ಕೂಗು ನಿಮ್ಮದು ಧ್ವನಿ ನಮ್ಮದು

ಚರ್ಮದ ಮೇಲಿನ ದದ್ದು, ತುರಿಕೆಗೆ ಈ ಮನೆಮದ್ದುಗಳು ಬೆಸ್ಟ್‌

ಎಲ್ಲಾ ಕಾಲದಲ್ಲಿಯೂ ಚರ್ಮವನ್ನು ಆರೈಕೆ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಬೇಸಿಗೆಯಲ್ಲಿ ಬೆವರಿನಿಂದ, ಸೂರ್ಯನ ಬಿಸಿಲಿಗೆ ಸುಡುವುದರಿಂದ ಕಾಪಾಡಿಕೊಂಡರೆ, ಚಳಿಗಾಲದಲ್ಲಿ ಬಿರುಕು ಬಿಡುವ ಚರ್ಮವನ್ನು ರಕ್ಷಿಸಿಕೊಳ್ಳಬೇಕು. ಇನ್ನು ಮಳೆಗಾಲದಲ್ಲಂತೂ ಫಂಗಲ್‌ ಸೋಂಕು, ಇನ್ಫೆಕ್ಷನ್‌ನಿಂದ ಚರ್ಮವನ್ನು ಕಾಪಾಡಿಕೊಳ್ಳುವ ಅಗತ್ಯವಿರುತ್ತದೆ. ಚರ್ಮಕ್ಕೆ ಕಾಯಿಲೆ ಬಂದ ಮೇಲೆ ಗುಣಪಡಿಸುವುದಕ್ಕಿಂತ ನೈಸರ್ಗಿಕ ಪದಾರ್ಥಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳುವುದು ಒಳ್ಳೆಯದು. ಆದರೂ ಕೆಲವೊಮ್ಮೆ ಚರ್ಮದ ಮೇಲೆ ತುರಿಕೆಯ ಗುಳ್ಳೆಗಳು, ದದ್ದು, ನೀರಿನ ಗುಳ್ಳೆಗಳು ಆಗಿಬಿಡುತ್ತವೆ. ಅಂತಹ ಸಂದರ್ಭದಲ್ಲಿ ಮನೆಯಲ್ಲಿ ಹೇಗೆ ಆರೈಕೆ ಮಾಡಬೇಕು ಎನ್ನುವ ಟಿಪ್ಸ್‌ ಇಲ್ಲಿದೆ ನೋಡಿ.


ಬೇವಿನ ಎಲೆಗಳು: ನೈಸರ್ಗಿಕವಾಗಿ ಸಿಗುವ ವಸ್ತುಗಳಲ್ಲಿ ಬೇವು ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಬೇವಿನ ಎಲೆಗಳು ಉರಿಯೂತದ ಗುಣಲಕ್ಷಣಗಳಿಂದಾಗಿ ಚರ್ಮದ ಕೆಂಪು, ಊತ ಮತ್ತು ತುರಿಕೆಗಳನ್ನು ನಿವಾರಿಸುತ್ತದೆ. ಬೇವು ಸಹ ನೈಸರ್ಗಿಕ ಆಂಟಿಹಿಸ್ಟಮೈನ್ ಆಗಿದೆ, ಅದಕ್ಕಾಗಿಯೇ ಇದನ್ನು ಚರ್ಮದ ಅಲರ್ಜಿಗಳಿಗೆ ಮನೆಮದ್ದುಗಳಲ್ಲಿ ಬಳಸಲಾಗುತ್ತದೆ. ಬೇವಿನ ಎಲೆಗಳ ಪೇಸ್ಟ್‌ ತಯಾರಿಸಿ ತುರಿಕೆ, ದದ್ದು ಇರುವ ಜಾಗದಲ್ಲಿ ಹಚ್ಚಬಹುದು. ಅಥವಾ ಸ್ನಾನ ಮಾಡುವಾಗ ಬಿಸಿ ನೀರಿಗೆ ಬೇವಿನ ಎಲೆಗಳನ್ನು ಹಾಕಿಕೊಂಡು ಸ್ನಾನ ಮಾಡಿದರೆ ಚರ್ಮದ ಸಮಸ್ಯೆಗಳನ್ನು ನಿವಾರಿಸಬಹುದು.

ತುಳಸಿ: ತುಳಸಿಯ ಔಷಧೀಯ ಗುಣಗಳು ಭಾರತದಲ್ಲಿ ಬಹಳ ಹಿಂದಿನಿಂದಲೂ ತಿಳಿದಿವೆ. ಇದು ಕ್ಟ್ರಮ್ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮವನ್ನು ಸೋಂಕುಗಳಿಂದ ಪರಿಣಾಮಕಾರಿಯಾಗಿ ರಕ್ಷಿಸುತ್ತದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ಇದು ಊತ ಮತ್ತು ತುರಿಕೆಗಳನ್ನು ಕಡಿಮೆ ಮಾಡುತ್ತದೆ, ಇದು ಚರ್ಮದ ಅಲರ್ಜಿಯನ್ನು ನೈಸರ್ಗಿಕವಾಗಿ ತೊಡೆದುಹಾಕಲು ಉತ್ತಮ ಮನೆಮದ್ದಾಗಿದೆ. 8-10 ತುಳಸಿ ಎಲೆಗಳನ್ನು ತಂದು ಅವುಗಳನ್ನು ಚೆನ್ನಾಗಿ ತೊಳೆದು, ಮಿಕ್ಸಿ ಮಾಡಿ, ಚರ್ಮದ ಸಮಸ್ಯೆ ಇರುವ ಜಾಗದಲ್ಲಿ ಹಚ್ಚಿದರೆ ತುರಿಕೆ, ದದ್ದುಗಳು ನಿವಾರಣೆಯಾಗುತ್ತವೆ. ತುಳಸಿಯನ್ನು ನೀರಿನಲ್ಲಿ ನೆನೆಸಿ ಆ ನೀರನ್ನು ಸೇವನೆ ಮಾಡಿದರೂ ಕೂಡ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಪುದೀನಾ ಎಣ್ಣೆ: ಪುದೀನಾ ಎಣ್ಣೆಯಲ್ಲಿ ಮೆಂಥಾಲ್‌ನ ಅಂಶಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ, ಇದು ನೋವಿನ ಅಥವಾ ತುರಿಕೆ ದದ್ದುಗಳ ಮೇಲೆ ಅನ್ವಯಿಸಿದಾಗ ತಕ್ಷಣದ ಪರಿಹಾರವನ್ನು ನೀಡುತ್ತದೆ.

ಪುದೀನಾ ಎಣ್ಣೆಯನ್ನು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ತುರಿಕೆ ಗುಳ್ಳೆಯಾದ ಜಾಗದಲ್ಲಿ ಹಚ್ಚುವುದರಿಂದ ದದ್ದುಗಳು ಕಡಿಮೆಯಗುತ್ತವೆ.ಪುದೀನಾ ಎಣ್ಣೆಯನ್ನು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ತುರಿಕೆ ಗುಳ್ಳೆಯಾದ ಜಾಗದಲ್ಲಿ ಹಚ್ಚುವುದರಿಂದ ದದ್ದುಗಳು ಕಡಿಮೆಯಗುತ್ತವೆ.

error: Content is protected !!