ಹೆಣ್ಣಿಗೆ ತುಟಿಗೆ ಲಿಪ್ಟಿಕ್, ಉಗುರುಗಳಿಗೆ ನೈಲ್ ಪಾಲಿಶ್ ಮತ್ತು ಹಣೆಗೆ ಸಣ್ಣ ಸಿಂಧೂರ ಆಕೆಯ ಅಂದವನ್ನು ಎಲ್ಲಿಂದ ಎಲ್ಲಿಗೋ ತೆಗೆದುಕೊಂಡು ಹೋಗಿ ನಿಲ್ಲಿಸುತ್ತದೆ. ಪ್ರತಿಬಾರಿ ಪಾರ್ಟಿ ಅಥವಾ ಯಾವುದಾದರೂ ಫಂಕ್ಷನ್ ಗೆ ಹೋಗುವ ಸಂದರ್ಭದಲ್ಲಿ ಹಾಕಿಕೊಳ್ಳುವ ಡ್ರೆಸ್ ಗೆ ಮ್ಯಾಚ್ ಆಗುವಂತಹ ಕಿವಿ ಓಲೆಗಳು, ಹಣೆಯಲ್ಲಿ ಬೊಟ್ಟು, ಸ್ಯಾಂಡಲ್ಸ್ ಜೊತೆಗೆ ನೈಲ್ ಪಾಲಿಶ್ ಅನ್ನು ಉಗುರುಗಳಿಗೆ ಹಾಕಿಕೊಳ್ಳುವುದು ಹೆಣ್ಣು ಮಕ್ಕಳ ಅಭ್ಯಾಸವಾಗಿರುತ್ತದೆ.
ಆದರೆ ಪ್ರತಿ ಬಾರಿ ಹೀಗೆ ಉಗುರುಗಳಿಗೆ ನೈಲ್ ಪಾಲಿಶ್ ಹಾಕುವುದರಿಂದ, ಸಹಜವಾಗಿ ಉಗುರುಗಳ ಬಣ್ಣ ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಏಕೆಂದರೆ ಬಣ್ಣಗಳ ಕಲೆ ಉಗುರುಗಳ ಮೇಲೆ ಹಾಗೇ ಉಳಿದಿರುತ್ತದೆ. ಇದನ್ನು ಹೋಗಲಾಡಿಸುವುದು ಸ್ವಲ್ಪ ಕಷ್ಟವೆನಿಸಿದರೂ ಕೂಡ ಈ ಲೇಖನದಲ್ಲಿ ನಾವು ತಿಳಿಸಿರುವ ಕೆಲವೊಂದು ಸುಲಭದ ಉಪಾಯಗಳನ್ನು ಮಾಡುವುದರಿಂದ ನೀವು ಅಂದುಕೊಂಡ ಹಾಗೆ ಉಗುರಿನ ಬಣ್ಣವನ್ನು ಮತ್ತೆ ಮೊದಲಿನ ಹಾಗೆ ಬಿಳಿ ಬಣ್ಣಕ್ಕೆ ತಿರುಗಿಸಬಹುದು. ಈ ಸಮಸ್ಯೆಗೆ ಕೆಲವೊಂದು ಟಿಪ್ಸ್ ಇಲ್ಲಿವೆ. ಆದರೆ ನೀವು ಈ ಕೆಳಗಿನ ಪರಿಹಾರಗಳನ್ನು ಮಾಡಿದ ನಂತರ ನಿಮ್ಮ ಕೈಗಳಿಗೆ ಮತ್ತು ಉಗುರುಗಳಿಗೆ ಮಾಯಿಶ್ಚರೈಸರ್ ತಪ್ಪದೇ ಅನ್ವಯಿಸಿ.
ನೇಲ್ ಪಾಲಿಶ್ ವಿಷ್ಯದಲ್ಲಿ
ಒಂದು ವೇಳೆ ನೀವು ನಿಮ್ಮ ಉಗುರುಗಳಿಗೆ ನೈಲ್ ಪಾಲಿಶ್ ಹಾಕಿಕೊಳ್ಳಬೇಕು ಎಂದುಕೊಂಡಿದ್ದರೆ, ವಾರ್ನಿಶ್ ಹಚ್ಚುವ ಮುಂಚೆ ಬೇಸ್ ಕೋಟ್ ಅಪ್ಲೈ ಮಾಡಿ. ಏಕೆಂದರೆ ನೈಲ್ ಪಾಲಿಶ್ ನಲ್ಲಿ ಇರುವಂತಹ ಟಿಂಟ್ ಉಗುರುಗಳ ಮೇಲೆ ಕಲೆಗಳನ್ನು ಹಾಗೆ ಬಿಡುವ ಸಾಧ್ಯತೆ ಇರುತ್ತದೆ.
ಟೂತ್ ಪೇಸ್ಟ್ ಬಳಕೆ ಮಾಡುವುದು
ಉಗುರು ಈಗಾಗಲೇ ಬಿಳಿ ಬಣ್ಣಕ್ಕೆ ತಿರುಗಿರುವವರಿಗೆ ಇದು ಸುಲಭವಾಗಿ ಅನ್ವಯವಾಗುತ್ತದೆ. ಟೂತ್ಪೇಸ್ಟ್ ನಲ್ಲಿ ಹೈಡ್ರೋಜನ್ ಪರಾಕ್ಸೈಡ್ ಇರುತ್ತದೆ. ಇದು ನಿಮ್ಮ ಉಗುರುಗಳ ಬಣ್ಣವನ್ನು ಬದಲಿಸಲು ನೆರವಾಗುತ್ತದೆ.
ಆದರೆ ನೀವು ಬಳಸುವ ಟೂತ್ ಪೇಸ್ಟ್ ನಲ್ಲಿ 3% ಹೈಡ್ರೋಜನ್ ಪರಾಕ್ಸೈಡ್ ಮಾತ್ರ ಇರುವುದನ್ನು ನೀವು ಖಚಿತಪಡಿಸಿಕೊಳ್ಳಿ. ಏಕೆಂದರೆ ಇದಕ್ಕಿಂತ ಹೆಚ್ಚಾದರೆ ಅದು ನಿಮ್ಮ ಉಗುರುಗಳಿಗೆ ಹಾನಿ ಯಾಗಬಹುದು.
ಇದನ್ನು ಬಳಸುವ ವಿಧಾನ ಹೇಗೆ?
ಮೊದಲಿಗೆ ಸ್ವಲ್ಪ ಟೂತ್ಪೇಸ್ಟ್ ತೆಗೆದುಕೊಂಡು ಅದನ್ನು ನಿಮ್ಮ ಉಗುರಿನ ಮೇಲೆ ಹಚ್ಚಿಕೊಳ್ಳಿ.
15 ನಿಮಿಷಗಳು ಅದನ್ನು ಹಾಗೇ ಇರಲು ಬಿಟ್ಟು ಸ್ವಲ್ಪ ಒಣಗಿಸಿ. ಈಗ ಒಂದು ಮೆತ್ತಗಿನ ಟೂತ್ ಬ್ರಷ್ ತೆಗೆದುಕೊಂಡು ಅಥವಾ ನೈಲ್ ಬ್ರಷ್ ಇದ್ದರೆ ಆದ್ದರಿಂದ ಉಗುರುಗಳನ್ನು ನಯವಾಗಿ ಉಜ್ಜಿ.
ಒಮ್ಮೆ ಒಂದು ಉಗುರನ್ನು ಮಾತ್ರ ಉಜ್ಜಲು ಮುಂದಾಗಿ. ಯಾವುದೇ ಕಾರಣಕ್ಕೂ ವೃತ್ತಾಕಾರವಾಗಿ ಉಜ್ಜಬೇಡಿ.
ನಿಂಬೆಹಣ್ಣು ಮತ್ತು ಬೇಕಿಂಗ್ ಸೋಡಾ ಬಳಕೆ ಮಾಡಿ
ನಿಮಗೆಲ್ಲಾ ಗೊತ್ತಿರುವ ಹಾಗೆ ನಿಂಬೆಹಣ್ಣು ಒಂದು ಬ್ಲೀಚಿಂಗ್ ಏಜೆಂಟ್ ಆಗಿದೆ. ಇದು ನಿಮ್ಮ ಹಳದಿ ಬಣ್ಣಕ್ಕೆ ತಿರುಗಿದ ಉಗುರುಗಳನ್ನು ಮತ್ತೆ ಮೊದಲಿನ ಬಣ್ಣಕ್ಕೆ ತರಲು ನೆರವಾಗುತ್ತದೆ. ಇದನ್ನು ಬಳಸುವ ವಿಧಾನ ಹೇಗೆ ಎಂದು ನೋಡೋಣ.
1 ಬೌಲ್ ತೆಗೆದುಕೊಂಡು ಅದರಲ್ಲಿ ಒಂದು ನಿಂಬೆಹಣ್ಣಿನ ರಸ ಹಿಂಡಿಕೊಳ್ಳಿ. ಅದಕ್ಕೆ ಸ್ವಲ್ಪ ಬೇಕಿಂಗ್ ಸೋಡಾ ಹಾಕಿ ನಯವಾದ ಪೇಸ್ಟ್ ತಯಾರು ಮಾಡಿಕೊಳ್ಳಿ. ನೀವು ತೆಗೆದುಕೊಂಡಿರುವ ನಿಂಬೆಹಣ್ಣಿನ ರಸಕ್ಕೆ ತಕ್ಕಂತೆ ಬೇಕಿಂಗ್ ಸೋಡಾ ಹಾಕಿ. ಈಗ ಈ ಪೇಸ್ಟನ್ನು ನಿಮ್ಮ ಉಗುರುಗಳ ಮೇಲೆ ಹಚ್ಚಿ, ಹದಿನೈದು ನಿಮಿಷಗಳು ಹಾಗೆ ಇರಲು ಬಿಡಿ.
ನಂತರ ಇದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ
ದಿನದಲ್ಲಿ ಎರಡು ಬಾರಿ ಈ ರೀತಿ ಮಾಡಿದರೆ ನಿಮಗೆ ಉತ್ತಮ ಫಲಿತಾಂಶಗಳು ಬಹಳ ಬೇಗನೆ ಸಿಗುತ್ತವೆ