ನಮಗೆಲ್ಲಾ ಗೊತ್ತೇ ಇರುವ ಹಾಗೆ ಮನುಷ್ಯನ ವಯಸ್ಸಿನ ಹಂತ ದಾಟಿದ ಮೇಲೆ ನಿಧಾನವಾಗಿ ತಲೆ ಕೂದಲು ಬೆಳ್ಳಗಾಗುತ್ತಾ ಬರುತ್ತದೆ. ಇದು ಸ್ವಾಭಾವಿಕ ಕೂಡ, ಆದರೆ ಅಚ್ಚರಿಯ ಸಂಗತಿ ಏನೆಂದರೆ, ವಯಸ್ಸು ಇನ್ನೂ ಕೂಡ 20 ದಾಟಿರುವುದಿಲ್ಲ, ಆಗಲೇ ತಲೆ ಕೂದಲಿನಲ್ಲಿ ಬಿಳಿ ಕೂದಲಿನ ಸಮಸ್ಯೆ ಎದ್ದು ಕಾಣುತ್ತದೆ. ಇದಕ್ಕೆಲ್ಲಾ ರಾಸಾಯನಿಕ ಮದ್ದು ಬಳಸುವ ಬದಲು ಮನೆಮದ್ದುಗಳನ್ನು ಬಳಸುವುದೇ ವಾಸಿ ವಯಸ್ಸಾದಂತೆ ಹೇಗೆ ನಮ್ಮ ಚರ್ಮ ತನ್ನ ಕಾಂತಿಯನ್ನು ಕಳೆದುಕೊಂಡು ಸುಕ್ಕುಗಟ್ಟಲು ಪ್ರಾರಂಭ ವಾಗುತ್ತದೆಯೋ, ಅದೇ ರೀತಿಯಾಗಿ ನಮ್ಮ ತಲೆ ಕೂದಲಿನ ಬಣ್ಣ ಕೂಡ ಅಷ್ಟೇ ವಯಸ್ಸಾಗುತ್ತಾ ಹೋದಂತೆ, ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಇದು ಪ್ರಕೃತಿಯ ನಿಯಮ, ಇದನ್ನು ಯಾರೂ ಕೂಡ ತಡೆಯಲು ಸಾಧ್ಯವಿಲ್ಲ! ಬೇಕೆಂದರೆ ಕೆಲವೊಂದು, ಹೇರ್ ಡೈ ಬಳಸಿಕೊಂಡು, ಕೂದಲಿನ ಬಣ್ಣವನ್ನು ಕಪ್ಪಗೆ ಮಾಡಿಕೊಳ್ಳಬಹುದು.
ಆದರೆ ಕೂದಲಿನ ನೈಜ ಬಣ್ಣವನ್ನು ಮತ್ತೆ ವಾಪಸ್ ಮಾಡಲು ಸಾಧ್ಯವಿಲ್ಲ. ಆದರೆ ಬೇಜಾರಿನ ಸಂಗತಿ ಏನೆಂದರೆ, ಈಗಿನ ಕಾಲದಲ್ಲಿ ಸಣ್ಣ ವಯಸ್ಸಿಗೆ ಅಂದರೆ ಇನ್ನೂ 20 ವರ್ಷದ ಕೂಡ ದಾಟಿರದ ಯುವಕ -ಯುವತಿಯರಿಗೆ ಈ ಬಿಳಿ ಕೂದಲಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದಾಗಿ ನಾಲ್ಕು ಜನರ ಮಧ್ಯೆ ತಲೆಯೆತ್ತಿ ಓಡಾಡಲು ಕಷ್ಟವಾಗುವಂತೆ ಅನುಭವ ಉಂಟಾಗುತ್ತಿದೆ. ಸಣ್ಣ ವಯಸ್ಸಿನಲ್ಲಿ ಕೂದಲು ಬಿಳಿಯಾಗಿ ವಯಸ್ಸಾದವರಂತೆ ಕಾಣುತ್ತಿದ್ದೇವೆ ಎನ್ನುವ ಭಾವನೆ ಅವರಲ್ಲಿ ಮೂಡುತ್ತಿದೆ. ಚಿಂತಿಸಬೇಡಿ ಈ ಸಮಸ್ಯೆ ಇರುವವರಿಗೆ ಇಲ್ಲಿದೆ ನೋಡಿ ಸಿಂಪಲ್ ಮನೆ ಮದ್ದುಗಳು
ಮನೆಯಲ್ಲೇ ರೆಡಿ ಮಾಡಿ ಕರ್ಪೂರದ ಎಣ್ಣೆ!
*ಒಂದು ಸಣ್ಣ ಸ್ಟೀಲ್ ಬೌಲ್‌ಗೆ, ಮೂರು-ನಾಲ್ಕು ಟೇಬಲ್ ಚಮಚ ಆಗುವಷ್ಟು ತೆಂಗಿನ ಎಣ್ಣೆಯನ್ನು ಹಾಕಿ ಸ್ವಲ್ಪ ಹೊತ್ತು ಬಿಸಿ ಆಗಲು ಬಿಡಿ ಒಮ್ಮೆ ಈ ಎಣ್ಣೆ ಬಿಸಿಯಾದ ಬಳಿಕ, ಇದಕ್ಕೆ ಒಂದು ದಾಸವಾಳದ ಹೂವುಗಳನ್ನು ಹಾಕಿ, ಒಂದು ಚಮಚದ ಸಹಾಯದಿಂದ, ಕೈಯಾಡಿಸಿ, ಈ ಹೂವು ಎಣ್ಣೆಯಲ್ಲೇ ಬಾಡಿ ಹೋಗುವ ಹಾಗೆ ಮಾಡಿ ಆಮೇಲೆ ಒಂದೆರಡು ನಿಮಿಷದ ಬಳಿಕ, ಗ್ಯಾಸ್ ಸ್ಟವ್ ಆಫ್ ಮಾಡಿ ಇಷ್ಟೆಲ್ಲಾ ಆದ ಬಳಿಕ, ಈ ಮಿಶ್ರಣಕ್ಕೆ , ಒಂದೆರಡು ಕರ್ಪೂರದ ಮಾತ್ರೆಗಳನ್ನು ಪುಡಿ ಮಾಡಿ ಕೊಂಡು ಈ ಮಿಶ್ರಣಕ್ಕೆ ಹಾಕಿ, ಮಿಶ್ರಣ ಮಾಡಿಕೊಳ್ಳಿ. ಆಮೇಲೆ ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ.
ಬಳಿಕ ಪ್ರತಿದಿನ ಈ ಎಣ್ಣೆಯನ್ನು ತಲೆಯ ನೆತ್ತಿಯಿಂದ ಹಿಡಿದು, ತುದಿಯವರೆಗೆ ಹಚ್ಚಿ, ನಯವಾಗಿ ಮಸಾಜ್ ಮಾಡಿಕೊಳ್ಳಿ.
ಪ್ರತಿದಿನವೂ ಈ ಮನೆಮದ್ದನ್ನು ಅನುಸರಿಸುವುದರಿಂದ, ದಿನಾ ಹೋದ ಹಾಗೆ ಬಿಳಿಯಾಗಿರುವ ನಿಮ್ಮ ತಲೆ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ತೆಂಗಿನೆಣ್ಣೆ ಹಾಗೂ ನಿಂಬೆ ರಸ: ಮೊದಲು ಒಂದು ಸಣ್ಣದಾಗಿರುವ ಸ್ಟೀಲ್ ಬೌಲ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಹಾಕಿ ಒಂದೆರಡು ನಿಮಿಷ ಈ ಎಣ್ಣೆ ಬಿಸಿಯಾಗಲು ಬಿಡಿ. ಒಮ್ಮೆ ಈ ಎಣ್ಣೆ ಬಿಸಿಯಾದ ಬಳಿಕ, ಒಂದು ಚಮಚ ಆಗುವಷ್ಟು ನಿಂಬೆ ರಸವನ್ನು ಇದಕ್ಕೆ ಸೇರಿಸಿ. ಆಮೇಲೆ ಚೆನ್ನಾಗಿ ಚೆನ್ನಾಗಿ ಮಿಶ್ರಗೊಳಿಸಿ, ಸ್ವಲ್ಪ ಹೊತ್ತು ಈ ಮಿಶ್ರಣ ತಣ್ಣಗಾಗಲು ಬಿಡಿ.
ಒಮ್ಮೆ ಈ ಎಣ್ಣೆ ತಣ್ಣಗಾದ ಬಳಿಕ, ಇದನ್ನು ತಲೆಕೂದಲಿನ ನೆತ್ತಿಯ ಭಾಗದಿಂದ ಹಿಡಿದು, ಕೂದಲಿನ ಬುಡದವರೆಗೂ ಕೂಡ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿಕೊಳ್ಳಿ.
ಆಮೇಲೆ ಸುಮಾರು 20-30 ನಿಮಿಷಗಳ ಕಾಲ ಬಿಟ್ಟು, ನೈಸರ್ಗಿಕ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ
ಒಳ್ಳೆಯ ಫಲಿತಾಂಶಕ್ಕಾಗಿ ವಾರದಲ್ಲಿ ಒಂದೆರಡು ಬಾರಿಯಾದರೂ, ಈ ಟಿಪ್ಸ್‌ನ್ನು ಅನುಸರಿಸಿದರೆ, ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಔಷಧೀಯ ಗುಣವನ್ನು ಹೊಂದಿರುವ ಕರಿಬೇವಿನ ಎಲೆಗಳು
ಮೊದಲು ಒಂದು ಚಿಕ್ಕದಾದ ಸ್ಟೀಲ್ ಬೌಲ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಹಾಕಿ, ಆಮೇಲೆ ಈ ಎಣ್ಣೆಗೆ ಸ್ವಲ್ಪ ಕರಿಬೇವಿನ ಎಲೆಗಳನ್ನು ಸೇರಿಸಿ, ಚೆನ್ನಾಗಿ ಬಿಸಿಯಾಗಲು ಬಿಡಿ.
ಸುಮಾರು ಎರಡು-ಮೂರು ನಿಮಿಷ ಆದ ಮೇಲೆ ಗ್ಯಾಸ್ ಸ್ಟವ್ ಆಫ್ ಮಾಡಿ, ಸ್ವಲ್ಪ ಹೊತ್ತು ತಣಿಯಲು ಬಿಡಿ.
ಒಮ್ಮೆ ಈ ಎಣ್ಣೆ ತಣ್ಣಗಾದ ಬಳಿಕ, ನಿತ್ಯವೂ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡುತ್ತಾ ಬಂದರೆ ಬಿಳಿ ಕೂದಲಿನ ಸಮಸ್ಯೆ ಇಲ್ಲದಾಗುತ್ತದೆ. ಇನ್ನು ತಲೆಗೆ ಸ್ನಾನ ಮಾಡುವ ಅರ್ಧ ಗಂಟೆಗೆ ಮುಂಚೆ ಈ ಎಣ್ಣೆಗೆ ಮೊಸರು ಅಥವಾ ಮಜ್ಜಿಗೆ ಯನ್ನು ಮಿಶ್ರಮಾಡಿ, ತಲೆ ಕೂದಲಿನ ನೆತ್ತಿಯಿಂದ, ತುದಿಯವರೆಗೂ ಕೂಡ ಮಸಾಜ್ ಮಾಡಿ, ತಲೆಕೂದಲು ತೊಳೆದರೆ, ಕೂದಲು ಹೊಳಪು ಹಾಗೂ ಕಪ್ಪು ಬಣ್ಣವನ್ನು ಪಡೆದುಕೊಳ್ಳುವುದು.