ಕೂಗು ನಿಮ್ಮದು ಧ್ವನಿ ನಮ್ಮದು

ವಿಪರೀತ ಹಲ್ಲು ನೋವಿದ್ದರೆ ಈ ಮನೆಮದ್ದುಗಳನ್ನು ಮಾಡಿ!

ನೀವು ಸೇವಿಸುವ ಆಹಾರ ಪದಾರ್ಥಗಳನ್ನು ಅಗಿಯಲು ಸಹ ಸಾಕಷ್ಟು ತೊಂದರೆ ನೀಡುತ್ತದೆ ಹಲ್ಲು ನೋವು. ಜೊತೆಗೆ ತಣ್ಣನೆಯ ಡ್ರಿಂಕ್ಸ್ ಜ್ಯೂಸ್ ಪಾನೀಯ ಸೇವಿಸಿದಾಗಲೂ ಸಾಕಷ್ಟು ನೋವು ನಿಮ್ಮನ್ನು ಕಾಡುತ್ತದೆ. ಹಲ್ಲಿನ ಒಳಗಿನ ತಿರುಳು ನರಗಳು ನಿಮ್ಮ ದೇಹದಲ್ಲಿ ಅತ್ಯಂತ ಸೂಕ್ಷ್ಮವಾಗಿರುತ್ತವೆ. ಬಾಯಿ ನೋವು ಮತ್ತು ಹಲ್ಲು ನೋವು ಸಾಮಾನ್ಯವಾಗಿ ಕಾಡುವ ಸಮಸ್ಯೆಗಳು ಹಲ್ಲುನೋವು ಆರೋಗ್ಯ ಸಮಸ್ಯೆಯ ಸಾಮಾನ್ಯ ತೊಂದರೆ ಆಗಿದೆ. ಹಲ್ಲು ನೋವು ಏನನ್ನೂ ತಿನ್ನಲು ಸಾಧ್ಯವಾಗದ ಸ್ಥಿತಿ ಆಗಿದೆ.

ಕೆಲವೊಮ್ಮೆ ಹಲ್ಲು ನೋವು ಹೆಚ್ಚಾದಾಗ ಮಾತನಾಡಲೂ ಸಹ ಸಾಕಷ್ಟು ತೊಂದರೆ ಉಂಟಾಗುತ್ತದೆ. ಹಲ್ಲು ನೋವು, ಊತ, ಮತ್ತು ತೊಂದರೆ ಕಾಣಿಸುವುದು ಜೊತೆಗೆ ಇತರೆ ಹಲ್ಲು ನೋವಿನ ರೋಗ ಲಕ್ಷಣಗಳನ್ನು ಅನುಭವಿಸಿರಬಹುದು. ಹಲ್ಲು ನೋವು ಕುಹರ, ದಂತ ಕವಚದ ಸವೆತ, ಸೋಂಕು, ಕೊಳೆ ಮುಂತಾದ ಅನೇಕ ಕಾರಣಗಳಿಂದ ಉಂಟಾಗುವ ತೊಂದರೆ ಆಗಿದೆ. ಇದು ತುಂಬಾ ನೋವಿನಿಂದ ಕೂಡಿರುತ್ತದೆ. ನೀವು ಸೇವಿಸುವ ಆಹಾರ ಪದಾರ್ಥಗಳನ್ನು ಅಗಿಯಲು ಸಹ ಸಾಕಷ್ಟು ತೊಂದರೆ ನೀಡುತ್ತದೆ ಹಲ್ಲು ನೋವು. ಜೊತೆಗೆ ತಣ್ಣನೆಯ ಡ್ರಿಂಕ್ಸ್, ಜ್ಯೂಸ್, ಪಾನೀಯ ಸೇವಿಸಿದಾಗಲೂ ಸಾಕಷ್ಟು ನೋವು ನಿಮ್ಮನ್ನು ಕಾಡುತ್ತದೆ.

ನಿಮ್ಮ ಹಲ್ಲಿನ ಒಳಗಿನ ತಿರುಳು- ನರಗಳು, ಅಂಗಾಂಶ, ಮತ್ತು ರಕ್ತನಾಳಗಳಿಂದ ತುಂಬಿದ ಮೃದುವಾದ ವಸ್ತು ಇದಾಗಿದ್ದು ಸಾಕಷ್ಟು ನೋವುಂಟು ಮಾಡುತ್ತದೆ. ಈ ತಿರುಳು ನರಗಳು ನಿಮ್ಮ ದೇಹದಲ್ಲಿ ಅತ್ಯಂತ ಸೂಕ್ಷ್ಮವಾಗಿರುತ್ತವೆ. ಈ ಸಿರೆಗಳು ಕಿರಿಕಿರಿ ಉಂಟು ಮಾಡಿದಾಗ ಅಥವಾ ಬ್ಯಾಕ್ಟೀರಿಯಾದಿಂದ ಬಾವು, ಸೋಂಕಿಗೆ ಒಳಗಾದಾಗ, ತೀವ್ರ ತರವಾದ ನೋವಿಗೆ ಕಾರಣ ಆಗುತ್ತದೆ.

ಹಲ್ಲಿನ ಕೊಳೆತವು ಕೆಲವೊಮ್ಮೆ ಹೆಚ್ಚು ತೀವ್ರವಾಗುವ ಮೂಲಕ ತೊಂದರೆ ನೀಡಬಹುದು. ಅದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಮನೆಮದ್ದುಗಳಿಂದ ಹಲ್ಲು ನೋವನ್ನು ಹೋಗಲಾಡಿಸಬಹುದು. ಆದರೆ ನೋವು ಕೆಲ ದಿನಗಳ ನಂತರ ಮತ್ತೆ ಉಂಟಾದರೆ ನಿಖರ ಕಾರಣ ಕಂಡು ಹಿಡಿಯಲು ನಿಮ್ಮ ದಂತವೈದ್ಯರನ್ನು ಭೇಟಿ ಮಾಡಿ. ಅದಾಗ್ಯೂ, ಈ ಅಹಿತಕರ ಸ್ಥಿತಿಯಿಂದ ನಿಮಗೆ ರಕ್ಷಣೆ ನೀಡಲು ಯಾವ ಕೆಲವು ಪರಿಣಾಮಕಾರಿ ಮನೆಮದ್ದುಗಳು ಸಹಾಯ ಮಾಡುತ್ತವೆ ಎಂಬುದನ್ನು ಇಲ್ಲಿ ನೋಡೊಣ.

ಹಲ್ಲು ನೋವಿಗೆ ಮನೆಮದ್ದು, ಬೆಳ್ಳಳ್ಳಿ *NCBI ಯ ಸಂಶೋಧನಾ ವರದಿ ಹೇಳುವ ಪ್ರಕಾರ, ಹಲ್ಲುನೋವು ನಿಯಂತ್ರಣಕ್ಕೆ ಬೆಳ್ಳುಳ್ಳಿ ಸೇವನೆ ಸಹಕಾರಿ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಇದು ನೋವು ನಿವಾರಕವಾಗಿ ಕಾರ್ಯ ಮಾಡುತ್ತದೆ. ಹಲ್ಲಿನ ಪ್ಲೇಕ್ ಮೇಲೆ ಇದು ತುಂಬಾ ಪರಿಣಾಮಕಾರಿ ಆಗಿದೆ. *ಹಲ್ಲು ನೋವು ನಿವಾರಣೆಗೆ ನೀವು ಬೆಳ್ಳುಳ್ಳಿ ಚಹಾ ತಯಾರಿಸಿ ಅಥವಾ ಬೆಳ್ಳುಳ್ಳಿ ಜೊತೆ ತಾಜಾ ಲವಂಗ ಅಗಿಯಿರಿ. ಅಥವಾ ಬೆಳ್ಳುಳ್ಳಿ ಪೇಸ್ಟ್ ಅನ್ನು ಹಲ್ಲು ನೋವು ಪೀಡಿತ ಪ್ರದೇಶಕ್ಕೆ ಅನ್ವಯಿಸಬಹುದು.

ಮನೆಯಲ್ಲಿ ಹಲ್ಲುನೋವು ಗುಣಪಡಿಸಲು ಲವಂಗ ಎಣ್ಣೆ ಹಚ್ಚಿರಿ
ನ್ಯಾಷನಲ್ ಸೆಂಟ್ರಲ್ ಫಾರ್ ಬಯೋಟೆಕ್ನಾಲಜಿ ಮಾಹಿತಿಯ ಪ್ರಕಾರ, ಲವಂಗದ ಎಣ್ಣೆಯು ಯುಜೆನಾಲ್ ಮತ್ತು ಅಸಿಟೈಲ್ ಯುಜೆನಾಲ್ ನ್ನು ಹೊಂದಿದೆ. ಇದು ಉರಿಯೂತದ ಮತ್ತು ನೋವು ನಿವಾರಕ ಪ್ರಯೋಜನ ಹೊಂದಿದೆ. ಈ ವೇಳೆ ಇದರ ಬಳಕೆಯು ಹಲ್ಲುನೋವು ಕಡಿಮೆ ಮಾಡುತ್ತದೆ.

ಈರುಳ್ಳಿ ಹಲ್ಲು ನೋವಿಗೆ ಹೇಗೆ ಪರಿಹಾರ ನೀಡುತ್ತದೆ ಈರುಳ್ಳಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಬಾಯಿ ಬ್ಯಾಕ್ಟೀರಿಯಾದ ಮೇಲೆ ಪರಿಣಾಮ ಬೀರುತ್ತವೆ. ಇದನ್ನು ನೈಸರ್ಗಿಕ ಔಷಧಿಯಾಗಿ ಹಲ್ಲುನೋವಿಗೆ ಮನೆಮದ್ದಾಗಿ ಬಳಸುತ್ತಾರೆ. ನೀವು ಹಲ್ಲುನೋವಿನಿಂದ ತೊಂದರೆ ಪಡುತ್ತಿದ್ದರೆ, ಈರುಳ್ಳಿಯ ತುಂಡನ್ನು ನೋವಿನ ಸ್ಥಳದಲ್ಲಿ ಸ್ವಲ್ಪ ಸಮಯ ಇಡಿ.

ಉಪ್ಪು ನೀರು
ಹಲ್ಲಿನ ಸಮಸ್ಯೆಗೆ ಮೂಲ ಪರಿಹಾರ ಉಪ್ಪು. ನೀರಿನಿಂದ ಗಾರ್ಗ್ಲಿಂಗ್ ಮಾಡಿ. ಇದು ಹಲ್ಲುನೋವಿಗೆ ಸರಳ ಹಾಗೂ ಪರಿಣಾಮಕಾರಿ ಪರಿಹಾರ.

ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಉಪ್ಪು ಬೆರೆಸಿ ಮತ್ತು ಅದನ್ನು ಮೌತ್ ವಾಶ್ ಆಗಿ ಬಳಸಿ. ನೀವು ಇದನ್ನು ದಿನಕ್ಕೆ 2-3 ಬಾರಿ ಪುನರಾವರ್ತಿಸಬಹುದು.

error: Content is protected !!