ಕೂಗು ನಿಮ್ಮದು ಧ್ವನಿ ನಮ್ಮದು

ಪ್ರತಾಪ್ ಸಿಂಹ ಅಯೋಗ್ಯ, ವಕೀಲ ವೃತ್ತಿ ಬಗ್ಗೆ ಅವನಿಗೇನು ಗೊತ್ತು: ಹೆಚ್. ವಿಶ್ವನಾಥ್

ಮೈಸೂರು: ಪ್ರತಾಪ್ ಸಿಂಹ ಅಯೋಗ್ಯ, ವಕೀಲ ವೃತ್ತಿ ಬಗ್ಗೆ ಅವನಿಗೇನು ಗೊತ್ತು ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ವಿಶ್ವನಾಥ್ ಅವರು, ಸಿದ್ದರಾಮಯ್ಯ ನಾವೆಲ್ಲರೂ ಒಟ್ಟಿಗೆ ಲಾ ಪ್ರಾಕ್ಟೀಸ್ ಮಾಡಿದ್ದೇವೆ. ಅವನಿಗೇನಾಗಿದೆ ಬಾಯಿಗೆ ಬಂದಂಗೆ ಮಾತನಾಡುತ್ತಾನೆ. ಮಹಾರಾಜರನ್ನು ಬಿಟ್ಟರೇ ನಾನೇ ಹೆಚ್ಚು ಕೆಲಸ ಮಾಡಿದ್ದೇನೆ ಅಂತಾನೆ. ಈ ಎಂಪಿ ಕಾಲದಲ್ಲಿ ಏನೂ ಕೆಲಸವಾಗಿಲ್ಲ. 2014ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ, ನಾನು ಸೋಲುತ್ತಿರಲಿಲ್ಲ. ರಾಜ್ಯದ ಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುತ್ತಿದ್ದೀರಾ, ನಿಮಗೆ ನಾಚಿಕೆ ಆಗುವುದಿಲ್ಲವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕರ್ನಾಟಕದ ಶಾಂತಿಯನ್ನು ಮಸೀದಿಯಲ್ಲಿ ಶಿವಲಿಂಗ ಹುಡುಕುವ ಮೂಲಕ ಕದಡಲಾಗುತ್ತಿದೆ. ಬಿಜೆಪಿ ವಕ್ತಾರರು ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ. ನಾಯಕರು ಇದಕ್ಕೆ ಕಡಿವಾಣ ಹಾಕಬೇಕು. ಈ ಬಗ್ಗೆ RSS ನಾಯಕರು ಪತ್ರಿಕಾಗೋಷ್ಠಿಯಲ್ಲಿ ಹೇಳಬೇಕು.

ಮಸೀದಿಗಳಲ್ಲಿ ಶಿವಲಿಂಗ ಹುಡುಕುವುದನ್ನು ನಿಲ್ಲಿಸಿ ಅಂತಾ ಹೇಳಬೇಕು ಹರಿಹಾಯ್ದಿದ್ದಾರೆ. ಇದೇ ವೇಳೆ, ಇಪ್ಪತೈದು ಲಕ್ಷ ಮುಸ್ಲಿಂ ಕುಟುಂಬಗಳು ಬದುಕುತ್ತಿವೆ. ಹೆಚ್ಚು ಕಡಿಮೆ ಆದರೆ ಅವರು ಬದುಕುವುದಕ್ಕೆ ಆಗುತ್ತಾ ಎಂದು ಕಳವಳ ವ್ಯಕ್ತಪಡಿಸಿದರು.

error: Content is protected !!