ಕೂಗು ನಿಮ್ಮದು ಧ್ವನಿ ನಮ್ಮದು

ದೇವೆಗೌಡರ ಮಾತಿನ ಮರ್ಮ ಗೊತ್ತಿಲ್ಲಾ | ಮಾಜಿ ಪ್ರಧಾನಿಗೆ, ಸಿದ್ದರಾಮಯ್ಯ ಟಾಂಗ್

ದಾವಣಗೆರೆ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೇಳಿಕೆಯ ಮರ್ಮ ಗೊತ್ತಿಲ್ಲ ಎಂದು ದಾವಣಗೆರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸೋನಿಯಾ ಗಾಂಧಿ ಹೊಗಳಿದ್ದ ದೇವೇಗೌಡರಿಗೆ ಟಾಂಗ್ ನೀಡಿದ ಸಿದ್ದರಾಮಯ್ಯ, ತ್ಯಾಗ ಮಾಡಿರುವ ಸೋನಿಯಾ ಗಾಂಧಿ ಪವರ್ ಫುಲ್ ನಾಯಕಿ. ಯಾವ ಅರ್ಥದಲ್ಲಿ ದೇವೇಗೌಡರು ಹೇಳಿದ್ದಾರೋ ಗೊತ್ತಿಲ್ಲ ಎಂದರು. ಫಲಿತಾಂಶದ ಬಳಿಕ ಮತ್ತೆ ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಸ್ಪಷ್ಟವಾಗಿ ಹೇಳದ ಮಾಜಿ ಸಿಎಂ. ಉಪಚುನಾವಣೆಯಲ್ಲಿ ಕಾಂಗ್ರೆಸ್ ೧೨ ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಈ ಫಲಿತಾಂಶ ಬಂದರೆ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುತ್ತಾರೆ. ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದ ಸಿದ್ದು, ಮಹಾರಾಷ್ಟ್ರದಲ್ಲಿ ನೆರೆ ನಿರ್ಲ್ಯಕ್ಷಿಸಿದ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಉತ್ತರ ಕರ್ನಾಟಕದಲ್ಲು ಬಿಜೆಪಿಗೆ ಜನ ಪಾಠ ಕಲಿಸಲಿದ್ದಾರೆ.ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲುವುದು ಖಚಿತ. ನೆರೆ ಬಂದಾಗ ಬರದವರು ಈಗ ಬರುತ್ತಾರಾ…? ಚುನಾವಣೆಯಲ್ಲಿ ಬಿಜೆಪಿ ಯಥೇಚ್ಛವಾಗಿ ಹಣ ಖರ್ಚು ಮಾಡುತ್ತಿದೆ. ಒಪ್ಪಂದ ಮಾಡಿಕೊಂಡೇ ೧೭ ಶಾಸಕರನ್ನು ಬಿಜೆಪಿ ಸೆಳೆದದ್ದು. ಸಿಎಂ ಯಡಿಯೂರಪ್ಪ ಒಬ್ಬರೇ ಪ್ರಚಾರಕ್ಕೆ ಹೋಗ್ತಾರೆ. ಈ ಬಗ್ಗೆ ಯಾರೂ ಮಾತನಾಡಲ್ಲ, ಎಲ್ಲರೂ ಬಿಎಸ್ ವೈ ಜೊತೆಗೆ ಹೋಗ್ತಿದ್ದಾರಾ ? ಕಾಂಗ್ರೆಸ್ ನಲ್ಲಿ ಎಲ್ಲಾ ಹಿರಿಯ ಮುಖಂಡರು ಪ್ರಚಾರ ಮಾಡ್ತಿದ್ದಾರೆ. ಅಸಮಾಧಾನದ ಪ್ರಶ್ನೆಯೇ ನಮ್ಮಲ್ಲಿ ಇಲ್ಲ ಎಂದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಹಿರಿಯ ಮುಖಂಡರು ಒಂದೊಂದು ಕಡೆ ಪ್ರಚಾರ ಮಾಡ್ತಿದ್ದಾರೆ. ಎಲ್ಲರೂ ಆಯಾ ಸ್ಥಳಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಹಿರೇಕೆರೂರಿನಲ್ಲಿ ಬಿ.ಸಿ.ಪಾಟೀಲ್ ಸೋಲು ಖಚಿತ. ಬನ್ನಿಕೋಡ್ ಪ್ರಾಮಾಣಿಕ ವ್ಯಕ್ತಿ, ಈ ಬಾರಿ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.


error: Content is protected !!