ಕೂಗು ನಿಮ್ಮದು ಧ್ವನಿ ನಮ್ಮದು

ನಾಳೆ ಬೆಳಗಾವಿಗೆ ಬರ್ತೇನೆ ಏನ್ ಆಗುತ್ತೇ ನೋಡೊಣ : ಟ್ವಿಟ್ ಮೂಲಕ ಶಿವಸೇನೆ ರಾಜ್ಯಸಭಾ ಸದಸ್ಯನ ಉದ್ದಟತನ

ಬೆಳಗಾವಿ: ಗಡಿಯಲ್ಲಿ ಶಿವಸೇನೆ ಮತ್ತೆ ತನ್ನ ಕ್ಯಾತೆ ಮುಂದುವರೆಸಿದೆ. ಶಿವಸೇನೆ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಕರ್ನಾಟಕ ಸರ್ಕಾರಕ್ಕೆ ಸವಾಲ್ ಹಾಕಿದ್ದಾನೆ. ನಾಳೆ ಬೆಳಗಾವಿಗೆ ಬರ್ತೇನೆ ಏನ್ ಆಗುತ್ತೇ ನೋಡೊಣ ಎಂದು ವಿವಾದಾತ್ಮಕ ಟ್ವಿಟ್ ಮಾಡಿದ್ದು, ಈ ಮೂಲಕ ಸಂಜಯ ರಾವತ್ ಸವಾಲ್ ಹಾಕಿ ಕನ್ನಡಿಗರನ್ನ ಕೆರಳಿಸುವ ಕೃತ್ಯಕ್ಕೆ ಕೈ ಹಾಕಿದ್ದಾರೆ. ಬೆಳಗಾವಿಯಲ್ಲಿ ಇಂದು ಮಹಾರಾಷ್ಟ್ರ ಸಚಿವ ತಳ್ಳಾಟ ಪ್ರಕರಣದಲ್ಲಿ ನಮ್ಮ ಹಕ್ಕನ್ನ ಕರ್ನಾಟಕ ಮೊಟಕು ಗೊಳಿಸಿದೆ. ನಮ್ಮ ಮೇಲೆ ಬಿಜೆಪಿ ಸರ್ಕಾರ ನಿರಂತರ ದಬ್ಬಾಳಿಕೆ ನಡೆಸುತ್ತಿದ್ದು, ನಾಳೆ ಬರ್ತಿನಿ ಅದೇನಾಗುತ್ತೋ ನೊಡೊಣ ಎಂದಿರು ಸಂಜಯ ರಾವತ್ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದಾರೆ.

error: Content is protected !!