ಕೂಗು ನಿಮ್ಮದು ಧ್ವನಿ ನಮ್ಮದು

ವಿಜಯನಗರದಲ್ಲಿ ಗ್ರಾಮವನ್ನೇ ಆಹುತಿ ಪಡೆದ ಮಳೆ

ಬಳ್ಳಾರಿ: ಒಂದೇ ಒಂದು ಮಳೆ ಇಡೀ ಗ್ರಾಮವನ್ನು ಆಹುತಿ ಪಡೆದುಕೊಂಡಿದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ನಾಗತಿ ಬಸಾಪುರ ಗ್ರಾಮದಲ್ಲಿ ಸಂಜೆ ಗಾಳಿ, ಮಳೆಯ ಆರ್ಭಟಕ್ಕೆ ನಲವತ್ತಕ್ಕೂ ಹೆಚ್ಚು ಮನೆಗಳ ಛಾವಣಿ ಹಾರಿ ಹೋಗಿದೆ. ಗಾಳಿಯ ಅಬ್ಬರಕ್ಕೆ ಮನೆಗಳ ಮೇಲೆ ಮರ ಮುರಿದು ಬಿದ್ದಿದೆ. ಕಣವಳ್ಳಿ ರೇಣುಕಮ್ಮ, ಖಾನಹಳ್ಳಿ ಭೀಮಮ್ಮ, ಹೊಂಳಗಟ್ವಿ ಶಾಂತಮ್ಮ, ಮಡಿವಾಳ ಕೂಟ್ರಮ್ಮ, ಮಡಿವಾಳ ನೀಲಮ್ಮರವರ ಮನೆಯ ಛಾವಣಿಗಳು ಸಂಪೂರ್ಣ ಹಾರಿಹೋಗಿದ್ದು. ಮನೆಯಲ್ಲಿದ್ದ ಸಾಮಗ್ರಿಗಳು ನೀರಿನಲ್ಲಿ ತೊಯ್ದು ಹೋಗಿವೆ. 

ದಿನಸಿ ಸಾಮಗ್ರಿಗಳು ಮಳೆ ನೀರಿಗೆ ಸಿಲುಕಿ ಹಾಳಾಗಿವೆ. ಇಂತಹ ಭೀಕರ ಗಾಳಿ ಮಳೆಯನ್ನು ನಾನು ನೋಡಿರಲಿಲ್ಲ ಎನ್ನುತ್ತ ಗ್ರಾಮದ ಯುವಕ ದೇವರಾಜ ಗದ್ಗದಿತರಾದರು. ಇದೀಗ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ.

error: Content is protected !!