ಕೋಲಾರ: ಕೋಲಾರದಲ್ಲಿ ಸ್ವಾತಂತ್ರೋತ್ಸವ ಸಡಗರ ಜೋರಾಗಿದೆ. ಸಂಸದ ಎಸ್.ಮುನಿಸ್ವಾಮಿ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೆ ಪ್ರತೀ ತಾಲ್ಲೂಕಿಗೂ ಮೂವತೈದು ಸಾವಿರ ರಾಷ್ಟ್ರಧ್ವಜಗಳನ್ನು ನೀಡಿದ್ದಾರೆ. ದೇಶದಲ್ಲೇ ಅತಿದೊಡ್ಡದಾದ 1,20,000 ಚದರಡಿಯ ರಾಷ್ಟದ್ವಜ ಹಾರಿಸಲು ಸಿದ್ದತೆ ನಡೆಸಿದ್ದಾರೆ.ನಾಳೆ ವಿದ್ಯಾರ್ಥಿಗಳಿಗೆ ಹದಿನೈದು ಸಾವಿರ ರಾಷ್ಟ್ರದ್ವಜ ನೀಡಲಾಗ್ತಿದೆ. ಕಳೆದ ಎಂಟು ದಿನಗಳಿಂದ ಕೋಲಾರ ನಗರದ ಪೇಟೆ ಚಾಮನಹಳ್ಳಿ ಬಳಿ ದ್ವಜ ಸಿದ್ದತೆ ನಡೆದಿದೆ.
ಸಂಸದರಿಗೆ ಬಿಜೆಪಿ ಮಹಿಳಾ ಮೋರ್ಚಾ, ಸೇರಿದಂತೆ ಅನೇಕ ಕಾರ್ಯಕರ್ತರು ಸಾಥ್ ನೀಡುವ ಮೂಲಕ ಸ್ವಾತಂತ್ರ್ಯ ದಿನಕ್ಕೆ ತಯಾರಿ ನಡೆಸಿಕೊಂಡಿದ್ದಾರೆ. ಸ್ವಾತಂತ್ರ್ಯ ಕ್ಕಾಗಿ ಲಕ್ಷಾಂತರ ಜನರು ಪ್ರಾಣ ತ್ಯಾಗ ಮಾಡಿದ್ದು ಅವರಿಗೆ ಗೌರವ ಸೂಚಿಸುವ ಸಲುವಾಗಿ ರಾಷ್ಟ್ರ ಧ್ವಜ ಹಾರಿಸಿ ಒಗ್ಗಟ್ಟು ಪ್ರದರ್ಶನ ಮಾಡಬೇಕು, ಆಗಷ್ಟ್ ಹದಿಮೂರರಿಂದ ಹದಿನೈದರವರೆಗೆ ಮನೆ ಮೇಲೆ ಹಾಗೂ ಅಂಗಡಿಗಳಲ್ಲಿ ರಾಷ್ಟ್ರ ಹಾರಿಸುವ ಮೂಲಕ 75 ನೇ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕು ಎಂದು ಸಂಸದ ಮುನಿಸ್ವಾಮಿ ಕರೆ ನೀಡಿದ್ದಾರೆ.
ಇನ್ನು ಇದೇ ಮೊದಲ ಬಾರಿಗೆ ಕೋಲಾರದಲ್ಲಿ ದೇಶದಲ್ಲೇ ಅತಿದೊಡ್ಡ ರಾಷ್ಟ ದ್ವಜ ಹಾರಿಸುವ ಸಲುವಾಗಿ 1 ಲಕ್ಷ 20 ಸಾವಿರ ಚದರಡಿಯ ಬೃಹತ್ ದ್ವಜ ತಯಾರಾಗುತ್ತಿದ್ದು ಆಗಷ್ಟ್ 15 ರಂದು ಕೋಲಾರ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಲಾಗುವುದು ಎಂದು ಸಂಸದ ಮುನಿಸ್ವಾಮಿ ತಿಳಿಸಿದ್ದಾರೆ.