ಕೂಗು ನಿಮ್ಮದು ಧ್ವನಿ ನಮ್ಮದು

ಹೊಳೆಯುವ ಚರ್ಮ ನಿಮ್ಮದಾಗಬೇಕಾ? ಇಲ್ಲಿದೆ ಸಿಂಪಲ್ ಟಿಪ್ಸ್

ವಯಸ್ಸಾಗುವುದನ್ನು ಯಾರಿದಂತಲೂ ತಪ್ಪಿಸಲು ಸಾಧ್ಯವಿಲ್ಲ ಬಿಡಿ, ಆದರೆ ಕೆಲವೊಂದು ನಿರ್ದಿಷ್ಟ ಆ್ಯಂಟಿ ಏಜಿಂಗ್ ಆಹಾರಗಳನ್ನು ಸೇವಿಸುವ ಮೂಲಕ, ಅದರ ನಕಾರಾತ್ಮಕ ಪರಿಣಾಮಗಳಿಂದ ರಕ್ಷಿಸಿಕೊಳ್ಳಬಹುದು. ಅವು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೂಡ ಸಹಾಯ ಮಾಡುತ್ತವೆ. ನಮ್ಮ ದೇಹಕ್ಕೆ ವಯಸ್ಸಾದಂತೆ, ಅನುಚಿತ ಜೀವನ ಶೈಲಿಯ ಕಾರಣದಿಂದ ನಮ್ಮ ದೇಹವು ಗಮನಾರ್ಹವಾದ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಲು ಆರಂಭಿಸುತ್ತದೆ. ಏಕೆಂದರೆ, ಈ ಆಧುನಿಕ ಕಾಲದ ವೇಗದ ಜೀವನದ ಕಾರಣದಿಂದ, ನಮ್ಮನ್ನು ನಾವು ಆರೈಕೆ ಮಾಡಿಕೊಳ್ಳುವುದು ಕಷ್ಟಕರವಾಗುತ್ತಿದೆ.

ಇದು ಫಿಟ್‍ನೆಟ್ ತಜ್ಞೆ ಮೀನಾಕ್ಷಿ ಮೊಹಾಂತಿ ಅವರ ಅಭಿಪ್ರಾಯ. ವಯಸ್ಸಾಗುವುದನ್ನು ಯಾರಿದಂತಲೂ ತಪ್ಪಿಸಲು ಸಾಧ್ಯವಿಲ್ಲ ಬಿಡಿ, ಆದರೆ ಕೆಲವೊಂದು ನಿರ್ದಿಷ್ಟ ಆ್ಯಂಟಿ ಏಜಿಂಗ್ ಆಹಾರಗಳನ್ನು ಸೇವಿಸುವ ಮೂಲಕ, ಅದರ ನಕಾರಾತ್ಮಕ ಪರಿಣಾಮಗಳಿಂದ ರಕ್ಷಿಸಿಕೊಳ್ಳಬಹುದು. ಅವು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೂಡ ಸಹಾಯ ಮಾಡುತ್ತವೆ.

ಒಣ ಬೀಜಗಳು : ಒಣ ಬೀಜಗಳಲ್ಲಿ ಅತ್ಯಧಿಕ ಅನ್‍ಸ್ಯಾಚುರೇಟೆಡ್ ಕೊಬ್ಬು, ಫೈಬರ್ ಮತ್ತು ಪ್ರೊಟೀನ್ ಇರುತ್ತದೆ. ಜೊತೆಗೆ ಹೃದಯ ಆರೋಗ್ಯಕ್ಕೆ ಅನುಕೂಲಕರವಾದ ಅಂಶಗಳನ್ನು ಒಣ ಬೀಜಗಳು ಹೊಂದಿವೆ. ಬಾದಾಮಿಗಳು, ಗೋಡಂಬಿಗಳು, ವಾಲನಟ್‍ಗಳು ಮತ್ತು ಶೇಂಗಾ ಬೀಜಗಳನ್ನು ನಿಮ್ಮ ಡಯೆಟ್‍ನಲ್ಲಿ ಸೇರಿಸಿಕೊಳ್ಳಿ.

ನೀರು: ನಮಗೆ ವಯಸ್ಸಾಗುತ್ತಾ ಬಂದಂತೆ ನಾವು ನೀರನ್ನು ಕುಡಿಯುವುದು ಕೂಡ ಕಡಿಮೆ ಮಾಡುತ್ತೇವೆ ಏಕೆಂದರೆ ನಮಗೆ ಮೊದಲಿನಂತೆ, ಬಾಯಾರಿಕೆ ಆಗುವುದಿಲ್ಲ. ನೀರಿಲ್ಲದ ದೇಹ, ದೀರ್ಘಕಾಲದಿಂದ ಎಣ್ಣೆ ಹಾಕಿರದ ಯಂತ್ರದಂತೆ. ಸರಳವಾಗಿ ಹೇಳುವುದಾದರೆ, ನೀರಿಲ್ಲದಿದ್ದರೆ ದೇಹ ಕಾರ್ಯ ನಿರ್ವಹಿಸುವುದು ಸಾಧ್ಯವಿಲ್ಲ. ಅದರಿಂದ ಹೆಚ್ಚಿನ ಸಮಸ್ಯೆಗಳು ಉಂಟಾಗುತ್ತವೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದಾದಲ್ಲಿ, ನಮಗೆ ಬಾಯಾರಿಕೆ ಆಗದಿದ್ದರೂ, ಆಗಾಗ ನೀರು ಕುಡಿಯುತ್ತಿರಬೇಕು ಮತ್ತು ದೇಹದಲ್ಲಿ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಬೇಕು.

ಮೊಸರು: ಮೊಸರಿನಲ್ಲಿ ಅತ್ಯಧಿಕ ಕ್ಯಾಲ್ಸಿಯಂ ಇದ್ದು, ಮೂಳೆಗ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಆಹಾರವಿದು. ನಮಗೆ ವಯಸ್ಸಾದಂತೆಲ್ಲಾ, ನಮ್ಮ ಮೂಳೆಗಳ ಆರೋಗ್ಯ ಕ್ಷೀಣಿಸತೊಡಗುತ್ತದೆ. ಮೊಸರಿನ ಸೇವನೆಯಿಂದ ನೀವು ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಅದು ಜೀರ್ಣಕ್ರಿಯೆಗೂ ಪ್ರಯೋಜನಕಾರಿ.

ಪಪ್ಪಾಯ: ನಿಮಗೆ ಸುಕ್ಕಿಲ್ಲದ ಚರ್ಮವನ್ನು ಹೊಂದಬೇಕು ಎಂಬ ಹಂಬಲ ಇದ್ದರೆ, ನಿಮ್ಮ ಆಹಾರ ಕ್ರಮದಲ್ಲಿ ಪಪ್ಪಾಯವನ್ನು ಖಂಡಿತಾ ಸೇರಿಸಿಕೊಳ್ಳಿ. ಪಪ್ಪಾಯದಲ್ಲಿರುವ ಅತ್ಯಧಿಕ ಆ್ಯಂಟಿಆಕ್ಸಿಡೆಂಟ್‍ಗಳು, ವಿಟಮಿನ್‍ಗಳು, ಚರ್ಮದ ಮೃದುತ್ವ ಹೆಚ್ಚಾಗಲು ಸಹಾಯ ಮಾಡುತ್ತವೆ. ಇದು ಚರ್ಮದ ನಿರ್ಜೀವ ಕೋಶಗಳನ್ನು ತೆಗೆದು ಹಾಕಿ, ಚರ್ಮದಲ್ಲಿ ಹೊಳಪನ್ನು ಮೂಡಿಸಲು ಸಹಾಯ ಮಾಡುತ್ತದೆ.
ಮೇಲೆ ತಿಳಿಸಿದ ಆಹಾರಗಳಲ್ಲದೆ, ನೀವು ನಿತ್ಯವೂ ದಾಳಿಂಬೆ, ಬ್ಲೂಬೆರ್ರಿಗಳು, ಗೆಣಸು, ಅವಕಾಡೋ ಮತ್ತು ಇತರ ಹಣ್ಣು ತರಕಾರಿಗಳನ್ನು ತಿನ್ನಬೇಕು.

error: Content is protected !!