ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಕಚ್ಚಾಟದ ಮೇಲೆ ಬಿಜೆಪಿ ಎಚ್ಚರಿಕೆಯ ಹೆಜ್ಜೆಯಿಡಲು ತೀರ್ಮಾನ ಮಾಡಿದೆ. ಮೊದಲು ನಿರ್ಮಲಾ ಸೀತಾರಾಮನ್ಗೆ ವೋಟಿಂಗ್ ಮಾಡಿಸಲು ತೀರ್ಮಾನ ಮಾಡಿದ್ದು, ನಿರ್ಮಲಾಗೆ ನಾಲವತ್ತಾರು ಮೊದಲ ಪ್ರಾಶಸ್ತ್ಯದ ಮತಗಳನ್ನು ಹಾಕಿಸಲು ಬಿಜೆಪಿ ಪ್ಲಾನ್ ಮಾಡಿದೆ. ನಂತರ ಜಗ್ಗೇಶ್ಗೆ ನಾಲವತ್ತ್ನಾಲ್ಕು ಮೊದಲ ಪ್ರಾಶಸ್ತ್ಯದ ಮತ ಇದ್ದು, ಮೂವತ್ತೆರಡು ಎರಡನೇ ಪ್ರಾಶಸ್ತ್ಯದ ಮತಗಳನ್ನು ಹಾಕಿಸಲು ನಿರ್ಧರಿಸಲಾಗಿದೆ. ಅಂತಿಮವಾಗಿ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ಗೆ ಮೂವತ್ತೆರಡು ಮೊದಲ ಪ್ರಾಶಸ್ತ್ಯದ ಮತಗಳು, ೯೦ ಎರಡನೇ ಪ್ರಾಶಸ್ತ್ಯದ ಮತಗಳನ್ನು ಹಾಕಿಸಲು ಬಿಜೆಪಿ ಪಡೆ ನಿರ್ಧರಿಸಿದೆ.
ಈಗಾಗಲೇ ಮತಗಳ ವರ್ಗೀಕರಣ ಮಾಡಿರುವ ರಾಜ್ಯ ಬಿಜೆಪಿ, ಯಾರು ಯಾರಿಗೆ ವೋಟ್ ಮಾಡ್ಬೇಕು ಎಂಬುದನ್ನು ಗುಪ್ತವಾಗಿ ಇಟ್ಟಿದೆ. ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಶಾಸಕರು ಬಂದ ಬಳಿಕ ಯಾರಿಗೆ ಯಾರು ವೋಟ್ ಮಾಡಬೇಕು ಎಂದು ತಿಳಿಸಲಿದೆ. ಇಂದು ಶಾಸಕಾಂಗ ಪಕ್ಷದ ಕೊಠಡಿ ಒಳಗೆ ಬಂದಾಗ ಶಾಸಕರನ್ನು ಲಾಕ್ ಮಾಡಲಿದ್ದು, ಬಳಿಕ ತಲಾ ಐದು ಜನರಂತೆ ಮತದಾನ ಕೊಠಡಿಗೆ ಕಳುಹಿಸಲು ಬಿಜೆಪಿ ಮೆಗಾ ಪ್ಲ್ಯಾನ್ ಮಾಡಿದೆ.