ಕೂಗು ನಿಮ್ಮದು ಧ್ವನಿ ನಮ್ಮದು

ದೇವರನ್ನು ಮೆಚ್ಚಿಸಲು ಮಗಳಿಗೆ ಅರಿಶಿಣ, ಕುಂಕುಮ ತಿನ್ನಿಸಿದ ತಂದೆ

ಅಮರಾವತಿ: ದೇವರನ್ನು ಮೆಚ್ಚಿಸಲು ತಂದೆಯೊಬ್ಬ ತನ್ನ ನಾಲ್ಕು ವರ್ಷದ ಮಗಳಿಗೆ ಕುಂಕುಮ ಹಾಗೂ ಅರಿಶಿಣವನ್ನು ತಿನ್ನಿಸಲು ಯತ್ನಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ
ಆಂಧ್ರಪ್ರದೇಶದ ಆತ್ಮಕೂರು ಪುರಸಭಾ ವ್ಯಾಪ್ತಿಯ ಪೆರಾರೆಡ್ಡಿಪಲ್ಲಿ ಗ್ರಾಮದಲ್ಲಿ ಮೌಢ್ಯ ಆಚರಿಸಲಾಗಿದೆ. ಕಂಡ್ರಾ ವೇಣುಗೋಪಾಲ್ ಬಂಧಿತ ಆರೋಪಿ. ವೇಣುಗೋಪಾಲ್ ದೇವರನ್ನು ಮೆಚ್ಚಿಸಲು ಕುಂಕುಮ ಹಾಗೂ ಅರಿಶಿಣವನ್ನು ತೆಗೆದುಕೊಂಡು ಮನೆಯ ತುಂಬೆಲ್ಲಾ ಹಾಕಿದ್ದಾನೆ. ನಂತರ ಅಲ್ಲಿಯೇ ಇದ್ದ ತನ್ನ ನಾಲ್ಕು ವರ್ಷದ ಮಗಳಿಗೆ ಕುಂಕುಮಾ ಹಾಗೂ ಅರಿಶಿಣವನ್ನು ತಿನ್ನಲು ಹೇಳಿದ್ದಾನೆ.

ಅವಳು ನಿರಾಕರಿಸಿದಾಗ ಬಲವಂತವಾಗಿ ಅರಿಶಿಣ ಹಾಗೂ ಕುಂಕುಮವನ್ನು ಅವಳ ಬಾಯಿಗೆ ಹಾಕಿದ್ದಾನೆ. ಇದರಿಂದಾಗಿ ಆಕೆ ಕಿರುಚುತ್ತಾ ಅಲ್ಲೇ ಕುಸಿದು ಬಿದ್ದಿದ್ದಾಳೆ. ಇದನ್ನು ಕೇಳಿದ ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸಿ, ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ವೇಣುಗೋಪಾಲ್‌ನನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಕಳೆದ ಮೂರು ದಿನಗಳಿಂದ ವೇಣುಗೋಪಾಲ್ ತಮ್ಮ ನಿವಾಸದಲ್ಲಿ ವಿಚಿತ್ರ ಆಚರಣೆಗಳಲ್ಲಿ ತೊಡಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಆತ್ಮಕೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

error: Content is protected !!