿಚಾರದ ಬಗ್ಗೆ ಮಾತನಾಡುವುದು ಮಹಿಳೆಗೆ ಕಿರಿಕಿರಿಯೆನಿಸಿತು.