ಕೂಗು ನಿಮ್ಮದು ಧ್ವನಿ ನಮ್ಮದು

ಸುದೀಪ್ ಎದುರಲ್ಲೇ ಗುಡುಗಿದ ಸೋನು ಶ್ರೀನಿವಾಸ್ ಗೌಡ, ಖಡಕ್ ವಾರ್ನಿಂಗ್ ಕೊಟ್ಟ ಕಿಚ್ಚ.

ಬೆಂಗಳೂರು: ಬಿಗ್ ಬಾಸ್ ಒಟಿಟಿ ಮನೆಯಲ್ಲಿ ಕಿಚ್ಚ ಸುದೀಪ್ ಅವರು ಮೊದಲ ವಾರದ ಪಂಚಾಯಿತಿ ನಡೆಸಿದ್ದು, ಕೆಲವು ವಿಚಾರಗಳು ಚರ್ಚೆ ಆಗಿವೆ. ಈ ವೇಳೆ ಕಿಚ್ಚ ಸುದೀಪ್ ಎದುರಲ್ಲೇ ಗುಡುಗಿದ ಸೋನು ಶ್ರೀನಿವಾಸ್ ಗೌಡಗೆ ಕಿಚ್ಚ ಸುದೀಪ್ ನೀವು ಹೀಗೆ ಮಾಡಿದ್ರೆ ಈ ಶೋ ನಡೆಯಲ್ಲ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಬಿಗ್ ಬಾಸ್ ಕನ್ನಡ ಒಟಿಟಿ’ ಕಾರ್ಯಕ್ರಮದಲ್ಲಿ ಒಂದು ವಾರ ಕಳೆದಿದೆ. ವಾರದ ಪಂಚಾಯಿತಿಯಲ್ಲಿ ‘ಯೆಸ್ ಅಥವಾ ನೋ’ ಎಂಬ ರೌಂಡ್ ಗಮನ ಸೆಳೆಯುತ್ತಿದೆ. ಈ ರೌಂಡ್ನಲ್ಲಿ ಸ್ಪರ್ಧಿಗಳಿಗೆ ವಿವಿಧ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದೇ ರೀತಿ ಸ್ಪರ್ಧಿಗಳಿಗೆ ಸುದೀಪ್ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಒಬ್ಬರನ್ನೊಬ್ಬರು ಕಾಲೆಳೆಯುವುದು ಸಹಜ. ಆದ್ರೆ ಈ ವಿಚಾರವನ್ನ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ಪಾಸಿಟಿವ್ ಆಗಿ ಸ್ವೀಕರಿಸಿಲ್ಲ. ತಮಾಷೆ ಮಾಡಿದವರ ವಿರುದ್ಧ ಸೋನು ಸುದೀಪ್ ಎದುರಲ್ಲೇ ಗುಡುಗಿದ್ದಾರೆ. ಇದನ್ನು ಗಮನಿಸಿದ ಸುದೀಪ್ ಸೋನು ಗೌಡಾಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ವಾರದ ಪಂಚಾಯಿತಿಯಲ್ಲಿ ಸೋನುಗೆ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್, ನೀವು ತಮಾಷೆ ಮಾಡಿದಾಗ ಬೇರೆಯವರು ನಗುತ್ತಾರೆ. ಆದ್ರೆ ಬೇರೆಯವರು ನಿಮ್ಮ ಮೇಲೆ ತಮಾಷೆ ಮಾಡಬಾರದು ಎಂದರೆ ಅದು ಸರಿಯಲ್ಲ. ಇನ್ಮುಂದೆ ನೀವು ಬೇರೆಯವರಿಗೆ ಲೇವಡಿ ಮಾಡುವಂತಿಲ್ಲ. ನೀವು ಹೀಗೆ ಮಾಡಿದ್ರೆ ಈ ಶೋ ನಡೆಯಲ್ಲ ಎಂದು ಸೋನು ಗೌಡ ವರ್ತನೆಗೆ ವಾರ್ನ್ ಮಾಡಿದ್ದಾರೆ.

error: Content is protected !!