ಕೂಗು ನಿಮ್ಮದು ಧ್ವನಿ ನಮ್ಮದು

ರಸ್ತೆ ಗುಂಡಿಗೆ ಬಿದ್ದ ಕಿರುತೆರೆ ಕಲಾವಿದೆ, ಎನ್.ಆರ್ ಕಾಲೋನಿ ಬಳಿ ನಟಿ ಸುನೇತ್ರಾ ಸ್ಕೂಟರ್ ಅಪಘಾತ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗೆ ಬಿದ್ದು ಕಿರುತೆರೆ ಕಲಾವಿದೆಯೊಬ್ಬರು ಗಾಯಗೊಂಡಿದ್ದಾರೆ. ಹೌದು. ಕಿರುತೆರೆನಟಿ ಸುನೇತ್ರಾ ಪಂಡಿತ್ ಅವರ ಸ್ಕೂಟರ್ ಅಪಘಾತಕ್ಕೀಡಾಗಿದೆ. ಅವೈಜ್ಞಾನಿಕ ಹಂಪ್, ರಸ್ತೆಗುಂಡಿಯಿಂದಾಗಿ ನಟಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಇದೀಗ ತಲೆಗೆ ಏಟು ಬಿದ್ದಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ನಟಿ ಶೂಟಿಂಗ್ ಮುಗಿಸಿ ಮನೆಗೆ ಹೋಗ್ತಿದ್ದರು. ಈ ವೇಳೆ ಎನ್.ಆರ್ ಕಾಲೋನಿ 9ನೇ ಅಡ್ಡರಸ್ತೆಯಲ್ಲಿ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಸುನೇತ್ರಾ ಅವರನ್ನು ಕೂಡಲೇ ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ನಟಿ ಬಸವನಗುಡಿಯ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಬಗ್ಗೆ ಸ್ಥಳೀಯರು ಪ್ರತಿಕ್ರಿಯಿಸಿ, ಹೆಲ್ಮೆಟ್ ಹಾಕಿದ್ರೂ ಸುನೇತ್ರಾ ಅವರ ತಲೆಗೆ ಪೆಟ್ಟಾಗಿ ರಕ್ತ ಬರುತ್ತಿತ್ತು. ಇಲ್ಲಿ ಯಾವಾಗಲೂ ಅಪಘಾತ ಆಗುತ್ತಲೇ ಇರುತ್ತೆ. ಹಂಪ್ಸ್, ಗುಂಡಿಗಳಿಂದಲೇ ಇಲ್ಲಿ ಅಪಘಾತವಾಗ್ತಿದೆ. ಪಾಲಿಕೆಗೆ ಎಷ್ಟೇ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

error: Content is protected !!