ಬೆಳಗಾವಿ:ವಿಧಾನ ಪರಿಷತ್ ಚುನಾವಣೆಗೆ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದಲೇ ಮಧ್ಯ ಮಾರಾಟ ನಿಷೇಧಿಸಿ ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ರು ಕೂಡ ಆ ಆದೇಶಕ್ಕೆ ಕಿಮ್ಮತ್ತು ಇದೆಯಾ? ಇಲ್ಲವಾ ಎಂಬ ಪ್ರಶ್ನೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ವಾಯವ್ಯ ಶಿಕ್ಷಕರು ಹಾಗೂ ಪದವಿಧರ ಚುನಾವಣೆ ಹಿನ್ನೆಲೆ ಚುನಾವಣಾ ಅಧಿಕಾರಿಗಳು ಮಧ್ಯ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಆದ್ರೆ ಆ ಆದೇಶ ಮಾತ್ರ ಬೆಳಗಾವಿ ಜಿಲ್ಲೆಯ ಘಟಪ್ರಭಾಗೆ ಅನ್ವಯಿಸುವಂತೆ ಕಾಣುತ್ತಿಲ್ಲ. ಘಟಪ್ರಭಾದಲ್ಲಿ ಬಾರ್ ಗಳು ಖುಲ್ಲಂ ಖುಲ್ಲ ಆಗಿದ್ದು, ಘಟಪ್ರಭಾ ಕರ್ನಾಟಕದಲ್ಲಿದೆಯೋ ಅಥವಾ ಬಿಹಾರನಲ್ಲಿದೆಯೋ ಎಂಬ ಅನುಮಾನ ದಟ್ಟವಾಗಿದೆ.
ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜೊತೆಗೆ ಮಧ್ಯ ಮಾರಾಟ ನಿಷೇಧ ಜಾರಿಯಲ್ಲಿದ್ರು ಘಟಪ್ರಭಾದಲ್ಲಿ ಮಾತ್ರ ಅಂಧಾ ದರ್ಬಾರ್ ಜೋರಾಗಿದೆ, ಘಟಪ್ರಭಾ ಠಾಣೆಯ ಪೋಲಿಸ್ ಪೇದೆಯೊಬ್ಬ ಬಾರ್ ನಲ್ಲಿ ರಾಜಾರೋಷವಾಗಿ ಮಧ್ಯ ಸೇವನೆ ಮಾಡುತ್ತಿರುವ ದೃಶ್ಯ ಕೂಡ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.
ಚುನಾವಣಾ ಆಯೋಗದ ಆದೇಶಕ್ಕೆ ಕಿಮ್ಮತ್ತು ಇದೆಯಾ? ಇಲ್ವಾ ಎಂಬ ಪ್ರಶ್ನೆ ಎಲ್ಲೆಡೆ ಮನೆ ಮಾಡಿದ್ದು ಘಟಪ್ರಭಾ ಪೋಲಿಸರು, ಅಬಕಾರಿ ಪೋಲಿಸರು ಏನು ಮಾಡುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದ್ದು, ಎಂಜಲ ಕಾಸಿಗೆ ಕೈ ಚಾಚಿದ್ರಾ ಎಂಬ ಆರೋಪಗಳು ಕೇಳಿ ಬರುತ್ತಿವೆ.