ವಿಜಯಪುರ: ತಂದೆಯೊಬ್ಬ ತನ್ನ ಹೆಂಡತಿ ಜಮೀನು ಮಾರಲು ಒಪ್ಪದಕ್ಕೆ ಕುಪಿತಗೊಂಡು ಮಕ್ಕಳಿಗೆ ಎಗ್ರೈಸ್ನಲ್ಲಿ ವಿಷ ಹಾಕಿ ತಿನ್ನಿಸಿದ್ದು, ಪುತ್ರ ಸಾವನ್ನಪ್ಪಿದ ಘಟನೆ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ. ಶಿವರಾಜ್ ಅರಸನಾಳ (2) ಹತ್ಯೆಗೀಡಾದ ಮಗು. ಆರೋಪಿ ತಂದೆ ಚಂದ್ರಶೇಖರ್ ಅರಸನಾಳ ಮೈತುಂಬ ಸಾಲಮಾಡಿಕೊಂಡಿದ್ದನು. ಹಾಗಾಗಿ ತನ್ನ ಪತ್ನಿಗೆ ಜಮೀನು ಮಾರಾಟ ಮಾಡುವಂತೆ ಒತ್ತಾಯಸುತ್ತಿದ್ದನು.

ಮಾರಾಟ ಮಾಡಲು ಒಪ್ಪದ ಹಿನ್ನಲೆ ಕುಪಿತಗೊಂಡು ಮಕ್ಕಳಿಗೆ ಎಗ್ರೈಸ್ನಲ್ಲಿ ವಿಷ ಹಾಕಿ ಮಗ ಹಾಗೂ ಮಗಳಿಗೆ ಉಣ್ಣಿಸಿದ್ದಾನೆ. ಇದರ ಪರಿಣಾಮವಾಗಿ ಗಂಡು ಮಗುವೊಂದು ಸಾವನ್ನಪ್ಪಿದ್ದು, ಮಗಳು ರೇಣುಕಾ (5) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವಳ ಸ್ಥಿತಿ ಗಂಭೀರವಾಗಿದೆ. ಈಗಾಗಲೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತಾಳಿಕೋಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.