ಬೆಂಗಳೂರು : ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಮೈದಾನದಲ್ಲಿ ತ್ರಿವರ್ಣ ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಶಾಸಕ ಜಮೀರ್ ಅಹ್ಮದ್ ಮಾತನಾಡಿ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿರೋದು ನನಗೆ ಖುಷಿ ತಂದಿದೆ ಎಂದು ಹೇಳಿದ್ಧಾರೆ.
ಜಮೀರ್ ಮಾತನಾಡಿ ನಾನು ಅಂದುಕೊಂಡಂತೆ ಆಗಿದೆ. ನಾನು ಎರಡು ತಿಂಗಳ ಹಿಂದೆಯೇ ಸ್ವಾತಂತ್ರ್ಯ ಆಚರಣೆ ಬಗ್ಗೆ ಹೇಳಿದ್ದೆ. ಇನ್ನು ಮುಂದೆ ಇಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಈ ಮೂರು ಆಚರಣೆ ಮಾಡುತ್ತೇವೆ. ಮುಂದಿನ ಧಾರ್ಮಿಕ ಹಬ್ಬದ ಬಗ್ಗೆ ಸರ್ಕಾರ ಚಿಂತನೆ ಮಾಡಲಿದೆ. ನಾನು ನಿರ್ಧಾರ ಮಾಡಕ್ಕಾಗಲ್ಲ, ಇದು ಈಗ ಸರ್ಕಾರದ ಆಸ್ತಿಯಾಗಿದೆಂದು ತಿಳಿಸಿದ್ದಾರೆ