ಕೂಗು ನಿಮ್ಮದು ಧ್ವನಿ ನಮ್ಮದು

ದಾಳಿ ಬೆನ್ನಲ್ಲೇ ನಟಿ ರಶ್ಮೀಕಾ ಫ್ಯಾಮಿಲಿಗೆ ಐಟಿ ನೋಟಿಸ್ : 21 ಕ್ಕೆ ವಿಚಾರಣೆಗೆ ಹಾಜರಾಗಲು ಸೂಚನೆ

ಕೊಡಗು: ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ರೇಡ್ ನಡೆದ ಬೆನ್ನಲ್ಲೇ ರಶ್ಮಿಕಾ ಪ್ಯಾಮಿಲಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಎರಡು ದಿನಗಳ ಕಾಲ ರಶ್ಮಿಕಾ ಮನೆಯಲ್ಲಿ ಪರಿಶೀಲನೆ ನಡೆಸಿ ತೆರಳಿದ್ದ ಐಟಿ, ಇದೀಗ ರಶ್ಮೀಕಾ ಮಂದಣ್ಣ ಪ್ಯಾಮೀಲಿಗೆ ನೋಟಿಸ್ ಜಾರಿ ಮಾಡಿದೆ. ಜನೇವರಿ 21 ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಇನ್ನು ಐಟಿ ನೋಟಿಸ್ ಬಗ್ಗೆ ರಶ್ಮಿಕಾ ತಂದೆ ಪ್ರತಿಕ್ರಿಯೆ ನೀಡಿದ್ದು, ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಯಾರೋ ಐಟಿ ಅಧಿಕಾರಿಗಳಿಗೆ ರಾಂಗ್ ಇನ್ಫಾರ್ಮೇಶನ್ ಕೊಟ್ಟಿದ್ದಾರೆ. ಸೆರೆನಿಟಿ ಹಾಲ್ ನಿಂದ 25 ಲಕ್ಷ ರೂಪಾಯಿ ಐಟಿ ಅಧಿಕಾರಿಗಳು ಕೊಂಡೊಯ್ದಿದ್ದಾರೆ. ನಾನು ಅದಕ್ಕೆ ಲೆಕ್ಕ ಕೊಟ್ಟಿದ್ದೇನೆ‌. ಆದರೆ ಅದು ನನ್ನ ಹಣ ಅಲ್ಲ. ಮದುವೆ ಅವ್ರು ಅಡ್ವಾನ್ಸ್ ಕೊಟ್ಟಿದ್ದ ಹಣ. ನಾನು ಯಾವುದೇ ಅಕ್ರಮ ಹಣ ಮಾಡಿಲ್ಲ. ಐಟಿ ಅವ್ರು ಅವರ ಕೆಲಸ ಮಾಡಿದ್ದಾರೆ. ನಾನು, ನನ್ನ ಹೆಂಡ್ತಿ, ಮಗಳು ರಶ್ಮಿಕಾ ಮೂವರು ವಿಚಾರಣೆಗೆ ಹಾಜರಾಗುತ್ತೇವೆ ಎಂದು ಮಾಧ್ಯಮಗಳಿಗೆ ರಶ್ಮಿಕಾ ತಂದೆ ಮದನ್ ಮಂದಣ್ಣ ಹೇಳಿದ್ದಾರೆ.

error: Content is protected !!