ಕೂಗು ನಿಮ್ಮದು ಧ್ವನಿ ನಮ್ಮದು

ಹುತಾತ್ಮ ದಿನಾಚರಣೆ ಹೆಸರಲ್ಲಿ ನಾಡದ್ರೋಹಿ ಎಂಇಎಸ್ ಪುಂಡಾಟ

ಬೆಳಗಾವಿ: ಬೆಳಗಾವಿಯಲ್ಲಿ ಮತ್ರೆ ನಾಡದ್ರೋಹಿ ಎಂಇಎಸ್ ಪುಂಡಾಟ ನಡೆಸಿದೆ. ಹುತಾತ್ಮ ದಿನಾಚರಣೆ ಹೆಸರಲ್ಲಿ ನಾಡದ್ರೋಹಿ ಕೃತ್ಯವೆಸಗಿರುವ ಝಾಪಾಗಳು ನಗರದ ಬೋಗಾರ್ವೇಸದಿಂದ ಪ್ರಮುಖ ರಸ್ತೆಯಲ್ಲಿ ರ‌್ಯಾಲಿ ನಡೆಸಿದ್ದಾರೆ. ಇನ್ನು ರ‌್ಯಾಲಿ ಉದ್ದಕ್ಕೂ ನಾಡದ್ರೋಹಿ ಘೋಷಣೆ ಕೂಗಿದ ಝಾಪಾಗಳು ಬೆಳಗಾವಿ, ಖಾನಾಪುರ, ನಿಪ್ಪಾಣಿ, ಕಾರವಾರ ಬಾಲ್ಕಿ ಸಹಿತ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕೆಂದು ಘೋಷಣೆ ಕೂಗಿ ಪುಂಡಾಟ ಮೆರೆದಿದ್ದಾರೆ. ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆ ಹಾಕಿ ದಾದಾಗಿರಿ ನಡೆಯಲ್ಲ‌ ಅಂತಾ ಕೂಗಿ ಉದ್ಧಟತನ ಪ್ರದರ್ಶನ ಮಾಡಿದ್ದಾರೆ. ಇನ್ನು ಬೀಗಿ ಪೊಲೀಸ್ ಭದ್ರತೆಯಲ್ಲಿ ಎಂಇಎಸ್ ಪುಂಡರಿಂದ ಹುತಾತ್ಮ ದಿನಾಚರಣೆ ನಡೆದರೂ ನಾಡದ್ರೋಹಿ ಘೋಷಣೆಗಳು ಮಾತ್ರ ನಿಲ್ಲಿಸಲಾಗಲಿಲ್ಲ. ಇನ್ನು ರ‌್ಯಾಲಿಯಲ್ಲಿ ಎಂಇಎಸ್ ಮುಖಂಡರು, ಮಾಜಿ ಮೇಯರ್, ಮಾಜಿ ನಗರ ಸೇವಕರು ಭಾಗಿಯಾಗಿದ್ದರು. ಗಡಿನಾಡಲ್ಲಿ ಇಷ್ಟೆಲ್ಲಾ ನಡೆದರೂ, ನಾಡದ್ರೋಹಿಗಳ ವಿರುದ್ದ ವಿವಿಧ ಕನ್ನಡಪರ ಸಂಘಟನೆಗಳು ಧ್ವನಿ ಎತ್ತಿದ್ರು ಕೂಡ ಎಂಇಎಸ್ ಪುಂಡಾಟಕ್ಕೆ ಬ್ರೇಕ್ ಹಾಕಲು ಮಾತ್ರ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ.

error: Content is protected !!