ಟಗರುಗೆ ಬಹಿರಂಗ ಸವಾಲು | ಸಿದ್ದರಾಮಯ್ಯ ಓರ್ವ ಹುಚ್ಚ | ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದ್ದಾರೆ. ಉಪ ಚುನಾವಣೆಯಲ್ಲಿ 8 ಸೀಟು ಗೆಲ್ಲದಿದ್ರೆ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಡ್ತಿರಾ…? ನಾವು 8 ಸೀಟು ಗೆಲ್ಲದಿದ್ದರೇ ನಾನು ರಾಜೀನಾಮೆ ಕೊಡಲು ತರಾರು ಎಂದ ಈಶ್ವರಪ್ಪ, ಸಿದ್ದರಾಮಯ್ಯನವರಷ್ಟು ಸ್ವಾರ್ಥ ರಾಜಕಾರಣಿ ಮತ್ತೊಬ್ಬರಿಲ್ಲ. ಉಪ ಚುನಾವಣೆ ಬಳಿಕ ನಾನೇ ಸಿಎಂ ಅಂತ ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ಇದು ಹುಚ್ಚು ಅಂತ ಕರಿಯಬಹುದಲ್ಲ. ಸಿದ್ದರಾಮಯ್ಯನವರಿಗೆ ಹುಚ್ಚ ಅಂದ್ರೆ ಸಿಟ್ಟು ಬರುತ್ತೆ. ಆದ್ರೆ ಸಿದ್ದರಾಮಯ್ಯ ಒಬ್ಬ ಹುಚ್ಚ. ಜನ ನಿಮ್ಮ ಪಕ್ಷವನ್ನ ಈಗಾಗಲೇ ತಿರಸ್ಕರಿಸಿದ್ದಾರೆ. ಆದರೂ ಸಿದ್ದರಾಮಯ್ಯ ಹುಚ್ಚಿನಿಂದ ಹೊರ ಬಂದಿಲ್ಲ. ಕಾಂಗ್ರೆಸ್ ನಲ್ಲಿ ಎಷ್ಟು ಗುಂಪುಗಳಾಗಿವೆ. ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಿಗೆ ಯಾವೊಬ್ಬ ಮುಸ್ಲಿಂ ನಾಯಕರೂ ಪ್ರಚಾರಕ್ಕೆ ಹೋಗ್ತಿಲ್ಲ. ಹಿರಿಯ ಮುಖಂಡರನ್ನ ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುತ್ತಿಲ್ಲ ಅಂತ ಸಿದ್ದರಾಮಯ್ಯ ವಿರುದ್ಧಹೈ ಕಮಾಂಡ್ ಗೆ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಒಬ್ಬಂಟಿ ಎಂದು ಟಗರು ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.