ಕೊಡಗು: ನಟಿ ರಶ್ಮಿಕಾ ಮಂದಣ್ಣ ಕುಟುಂಬದ ಒಡೆತನದ ಸೆರಿನಿಟಿ ಹಾಲ್ ನಲ್ಲಿಯೇ ನಿನ್ನೆ ತಡರಾತ್ರಿ 2.30ರ ವರೆಗೆ ಉಳಿದ ಐಟಿ ಟೀಂ ತೀವ್ರ ವಿಚಾರಣೆ ನಡೆಸಿದ್ದಾರೆ. ಇಂದು ಬೆಳಿಗ್ಗೆ 9 ಗಂಟೆ ನಂತರ ಮತ್ತೆ ವಿಚಾರಣೆ ಆರಂಭಿಸಲಿರೊ ಐಟಿ ಟಿಂ, ಇಂದು ಸಂಜೆ ವರೆಗೂ ವಿಚಾರಣೆ ನಡೆಸಲಿದ್ದಾರೆ. ಇನ್ನು ಐಟಿ ಅಧಿಕಾರಿಗಳು ನಟಿ ರಶ್ಮಿಕಾ ಮಂದಣ್ಣಗೆ ಎಲ್ಲೂ ಹೋಗದಂತೆ ಸೂಚನೆ ನೀಡಿದ್ದಾರೆ. ಇನ್ನು ವಿರಾಜಪೇಟೆ ನಗರದಲ್ಲಿಯೇ ಇರೋ ಸೆರಿನಿಟಿ ಹಾಲ್ ನಲ್ಲಿ ರಾತ್ರಿ ನಟಿ ರಶ್ಮಿಕಾ ಮಂದಣ್ಣಗೆ ವಿಚಾರಣೆ ನಡೆಸಿದ್ದು, ಐಟಿ ದಾಳಿಗೆ ನಟಿ ರಶ್ಮಿಕಾ ಮಂದಣ್ಣ ಕುಟುಂಬ ಸಂಪೂರ್ಣವಾಗಿ ಬಸವಳಿದು ಹೋಗಿದೆ. ಇನ್ನು ಜನವರಿ 15 ರಂದೇ ಐಟಿ ಅಧಿಕಾರಿಗಳ ತಂಡ ಸೆರಿನಿಟಿ ಹಾಲ್ ಗೆ ಭೇಟಿ ನೀಡಿ, ಯಾರಿಗೂ ಗೊತ್ತಾಗದಂತೆ ಬಂದು ಹೋಗಿತ್ತು. ಅಲ್ಲದೇ ನಾಲ್ಕು ಕಾರಿನಲ್ಲಿ ಆಗಮಿಸಿ ಸಿದ್ದತೆ ಮಾಡಿಕೊಂಡಿತ್ತು. ಅಲ್ಲದೇ ಕಲ್ಯಾಣ ಮಂಟಪದಲ್ಲಿ ಖಾಸಗಿ ಅವರ ಮದುವೆ ಕಾರ್ಯಕ್ರಮದಲ್ಲಿ ಗೌಪ್ಯವಾಗಿ ಪರಿಶೀಲನೆ ಮಾಡಿ ಹೋಗಿದ್ದ ಅಧಿಕಾರಿಗಳು, ನಂತರ ನಿನ್ನೆ ಬೆಳಿಗ್ಗೆ ಮನೆ ಹಾಗೂ ಸೆರಿನಿಟ್ ಹಾಲ್ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ್ದರು. ತೆಲಂಗಾಣ ಮತ್ತು ಆಂದ್ರ ಮೂಲದ ಐಟಿ ಅಧಿಕಾರಿಗಳಿಂದ ಈ ಐಟಿ ದಾಳಿ ನಡೆದಿದೆ.