ಕೂಗು ನಿಮ್ಮದು ಧ್ವನಿ ನಮ್ಮದು

ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡಲ್ಲ: ಬಸವರಾಜ್ ಬೊಮ್ಮಾಯಿ

ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿ ಸಂಪೂರ್ಣ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಕಂಡುಕೊಳ್ಳುತ್ತೇವೆ. ರಾಜ್ಯ ಸರ್ಕಾರ ಈ ಕೇಸ್‍ನಲ್ಲಿ ಯಾವುದೇ ಹಸ್ತಕ್ಷೇಪ ಮಾಡಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಪಾಟೀಲ್ ಆತ್ಮಹತ್ಯೆ ಅವರು 40 ಪಸೆಂಟ್ ಆರೋಪ ಮಾಡಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಂತೋಷ್ ಪಾಟೀಲ್ ಉಡುಪಿಯ ಲಾಡ್ಜ್‍ನಲ್ಲಿ ಶವ ಪತ್ತೆ ಆಗಿದೆ. ಈಗಾಗಲೇ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಎಲ್ಲಾ ರೀತಿಯ ತನಿಖೆ ಆಗುತ್ತದೆ. ಇದರ ಪ್ರಾಥಮಿಕ ವರದಿ ಏನು ಬರುತ್ತದೆ ಎನ್ನುವುದರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಈ ಸಾವಿನ ಹಿನ್ನೆಲೆ ಸಂಪೂರ್ಣವಾಗಿ ತನಿಖೆ ನಡೆಯುತ್ತದೆ ಎಂದು ಹೇಳಿದರು. ಪ್ರತಿಪಕ್ಷಗಳು ರಾಜೀನಾಮೆಗೆ ಒತ್ತಾಯಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಹಿಂದೆ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಆಗ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರಾ ಪ್ರಶ್ನಿಸಿದರು. ಈ ಕುರಿತು ತನಿಖೆ ನಡೆಸುತ್ತೇವೆ. ಇದರ ಸತ್ಯಾಂಶ ಹೊರಬರುತ್ತದೆ. ಅದಾದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಪೊಲೀಸ್ ಅಧಿಖಾರಿಗಳಿಗೆ ಕ್ರಮ ಕೈಗೊಳ್ಳಲು ಹೇಳಿದ್ದೇವೆ. ಸಂತೋಷ್ ಸಾವಿನ ಕುರಿತು ಕಾನೂನು ಬದ್ಧವಾಗಿ ಆಗಬೇಕು. ಪಾರದರ್ಶಕ ತನಿಖೆ ಆಗುತ್ತದೆ. ಗುತ್ತಿಗೆದಾರ ಸಂತೋಷ್ ಮಾಡಿದ್ದ ಆರೋಪವನ್ನು ಈಶ್ವರಪ್ಪ ಅವರು ಅಲ್ಲಗಳೆದಿದ್ದಾರೆ. ಅಷ್ಟೇ ಅಲ್ಲದೇ ಕೋಟ್‍ನಲ್ಲಿ ಕೇಸ್ ಹಾಕಿದ್ದಾರೆ. ಸಂತೋಷ್‍ಗೆ ನೋಟಿಸ್ ಹೋಗಿದೆ. ಇದೆಲ್ಲವನ್ನು ತನಿಖೆ ಸಂದರ್ಭದಲ್ಲಿ ಒಳಪಡುತ್ತದೆ. ಯಾವ ಸಂದರ್ಭದಲ್ಲಿ ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದು ತನಿಖೆಯಲ್ಲಿ ತಿಳಿಯುತ್ತದೆ ಎಂದು ಮಾಹಿತಿ ನೀಡಿದರು.

error: Content is protected !!