ಚಿಕ್ಕ ಮಕ್ಕಳಲ್ಲಿ ಕಿವಿ ನೋವಿನ ಸಮಸ್ಯೆ ಸಾಮಾನ್ಯವಾಗಿದೆ. ಕಿವಿಯಲ್ಲಿ ನೀರು ಹೋಗಬಹುದು, ಶಾಂಪೂ ಅಥವಾ ಸೋಪಿನ ನೀರು ತುಂಬಿಕೊಂಡು ಸಮಸ್ಯೆ ಉಂಟಾಗಬಹುದು. ಕೆಲ ಸೋಂಕಿನಿಂದಲೂ ಕಿವಿ ನೋವು ಉಂಟಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಕೆಲವು ಮನೆಮದ್ದುಗಳನ್ನು ತೆಗೆದುಕೊಳ್ಳಬಹುದು. ಇದು ಕಿವಿ ನೋವನ್ನು ನಿವಾರಿಸುತ್ತದೆ
ಸಾಮಾನ್ಯವಾಗಿ ಕಿವಿ ನೋವಿನ ಸಮಸ್ಯೆ ಮಕ್ಕಳಿಗೆ ತುಂಬಾ ತೊಂದರೆ ಕೊಡುತ್ತದೆ. ಕಿವಿ ನೋವು ಸೋಂಕು, ಕಿವಿಯ ಕೀವು ಅಥವಾ ಕಿವಿಯಲ್ಲಿ ನೀರು ತುಂಬಿ ನೋವು ಉಂಟಾಗುತ್ತದೆ. ನೋವು ಹೆಚ್ಚಾದ್ರೆ ಮಗು ಅಳಲು ಪ್ರಾರಂಭಿಸುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಮನೆಮದ್ದುಗಳನ್ನು ಮಾಡಬಹುದು. ಮಕ್ಕಳ ಕಿವಿ ನೋವಿಗೆ ಪರಿಹಾರಸಿಗುತ್ತದೆ.
ಮಗುವಿನ ಕಿವಿನೋವು ಮನೆಮದ್ದುಗಳಿಂದ ಉತ್ತಮವಾಗದಿದ್ದರೆ, ವೈದ್ಯರನ್ನು ಸಂಪರ್ಕಿಸಬೇಕು. ಮಕ್ಕಳಿಗೆ ಕಿವಿ ನೋವು ಉಂಟಾದಾಗ ಈ ಮನೆಮದ್ದುಗಳನ್ನು ಟ್ರೈ ಮಾಡಿ. ಐಸ್ ಕ್ಯೂಬ್: ಕಿವಿ ನೋವು ತಡೆಯಲು ಅನೇಕ ಮಕ್ಕಳಿಗೆ ಕಷ್ಟವಾಗುತ್ತದೆ. ನೋವು ಕಡಿಮೆ ಆಗಲು ನೀವು ಐಸ್ ಕ್ಯೂಬ್ಗಳನ್ನು ಬಳಸಬಹುದು. ಇದು ನೋವನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ಹತ್ತಿ ಬಟ್ಟೆಯಲ್ಲಿ ಐಸ್ ತುಂಡನ್ನು ತೆಗೆದುಕೊಂಡು ಅದನ್ನು ಕಿವಿಯ ಹಿಂದೆ ಅಥವಾ ನೋವಿನ ಜಾಗಕ್ಕಿಡಿ. ಇದು ಮಕ್ಕಳಿಗೆ ಶೀಘ್ರವೇ ನೋವಿನಿಂದ ಪರಿಹಾರ ನೀಡುತ್ತದೆ.
ತುಳಸಿ ಎಲೆಗಳ ರಸ: ತುಳಸಿ ಎಲೆಗಳು ಕಿವಿಯಲ್ಲಿನ ನೋವನ್ನು ಹೋಗಲಾಡಿಸಲು ತುಂಬಾ ಪರಿಣಾಮಕಾರಿ. ಇದಕ್ಕಾಗಿ ತುಳಸಿ ಎಲೆಗಳನ್ನು ತೆಗೆದುಕೊಂಡು ಈಗ ಅವುಗಳನ್ನು ಪುಡಿಮಾಡಿ ಮತ್ತು ರಸವನ್ನು ತೆಗೆಯಿರಿ. ಈಗ ಈ ರಸವನ್ನು ಕಿವಿಗೆ ಹಚ್ಚಿಕೊಳ್ಳಿ.
ಆಲಿವ್ ಎಣ್ಣೆ: ಸೋಂಕಿನಿಂದ ಕಿವಿ ನೋವು ಕಾಣಿಸಿಕೊಂಡ್ರೆ ಆಲಿವ್ ಎಣ್ಣೆಯನ್ನು ಬಳಸಬಹುದು. ಇದು ನೈಸರ್ಗಿಕವಾಗಿ ಕಿವಿ ನೋವನ್ನು ಗುಣಪಡಿಸುವುದು ಮಾತ್ರವಲ್ಲದೆ ಕಿವಿಗಳಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
ಕಿವಿ ನೋವನ್ನು ಹೋಗಲಾಡಿಸಲು, ಆಲಿವ್ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಮತ್ತು ಅದರ ಕೆಲವು ಹನಿಗಳನ್ನು ಮಗುವಿನ ಕಿವಿಗೆ ಹಾಕಿ. ಈ ಎಣ್ಣೆಯಿಂದ ಕಿವಿ ಮಸಾಜ್ ಕೂಡ ಮಾಡಬಹುದು. ಇದು ಕಿವಿನೋವಿನಿಂದ ಶೀಘ್ರ ಉಪಶಮನವನ್ನು ನೀಡುತ್ತದೆ