ಚಿತ್ರದುರ್ಗ: ಭೋವಿ ಜನೋತ್ಸವದ ಅಂಗವಾಗಿ ಭೋವಿ ವಡ್ಡರ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಯಲ್ಲಿ ಶೇ.90 ಮತ್ತು ದ್ವೀತಿಯ ಪಿಯುಸಿಯಲ್ಲಿ ಶೇ.85 ರಷ್ಟು ಅಂಕ ಪಡೆದಿದ್ದರೆ ತಾವು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅಂಕ ಪಟ್ಟಿ ನಕಲು, ಜಾತಿ ಪ್ರಮಾಣ ಪತ್ರದ ಧೃಡೀಕರಣ ಪ್ರತಿ, ಪಾಸ್‌ಪೋರ್ಟ್ ಅಳತೆಯ ಫೋಟೊವನ್ನು ಸ್ವರಚಿತ ಅರ್ಜಿಗೆ ಲಗತ್ತಿಸಿ ಜುಲೈ 15ನೇ ತಾರೀಖಿನೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಸಲ್ಲಿಸಬೇಕಾದ ವಿಳಾಸ:
ಅಧ್ಯಕ್ಷರು/ಕಾರ್ಯನಿರ್ವಹಣಾಧಿಕಾರಿಗಳು, ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠ, ಶ್ರೀ ಇಮ್ಮಡಿ ಗಿರಿನಗರ, ಎಂ.ಕೆ.ಹಟ್ಟಿ, ಎನ್.ಎಚ್.48, ಚಿತ್ರದುರ್ಗ. 577502. ಹೆಚ್ಚಿನ ಮಾಹಿತಿಗಾಗಿ: 9901738668 / 9900882964 ಇವರನ್ನು ಸಂಪರ್ಕಿಸಲು ಕೋರಲಾಗಿದೆ.