ಲವ್ ಸ್ಟೋರಿ ಜೊತೆಗೆ ಔಟ್ ಅಂಡ್ ಔಟ್ ಆ್ಯಕ್ಷನ್ ಕಮರ್ಷಿಯಲ್ ಸಿನಿಮಾವಾಗಿರುವ “ವಾಮನ’ ಟೀಸರ್ ಆಗಸ್ಟ್ 15ರಂದು ರಿಲೀಸ್ ಆಗಿದೆ. ನಿರ್ಮಾಪಕ ಚೇತನ್ ಕುಮಾರ್ ಹುಟ್ಟುಹಬ್ಬ ಹಾಗೂ ಸ್ವಾತಂತ್ರ್ಯೋತ್ಸವದ ದಿನದ ವಿಶೇಷ ಉಡುಗೊರೆಯಾಗಿ “ವಾಮನ’ ಟೀಸರ್ ಬಿಡುಗಡೆಯಾಗಿದೆ. ಕನ್ನಡ, ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿರುವ ಶಂಕರ್ ವಾಮನ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಧ್ವನೀರ್ಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ಬಣ್ಣ ಹಚ್ಚಿದ್ದಾರೆ. ಈಗಾಗಲೇ 70 ದಿನದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಶೀಘ್ರದಲ್ಲಿಯೇ ಬಾಕಿ ಉಳಿದ ಚಿತ್ರೀಕರಣ ಮುಗಿಸಲಿದೆ.
ಹತ್ತಾರು ವರ್ಷಗಳಿಂದ ಸಿನಿಮಾ ಕನಸು ಕಂಡಿದ್ದ ನಿರ್ಮಾಪಕ ಚೇತನ್ ಈಗ “ವಾಮನ’ ಚಿತ್ರದ ಮೂಲಕ ತಮ್ಮ ಕನಸ್ಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಚೇತನ್ ಕುಮಾರ್ ಸಿನಿಮಾ ಮೇಲಿನ ಪ್ರೀತಿಯಿಂದ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದ ನಾಯಕ ಧನ್ವೀರ್ ಆತ್ಮೀಯ ಗೆಳೆಯ. ಹೀಗಾಗಿ ನಿರ್ದೇಶಕರು ಹೇಳಿದ ಕಥೆಗೆ ಧನ್ವೀರ್ ಫಿದಾ ಆಗಿ ಅದ್ಧೂರಿಯಾಗಿ “ವಾಮನ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ತಮ್ಮದೇ “ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್’ ಬ್ಯಾನರ್ನಡಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.