ಬೆಂಗಳೂರು: ಸಿದ್ದರಾಮೋತ್ಸವ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಬಿಜೆಪಿ ಟಕ್ಕರ್ ನೀಡಿದ್ದು, ತಾವೇ ನಿರ್ದೇಶಿಸುತ್ತಿರುವ ಚಲನಚಿತ್ರಕ್ಕೆ ಸಿದ್ದರಾಮಯ್ಯ ನಾಯಕರಾಗಲು ಹೊರಟಿದ್ದಾರೆ ಎಂದು ಕಾಲೆಳೆದಿದೆ.
ಟ್ವೀಟ್ನಲ್ಲಿ ಏನಿದೆ?: ತಾವೇ ನಿರ್ದೇಶಿಸುತ್ತಿರುವ ಚಲನಚಿತ್ರಕ್ಕೆ ಸಿದ್ದರಾಮಯ್ಯ ನಾಯಕರಾಗಲು ಹೊರಟಿದ್ದಾರೆ. ಸಿದ್ದರಾಮೋತ್ಸವ ಎನ್ನುವುದು ಸಿದ್ದರಾಮಯ್ಯ ಬ್ಯಾನರ್ ಅಡಿ ತಯಾರಾಗುತ್ತಿರುವ ಚಿತ್ರವಾಗಿದೆ. ಈ ಚಿತ್ರದ ಮೂಲಕ ತಾವೇ ಮುಂದಿನ ಸಿಎಂ ಎಂಬ ಸಂದೇಶ ನೀಡುವುದು ಖಚಿತ
ಶ್ರಮ ಡಿಕೆಶಿ ಅವರದ್ದು, ಅಧಿಕಾರ ಮಾತ್ರ ಸಿದ್ದರಾಮಯ್ಯಗೆ! ಕನಕಪುರದ ಬಂಡೆಯೊಂದು ಪಕ್ಷ ಪೂಜೆಯೇ ಅಂತಿಮ, ವ್ಯಕ್ತಿ ಪೂಜೆಯಲ್ಲ ಎಂದು ಗುಡುಗುತ್ತಿದೆ. ಆ ಬಂಡೆಗೆ ಡೈನಾಮೈಟ್ ಇಡಲು ಸಿದ್ದರಾಮಯ್ಯ ಸಜ್ಜಾಗಿದ್ದಾರೆ.
ಸಿದ್ದರಾಮೋತ್ಸವದ ಬಳಿಕ ಕನಕಪುರದ ಬಂಡೆ ಛಿದ್ರವಾಗಲಿದೆಯೇ? ಕೆಪಿಸಿಸಿ ಅಧ್ಯಕ್ಷರ ವಿರೋಧ ನಡುವೆಯೂ ಸಿದ್ದರಾಮೋತ್ಸವ ನಡೆಯಲಿದೆ ಎಂದಾದರೆ ಡಿಕೆಶಿ ಇದ್ದೂ ಇಲ್ಲದಂತಾಗಿದ್ದಾರೆ.
ಸಿದ್ದರಾಮೋತ್ಸವ ಕೇವಲ ಸಿದ್ದರಾಮಯ್ಯರ ಜನ್ಮದಿನೋತ್ಸವವಲ್ಲ. ಅದು ಡಿಕೆಶಿಯ ರಾಜಕೀಯ ಬೆಳವಣಿಗೆಗೆ ತೋಡುತ್ತಿರುವ ಗುಂಡಿಯಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿರುವ ಡಿಕೆಶಿ ಹಲ್ಲಿಲ್ಲದ ಹಾವು ಎಂದು ವ್ಯಂಗ್ಯವಾಡಿದೆ