ಬೆಂಗಳೂರು: ರಾಜ್ಯದಲ್ಲಿ ಮಸೀದಿ ಮೈಕ್ ವಾರ್ಗೆ ಫುಲ್ ಸ್ಟಾಪ್ ಹಾಕೋಕೆ ಅನುಮತಿ ಕಡ್ಡಾಯಕ್ಕೆ ಹದಿನೈದು ದಿನದ ಗಡುವನ್ನು ಸರ್ಕಾರ ಕೊಟ್ಟಿತ್ತು. ಈ ಡೆಡ್ಲೈನ್ ಇಂದೇ ಮುಗಿಯಲಿದ್ದು, ಈಗ ಮುಸ್ಲಿಂ ಮುಖಂಡರು ಡೆಡ್ಲೈನ್ ವಿಸ್ತರಣೆಗೆ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ. ರಾಜ್ಯದಲ್ಲಿ ಮೈಕ್ ಸಮರ ದೊಡ್ಡ ಮಟ್ಟದ ಕಿಚ್ಚು ಹಬ್ಬಿತ್ತು. ಆಜಾನ್ ವರ್ಸಸ್ ಸುಪ್ರಭಾತದ ದಂಗಲ್ ಕೂಡ ಶುರುವಾಗಿತ್ತು. ಕೊನೆಗೆ ಸರ್ಕಾರ ಹದಿನೈದು ದಿನದ ಡೆಡ್ಲೈನ್ ನೀಡಿ ಮೈಕ್ಗೆ ಅನುಮತಿ ಪಡೆದುಕೊಳ್ಳುವಂತೆ ಸೂಚಿಸಿತು.
ಆದ್ರೆ ಕೆಲ ಸ್ಟೇಷನ್ನಲ್ಲಿ ಖಾಕಿಗೆ ಇದರ ಬಗ್ಗೆ ಮಾಹಿತಿ ಆರಂಭದಲ್ಲಿ ಇರಲಿಲ್ಲ. ಅನುಮತಿ ಪ್ರಕ್ರಿಯೆಗೆ ಕೊಡುವ ಫಾರ್ಮ್ನ್ನು 2 ಬಾರಿ ಬದಲಾಯಿಸಿತು. ಕೆಲ ಮಸೀದಿಯ ಮೌಲ್ವಿಗಳಿಗೂ ಕೂಡ ಮಾಹಿತಿ ಸಮಸ್ಯೆ ಇದ್ದಿದ್ದಂದ ಇನ್ನೂ ಕೆಲವು ಮಸೀದಿಯವರು ಅನುಮತಿ ಪಡೆದಿಲ್ಲ. ಹಾಗಾಗಿ ಡೆಡ್ಲೈನ್ನ್ನು ಮರುವಿಸ್ತರಣೆ ಮಾಡಬೇಕು ಅಂತಾ ಮುಸ್ಲಿಂ ಮುಖಂಡರು ಆಗ್ರಹಪಡಿಸಿದ್ದಾರೆ. ಏಕಾಏಕಿ ಎಲ್ಲ ದಾಖಲೆ ಕೊಡೋದು ಕಷ್ಟವಾಗುತ್ತಿದೆ ಅನ್ನುತ್ತಿದ್ದಾರೆ. ಡೆಡ್ಲೈನ್ಗೆ ಟೈಂ ಇರುವಾಗಲೇ ಮತ್ತೆ ನೋಟಿಸ್ ನೀಡುತ್ತಿದ್ದಾರೆ ಅಂತಾ ಕಿಡಿಕಾರಿದ್ದಾರೆ