ಸಿದ್ದರಾಮಯ್ಯ ಓರ್ವ ಬೊಗಳೆ ದಾಸ : ಡಿಸಿಎಂ ಗೋವಿಂದ ಕಾರಜೋಳ ಲೇವಡಿ.
ಅಥಣಿ: ಸಿದ್ದರಾಮಯ್ಯ ಓರ್ವ ಬೊಗಳೆ ದಾಸ ಎಂದು ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ. ಅಥಣಿಯಲ್ಲಿ ಮಾತನಾಡಿದ ಕಾರಜೋಳ, ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಏನು ಮಾಡಿದ್ದಾರೆ ಹೇಳಬೇಕು. ಕಾಂಗ್ರೆಸ್ ಜನರಿಗೆ ಮಾಡಿರುವ ಮೋಸಗಳಲ್ಲಿ ಸಿದ್ದರಾಮಯ್ಯ ಕೂಡ ಪಾಲುದಾರ. ಸಿದ್ದರಾಮಯ್ಯ ಕಾಲದಲ್ಲಿಯೂ ನೆರೆ, ಬರ ಬಂದಿತ್ತು. ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಸಿದ್ದರಾಮಯ್ಯ ಏನು ಮಾಡಿದ್ದಾರೆ ಎಂದು ಕಾರಜೋಳ ಪ್ರಶ್ನಿಸಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಒಬ್ಬರೇ ಇದ್ದರೂ ಪ್ರವಾಹ ಬಂದಾಗ ಓಡಾಡಿದ್ದಾರೆ. ಆದರೆ ಸಿದ್ದರಾಮಯ್ಯ ಅವರಿಗೆ ತಾವು ಸಿಎಂ ಆಗಿದ್ದಾಗ ಅಥಣಿ ನೆನಪಾಗಿರಲಿಲ್ಲ. ಈಗ ಉಪಚುನಾವಣೆ ಬಂದಾಗ ಅವರಿಗೆ ಅಥಣಿ ನೆನಪಾಗುತ್ತಿದೆ. ಕಾಂಗ್ರೆಸ್‌ನವರು ಅಂಬೇಡ್ಕರರು ತೀರಿಕೊಂಡಾಗ ಅಂತ್ಯಸಂಸ್ಕಾರ ಮಾಡಲು ೬ ಅಡಿ ಜಾಗ ಕೊಡಲಿಲ್ಲ. ಕಾಂಗ್ರೆಸ್‌ಗೆ ಅಂಬೇಡ್ಕರ, ಸಂವಿಧಾನ ಮತ್ತು ದಿನ ದಲಿತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಾಂಗ್ರೆಸ್ ಆ ನೈತಿಕತೆ ಕಳೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದ ಡಿಸಿಎಂ ಕಾರಜೋಳ, ಕಾಂಗ್ರೆಸ್‌ನವರು ಅಂದ್ರೆ ಬೊಗಳೆ ದಾಸರು. ಕಾಂಗ್ರೆಸ್‌ಗೆ ಈಗ ವೋಟ್ ಬ್ಯಾಂಕ್ ಉಳಿದಿಲ್ಲ. ಹೀಗಾಗಿ ಅವರು ಹತಾಶರಾಗಿದ್ದಾರೆ ಎಂದು ಲೇವಡಿ ಮಾಡಿದ್ರು. ಇನ್ನು ದಲಿತರು, ಅಲ್ಪಸಂಖ್ಯಾತರು ಕಾಂಗ್ರೆಸ್‌ನಿಂದ ದೂರು ಹೋಗಿದ್ದಾರೆ. ಇದರಿಂದ ಕಾಂಗ್ರೆಸ್ ಹುಚ್ಚಾಗಿ ಮೈ ಪರಚಿಕೊಳ್ತಾ ಇದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಂಗಿ ಹರಿದುಕೊಂಡ ಓಡಾಡುತ್ತೆ. ೧೨ ಕ್ಷೇತ್ರ ಗೆದ್ದರೆ ಸಿದ್ದರಾಮಯ್ಯರಿಗೆ ಒಂದು ತೊಲೆ ಬಂಗಾರ ನೀಡಿ ಸನ್ಮಾನ ಮಾಡ್ತೇವಿ. ಅಥಣಿಯಲ್ಲಿ ತೊಲೆ ಬಂಗಾರ ಹಾಕಿ ಅವರನ್ನು ಭರ್ಜರಿ ಮೆರವಣಿಗೆ ಮಾಡತೇವಿ. ಅಷ್ಟು ಕ್ಷೇತ್ರ ಗೆದ್ದು ತೋರಿಸಲಿ ನಾನು ಸವದಿ ಸೇರಿ ಸಿದ್ದರಾಮಯ್ಯ ಮೆರವಣಿಗೆ ಮಾಡತೇವಿ ಎಂದು ಇದೆ ಸಂದರ್ಭದಲ್ಲಿ ಸವಾಲ್ ಹಾಕಿದ್ರು.