ಕೂಗು ನಿಮ್ಮದು ಧ್ವನಿ ನಮ್ಮದು

ನಾನು ಮಳ್ಳನಲ್ಲಾ, ಲಕ್ಷ್ಮೀಯವರಂತೆ ಕೆಲಸ ತರುವ ಚತುರತೆ ನಮ್ಮಲ್ಲಿಲ್ಲಾ- ಹೆಬ್ಬಾಳಕರ್ ಗೆ ಕುಮಟಳ್ಳಿ ಟಾಂಗ್

ಅಥಣಿ: ಬಹಿರಂಗ ಚರ್ಚೆಗೆ ಬರುವಂತೆ ಲಕ್ಷ್ಮೀ ಹೆಬ್ಬಾಳಕರ ಸವಾಲಿನ ವಿಚಾರವಾಗಿ ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ‌ ಮಹೇಶ ಕುಮಟಳ್ಳಿ ಪ್ರತಿಕ್ರಿಯೆ ನೀಡಿದ್ದಾರೆ. ಅವರಿಗೆ ಅವರೇ ಸವಾಲು ಹಾಕಿಕೊಳ್ಳತ್ತಾರೆ, ತಾವೇ ಉತ್ತರವನ್ನು ಕೊಟ್ಟುಕೊಳ್ಳತ್ತಾರೆ. ಅವರ ಸವಾಲು, ಆರೋಪಗಳ ಬಗ್ಗೆ ನಾವು ಹೆಚ್ಚಿಗೆ ಮಾತನಾಡುವುದಿಲ್ಲ. ರಾಜಕೀಯವಾಗಿ ಏನೇ ಮಾತನಾಡಿದರು ಜಾಸ್ತಿ ಪ್ರತಿಕ್ರಿಯೆ ಕೊಡಲಾರೆ ಎಮನದಿರುವ ಕುಮಟಳ್ಳಿ, ಅವರಿಗೆ ಇದೊಂದು ಬಿಟ್ಟು ಬೇರೊಂದು ಅಜೆಂಡಾ ಇಲ್ಲ. ನಾವು ಎಲ್ಲಿ ಹೋದಲ್ಲಿ ಸ್ಥಿರ ಸರ್ಕಾರ ಮತ್ತು ನೀರಾವರಿ ಯೋಜನೆಗಳ ಬಗ್ಗೆ ಹೇಳತಿದಿವಿ. ಕಾಂಗ್ರೆಸ್ ಪ್ರಚಾರಕ್ಕೆ ಹೋದಲ್ಲಿ ಸಂತ್ರಸ್ತರು‌ ಕಣ್ಣೀರು ಹಾಕ್ತಿರುವ ವಿಚಾರ ಹೇಳ್ತಿದಾರೆ. ರಾಜಕೀಯವಾಗಿ ಚಿವುಟಿ ಅಳಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಅಳುವವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದೇವೆ ಎಂದ ಮಹೇಶ್ ಕುಮಟಳ್ಳಿ, ನಾನು ಮಳ್ಳನಲ್ಲ. ಆದರೆ ಲಕ್ಷ್ಮೀಯವರಂತೆ ಕೆಲಸ ತರುವಂತಹ ಚತುರತೆ ನಮ್ಮಲ್ಲಿ ಇಲ್ಲ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಗೆ ಟಾಂಗ್ ಕೊಟ್ರು.
error: Content is protected !!