ವಾಷಿಂಗ್ಟನ್ ಸುಂದರ್ ಗಾಯಗೊಂಡ ನಂತರ, ಬಿಸಿಸಿಐ ಅವರ ಬದಲಿಗೆ ಆಲ್ ರೌಂಡರ್ ಶಹಬಾಜ್ ಅಹ್ಮದ್ ಅವರನ್ನು ತಂಡಕ್ಕೆ ಸೇರಿಕೊಂಡಿದ್ದಾರೆ. ಭಾರತ ತಂಡ ಸದ್ಯ ಬಿಡುವಿಲ್ಲದೇ ಸರಣಿಗಳಲ್ಲಿ ಆಟವಾಡುತ್ತಿದೆ. ಒಂದರ ಹಿಂದೆ ಒಂದರಂತೆ ಸರಣಿಗಳಲ್ಲಿ ತೊಡಗಿಕೊಳ್ಳುತ್ತಿರುವ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸಕ್ಕೆ ಹೋಗಿದೆ. ಈಗಾಗಲೇ ಟೀಂ ಇಂಡಿಯಾವನ್ನು ಜಿಂಬಾಬ್ವೆಗೆ ತಲುಪಿದೆ. ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಘೋಷಿಸಿದ್ದು, ಕೆಎಲ್ ರಾಹುಲ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ರಾಹುಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಆದ್ರೆ ಇದೀಗ ಸರಣಿಗೂ ಮುನ್ನ ಭಾರತ ತಂಡಕ್ಕೆ ಬಿಗ್ ಶಾಕ್ ಆಗಿದ್ದು, ಟೀಂ ಇಂಡಿಯಾದಿಂದ ವಾಷಿಂಗ್ಟನ್ ಸುಂದರ್ ಹೊರನಡೆದಿದ್ದಾರೆ. ಆದ್ರೆ ಸುಂದರ್ ಬದಲಾಗಿ ಆರ್ಸಿಬಿ ತಂಡದ ಆಟಗಾರ ಒಬ್ಬ ಆಯ್ಕೆ ಆಗಿದ್ದಾನೆ.
ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಆರ್ಸಿಬಿ ಆಟಗಾರ: ವಾಷಿಂಗ್ಟನ್ ಸುಂದರ್ ಗಾಯಗೊಂಡ ನಂತರ, ಬಿಸಿಸಿಐ ಅವರ ಬದಲಿಗೆ ಆಲ್ ರೌಂಡರ್ ಶಹಬಾಜ್ ಅಹ್ಮದ್ ಅವರನ್ನು ತಂಡಕ್ಕೆ ಸೇರಿಕೊಂಡಿದ್ದಾರೆ. ಬಂಗಾಳದ ಶಹಬಾಜ್ ಅಹ್ಮದ್ ಪ್ರಥಮ ದರ್ಜೆ ಮತ್ತು ಲೀಸ್ಟ್ ಎ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಐಪಿಎಲ್ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 16 ಪಂದ್ಯಗಳನ್ನು ಆಡುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರು. ಶಹಬಾಜ್ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಜಿಂಬಾಬ್ವೆ ಸರಣಿಯಿಂದ ಸುಂದರ್ ಔಟ್: ಹೌದು, ಟೀಂ ಇಂಡಿಯಾದ ಯುವ ತಂಡ ಆಗಸ್ಟ್ 18ರಿಂದ ಜಿಂಬಾಬ್ವೆ ವಿರುದ್ಧದ 3 ಪಮದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಆದರೆ ತಂಡದಲ್ಲಿ ಆಯ್ಕೆ ಆಗಿದ್ದ ಪ್ರಮುಖ ಆಟಗಾರ ವಾಷಿಂಗ್ಟನ್ ಸುಂದರ್ ಇಂಜುರಿಗೆ ಒಳಗಾಗಿದ್ದು, ಜಿಂಬಾಬ್ವೆ ಪ್ರವಾಸದಿಂದ ದೂರಸರಿದಿದ್ದಾರೆ. ಹೀಗಾಗಿ ಟೀಂ ಇಂಡಿಯಾಗೆ ಇದು ದೊಡ್ಡ ಸಮಸ್ಯೆ ಆಗಿದೆ. ರಾಯಲ್ ಲಂಡನ್ ಚಾಂಪಿಯನ್ಷಿಪ್ ನಲ್ಲಿ ಆಡುತ್ತಿದ್ದು, ಈ ವೇಳೆ ಸುಂದರ್ ಪಿಲ್ಡಿಂಗ್ ಮಾಡುವಾಗ ಗಾಯಕ್ಕೆ ತುತ್ತಾಗಿದ್ದರು.
IND vs ZIM ಏಕದಿನ ಸರಣಿಯ ವೇಳಾಪಟ್ಟಿ: ಭಾರತ-ಜಿಂಬಾಬ್ವೆ ಮೊದಲ ಏಕದಿನ ಪಂದ್ಯ – 18 ಆಗಸ್ಟ್ ಹರಾರೆ ಸ್ಪೋರ್ಟ್ ಕ್ಲಬ್
ಭಾರತ-ಜಿಂಬಾಬ್ವೆ 2ನೇ ಏಕದಿನ ಪಂದ್ಯ – 20 ಆಗಸ್ಟ್ ಹರಾರೆ ಸ್ಪೋರ್ಟ್ ಕ್ಲಬ್
ಭಾರತ-ಜಿಂಬಾಬ್ವೆ 3ನೇ ಏಕದಿನ ಪಂದ್ಯ – 22 ಆಗಸ್ಟ್ ಹರಾರೆ ಸ್ಪೋರ್ಟ್ ಕ್ಲಬ್
ಭಾರತ ಮತ್ತು ಜಿಂಬಾಬ್ವೆ ತಂಡಗಳ ಬಲಾಬಲ: ಭಾರತ ಮತ್ತು ಜಿಂಬಾಬ್ವೆ ತಂಡಗಳು ಒಟ್ಟು 63 ಏಕದಿನ ಪಂದ್ಯಗಳಲ್ಲಿ ಸೆಣಸಾಡಿವೆ. ಇದರಲ್ಲಿ ಭಾರತ 51 ಪಂದ್ಯಗಳನ್ನು ಗೆದ್ದಿದ್ದರೆ, ಜಿಂಬಾಬ್ವೆ 10 ಪಂದ್ಯಗಳನ್ನು ಗೆದ್ದಿದೆ. ಉಳಿದ 2 ಪಂದ್ಯಗಳು ಟೈ ನಲ್ಲಿ ಕೊನೆಗಂಡಿವೆ. 2016ರಲ್ಲಿ ಭಾರತ ಮತ್ತು ಜಿಂಬಾಬ್ವೆ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಈ ಸರಣಿಗೆ ವಿರಾಟ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವು ಪ್ರಮುಖ ಆಟಗಾರರಿಗೆ ಈ ಸರಣಿಗೆ ವಿಶ್ರಾಂತಿ ನೀಡಲಾಗಿದೆ.
ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (WK), ಸಂಜು ಸ್ಯಾಮ್ಸನ್ (WK), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ದೀಪಕ್ ಚಹಾರ್, ಶಹಬಾಜ್ ಅಹ್ಮದ್.